ಗುರುವಿನ ಮಾರ್ಗದರ್ಶನದಿಂದಲೇ ಸಾಧನೆ ಸುಲಭ 


Team Udayavani, May 23, 2018, 5:22 PM IST

23-may-22.jpg

ಅಮೀನಗಡ: ಜಗತ್ತಿನ ಪ್ರತಿಯೊಬ್ಬ ಸಾಧಕನಿಗೂ ಅವನ ಬೆನ್ನ ಹಿಂದೆ ಒಬ್ಬ ಶ್ರೇಷ್ಠ ಗುರುವಿದ್ದಾಗಲೇ ಸಾಧನೆ ಸಾಧ್ಯವಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ ಎಂದು ಬೆಳಗಾವಿ ಶೇಗುಣಸಿ ವಿರಕ್ತಮಠದ ಮಹಾಂತ ದೇವರು ಹೇಳಿದರು.

ಸಮೀಪದ ಗುಡೂರಿನಲ್ಲಿ 1990ರ ತಂಡದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ತಾಯಿಯ ನಂತರ ಗುರುವೇ ತಾಯಿ ತಂದೆಯಾಗಿ ಬದುಕು ರೂಪಿಸಿದ ಅನೇಕ ಉದಾಹರಣೆಗಳಿವೆ. ಜ್ಯೋತಿಬಾ ಫುಲೆಯವರ ಉದಾಹರಣೆ ನೀಡಿದ ಅವರು ಪಾಮರರನ್ನು ಪರಮಾತ್ಮನನ್ನಾಗಿಸಿದ ಶಕ್ತಿಯಿರುವುದು ಗುರುವಿನಲ್ಲೇ. ಗುರು ಕರುಣೆ, ಮಮತೆ, ದಯೆ, ಜ್ಞಾನಗಳನ್ನು ಹೊಂದಿರುವ ಕರುಣಾಮಯಮೂರ್ತಿ. 28 ವರ್ಷಗಳ ನಂತರವೂ ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಗುರುಗಳನ್ನು ನೆನೆಸಿಕೊಂಡು ಅವರನ್ನು ಸತ್ಕರಿಸುವುದರ ಮೂಲಕ ಗುರುಭಕ್ತಿಯನ್ನು ಮೆರೆಯುತ್ತಿರುವುದು ಇಂದಿನ ದಿನಗಳಲ್ಲಿ ಮಾದರಿ. ಇದೊಂದು ಪುಣ್ಯ ಕಾರ್ಯ. ಈ ಸಂಸ್ಕಾರ, ಸಂಸ್ಕೃತಿ ನಿಮ್ಮ ಮಕ್ಕಳಲ್ಲೂ ಬಿತ್ತಿರಿ. ಮಾತಾಪಿತೃ,ಗುರುದೈವ ಸಂಸ್ಕಾರ ಹೆಚ್ಚಾಗಲಿ ಎಂದರು.

ವಿದ್ಯಾರ್ಥಿಗಳ ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎ.ಎಸ್‌.ಗಂಜಿಹಾಳ, ಅಂದಿನ ವಿದ್ಯಾರ್ಥಿಗಳು ಇಂದು ಸಿಗುವುದು ಕಠಿಣವಾಗಿದೆ. ಅಂದಿನ ಗುರುಭಕ್ತಿಯೇ ಇಂದು ಈ ರೂಪದಲ್ಲಿ ಸಾಕಾರಗೊಳ್ಳುತ್ತಿರುವುದು ಸಾರ್ಥಕತೆ ತರುತ್ತದೆ ಎಂದರು.

ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ವೆಂಕಟೇಶ ಜಿತೂರಿ, ಇಷ್ಟು ವರ್ಷ ಗತಿಸಿದರೂ ಗುರುವಂದನೆ ಸಲ್ಲಿಸಬೇಕು. ಸ್ನೇಹ ಬಳಗ ಕೂಡಬೇಕು ಎಂದು ಸಂಘಟಿಸಿರುವುದು ಗುರುಗಳು ನೀಡಿದ ಉತ್ತಮ ಸಂಸ್ಕಾರವೇ ಕಾರಣ. ಈ ಸಂಸ್ಕಾರ ಇಂದಿನ ಶಾಲೆಗಳಲ್ಲಿರುವುದು ದೌರ್ಭಾಗ್ಯ. ಗುರುವಿಗೆ ಶಿಷ್ಯನಲ್ಲಿ ಪ್ರೀತಿಯಿಲ್ಲ, ಶಿಷ್ಯನಿಗೆ ಗುರುಭಕ್ತಿಯಿಲ್ಲ, ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗಳಾಗಿವೆ. ಇಂದಿನ ಈ ವಿದ್ಯಾರ್ಥಿಗಳ ಸಂಗಮ ಸಂಘಟನೆಗೊಂಡು, ಬಡ ಸ್ನೇಹಿತರ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವಂತಾಗಬೇಕು. ಅದಕ್ಕಾಗಿ ನಾನು ಪ್ರತಿ ವರ್ಷ 25 ಸಾವಿರ ರೂ.ಮೀಸಲಿಡುತ್ತೇನೆ ಎಂದರು.

ವಿಜಯಪುರ ಮಹಿಳಾ ವಿವಿ ಸೆನೆಟ್‌ ಸದಸ್ಯ ಎಂ.ಎಲ್‌. ಶಾಂತಗೇರಿ ಮಾತನಾಡಿ, ನಾವು ಇಂದು ಉತ್ತಮ ಸ್ಥಾನಗಳಲ್ಲಿರಬೇಕಾದರೆ, ಅಂದಿನ ಗುರುಗಳ ಶಿಕ್ಷಣದ ಕಳಕಳಿ. ನಮಗೆ ಕಲಿಸುತ್ತಿದ್ದ ಶಿಕ್ಷಣವೇ ಕಾರಣ ಎಂದರು. ಇದೇ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿ ಮಲ್ಲಿಕಾರ್ಜುನ ವಸ್ತ್ರದ ಹಾಗೂ ವಿಧ್ಯಾರ್ಥಿಗಳು ಅಂದಿನ ಶಿಕ್ಷಣ ಹಾಗೂ ತಮ್ಮ ಗುರು ಶಿಷ್ಯ ಸಂಬಂಧದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಎಸ್‌.ಆರ್‌. ಶಿರಕನಹಳ್ಳಿ, ಎಸ್‌. ಆರ್‌. ವಸ್ತ್ರದ, ಎ.ಎಸ್‌. ಗಂಜಿಹಾಳ, ಎ.ಎ.ಬದಿ, ಜಿ.ಕೆ. ವ್ಯಾಪಾರಿ, ಜಿ.ಎಂ. ಮೂಲಿಮನಿ, ಸಿ.ಜಿ. ಬಿದರಿ, ವಿ.ಎಂ. ಹಿರೇಮಠ, ಎಸ್‌.ಎಸ್‌. ನಗಾರಿ ಗುರುಗಳನ್ನು ಸನ್ಮಾನಿಸಲಾಯಿತು. ಪ್ರಭು ಮಾಲಗಿತ್ತಿಮಠ ಶ್ರೀಗಳ ಪರಿಚಯ ಮಾಡಿದರು. ಸುಮಿತ್ರಾ ಪತ್ತಾರ ಪ್ರಾರ್ಥಿಸಿದರು. ವೆಂಕಟೇಶ ಜಿತೂರಿ ಸ್ವಾಗತಿಸಿದರು. 

ಟಾಪ್ ನ್ಯೂಸ್

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.