ಧರ್ಮಸ್ಥಳಕ್ಕೆ ಮೂಲ ಗದುಗಿನ ಭಾರತ?
Team Udayavani, May 23, 2018, 12:55 PM IST
ಬೆಳ್ತಂಗಡಿ: ಕವಿ ಕುಮಾರವ್ಯಾಸನ ವಂಶಸ್ಥರು ತಾಳೆಗರಿಗಳಲ್ಲಿ ಲೇಖೀಸಿರುವ ಕರ್ಣಾಟ ಭಾರತ ಕಥಾ ಮಂಜರಿ ಅಥವಾ ಗದುಗಿನ ಭಾರತ ಎನ್ನಲಾಗಿರುವ ತಾಡವೋಲೆ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮೂಲಪ್ರತಿ ಸಂರಕ್ಷಣೆಗಾಗಿ ನೀಡಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಇದು ಅಸಲಿಯೇ ಅಥವಾ ಮೂಲ ಪ್ರತಿ ಹೌದೇ, ಅಲ್ಲವೇ ಎನ್ನುವುದು ಪ್ರತಿಷ್ಠಾನದ ತಜ್ಞರು ಪರೀಕ್ಷಿಸಿದ ಬಳಿಕವಷ್ಟೇ ತಿಳಿದು ಬರಲಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕೋಳಿವಾಡದ, ಕವಿ ಕುಮಾರವ್ಯಾಸನ ಮೂಲ ವಂಶಸ್ಥರು ಎನ್ನಲಾದ ಅವಧೂತ ವೀರ ನಾರಾಯಣ ಪಾಟೀಲ್ ಹಾಗೂ ಚಂದ್ರಶೇಖರ ಡಿ. ಪಾಟೀಲ್ ತಮ್ಮ ಮೂಲ ನಿವಾಸದಲ್ಲಿದ್ದ ಈ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಡಾ| ಹೆಗ್ಗಡೆ ಅವರು ತಾಳೆಗರಿಗಳ ವೀಕ್ಷಣೆ ಮಾಡಿದ್ದಾರೆ.
ಆರು ತಿಂಗಳ ಕಾಲಾವಕಾಶ
ತಾಳೆಗರಿಗಳನ್ನು ಪೆಟ್ಟಿಗೆಯಲ್ಲಿಡಲಾಗಿದ್ದು, ಪ್ರತಿ ಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಅವುಗಳನ್ನು ಸಂರಕ್ಷಿಸಿ ಮತ್ತೆ ಹಿಂದಿರುಗಿಸಬೇಕಾಗಿದ್ದು, ಅಜೀರ್ಣಾ ವಸ್ಥೆಯಲ್ಲಿರುವುದರಿಂದ ಆರು ತಿಂಗಳ ಬಳಿಕ ಹಿಂದಿರುಗಿಸುವುದಾಗಿ ತಿಳಿಸಲಾಗಿದೆ. ತಾಳೆ ಗರಿಗಳು ಸುಮಾರು 700 ವರ್ಷಕ್ಕೂ ಹಿಂದಿನವಾಗಿದ್ದು, ಕವಿ ಕುಮಾರವ್ಯಾಸನೇ ಬರೆದಿರುವುದು ಎಂದು ವಂಶಸ್ಥರು ಹೇಳುತ್ತಿದ್ದಾರೆ. ಅದರೆ ನಿಖರವಾದ ಕಾಲಮಾನ ತಾಳೆ ಗರಿಗಳ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ. ಒಂದು ವೇಳೆ ಕುಮಾರವ್ಯಾಸನೇ ಬರೆದ ಮೂಲ ಕೃತಿಯೇ ಆಗಿದ್ದಲ್ಲಿ ಅಮೂಲ್ಯ ಕೃತಿಯೊಂದರ ಸಂರಕ್ಷಣೆ ನಡೆದಂತೆ ಆಗಲಿದೆ.
ಪ್ರತಿಷ್ಠಾನದಿಂದ ಉಚಿತ ಸಂರಕ್ಷಣೆ
ಧರ್ಮಸ್ಥಳದ ಪ್ರಾಚ್ಯ ವಿದ್ಯಾಸಂಸ್ಥೆ ಶ್ರೀ ಮಂಜು ನಾಥೇಶ್ವರ ಸಂಶೋಧನ ಪ್ರತಿಷ್ಠಾನದಲ್ಲಿ ಪ್ರಾಚೀನ ಸಂರಕ್ಷಣೆಯನ್ನು ಮಾಡಿ ಮತ್ತೆ ಹಿಂದಿರುಗಿಸ ಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೆಚ್ಚ ಗಳನ್ನು ಪಡೆಯಲಾಗುವುದಿಲ್ಲ. ಈಗಾಗಲೇ ಹಲವು ಅತ್ಯಮೂಲ್ಯ ಗ್ರಂಥಗಳನ್ನು ಇಲ್ಲಿ ಸಂರಕ್ಷಿಸಿ ಇರಿಸಲಾಗಿದೆ.
ಗದುಗಿನ ಭಾರತದ ಸಂರಕ್ಷಣೆ
ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ರಚಿಸಿರುವ ಕೃತಿಗಳಲ್ಲಿ ಪ್ರಸಿದ್ಧವಾದುದು ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂಬ ಇತರ ಹೆಸರುಗಳೂ ಇವೆ.
ಸುಮಾರು ಏಳುನೂರು ವರ್ಷಗಳ ಹಿಂದಿನ ಕೃತಿಯೆಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ತಾಳೆಗರಿ ಬರೆದಿರುವ ವರ್ಷವನ್ನು ಪರೀಕ್ಷೆಗೆ ಕಳುಹಿಸಿ ತಿಳಿಯಲಾಗುವುದು. ಕೃತಿಯನ್ನು ಶುಚಿಗೊಳಿಸುವುದು, ಸಂರಕ್ಷಣೆಯ ಕಾರ್ಯವನ್ನು ಪ್ರತಿಷ್ಠಾನದಿಂದ ನಡೆಸಿ, ಹಿಂದಿರುಗಿಸಲಾಗುತ್ತದೆ. 6 ತಿಂಗಳುಗಳ ಸಮಯಾವಕಾಶ ಕೋರಲಾಗಿದೆ.
-ಡಾ| ಎಸ್.ಆರ್. ವಿಘ್ನರಾಜ್, ಸಂಶೋಧನ ಪ್ರತಿಷ್ಠಾನದ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.