![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, May 24, 2018, 6:00 AM IST
ಕುಂದಾಪುರ: 90 ಮನೆಗಳಿಗೆ ಒಂದೇ ಒಂದು ಸರಕಾರಿ ಬಾವಿ. ಒಂದು ಬೋರ್‌ವೆಲ್ ಕೊರೆಯಿಸಿದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ ಬಾವಿಗಳಿದ್ದರೂ, ಅದರಲ್ಲಿ ಹೆಚ್ಚಿನವು ಬತ್ತಿ ಹೋಗಿದೆ. ಇದು ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಭಗತ್‌ನಗರ ಹಾಗೂ ಖಾರ್ವಿಕೆರೆ ಗ್ರಾಮಸ್ಥರ ನೀರಿನ ಬವಣೆ.
ಬಾವಿ ವಾರದೊಳಗೆ ಬತ್ತುವ ಸಂಭವ
ಈ ಭಾಗದಲ್ಲಿ ಒಂದೆರಡು ಮಳೆಯಾಗಿದ್ದರೂ ನೀರಿನ ಸಮಸ್ಯೆ ತಪ್ಪಿಲ್ಲ. ಖಾರ್ವಿಕೆರೆಯಲ್ಲಿರುವ ಪಂಚಾಯತ್ ಅಧೀನದ ಒಂದು ಬಾವಿಯಿಂದ 25 ಸಾವಿರ ಲೀಟರ್ ನೀರಿನ ಸಾಮರ್ಥ್ಯವಿರುವ ಟ್ಯಾಂಕ್‌ಗೆ ಹರಿಸಲಾಗುತ್ತಿದೆ. ಇಲ್ಲಿಂದ ಹೆಚ್ಚೆಂದರೆ ಅರ್ಧ ಗಂಟೆ ನೀರು ಸಿಗುತ್ತದೆ. ಆ ಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಾರದೊಳಗೆ ಮಳೆಯಾಗದಿದ್ದರೆ ಅದು ಕೂಡ ಬತ್ತಿ ಹೋಗುವ ಸಂಭವವಿದೆ.
ಮನೆಗೆ 220 ಲೀಟರ್ ನೀರು
ಭಗತ್‌ನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್‌ನಲ್ಲಿ 25 ಸಾವಿರ ಲೀಟರ್ ನೀರಿನ ಸಾಮರ್ಥ್ಯವಿದ್ದರೂ, ಅದರಲ್ಲಿ ಕೇವಲ 20 ಸಾವಿರ ಲೀಟರ್ ನೀರು ಮಾತ್ರ ತುಂಬುತ್ತಿದೆ. ಇಲ್ಲಿರುವ 90 ಮನೆಗಳಿಗೆ ನಿತ್ಯ 220 ಲೀಟರ್ ನೀರು ಮಾತ್ರ ಸಿಗುತ್ತಿದೆ. ಅದು ಕೂಡ ಅರ್ಧ ಗಂಟೆ ಸಿಗುವ ನೀರಲ್ಲಿ ಕೆಲವರಿಗೆ 30 ಕೊಡ ನೀರು ಸಿಕ್ಕರೆ, ಇನ್ನೂ ಕೆಲವರಿಗೆ 10 ಕೊಡಪಾನ ಮಾತ್ರ ಸಿಗುತ್ತಿದೆ.
2 ದಿನಕ್ಕೆ 8 ಕೊಡ
ನೀರಿನ ಸಮಸ್ಯೆ ಗಂಭೀರವಿದೆಯೆಂದು ಪಂ.ಟ್ಯಾಂಕರ್ ನೀರಿನ ಪೂರೈಕೆಗೆ ಮುಂದಾಗಿದ್ದರೂ, 2 ದಿನಕ್ಕೊಮ್ಮೆ ಕೇವಲ 8 ಕೊಡ ನೀರು ಮಾತ್ರ ಸಿಗುತ್ತಿದೆ. ನಳ್ಳಿ ನೀರು ಅರ್ಧಗಂಟೆಗಿಂತ ಜಾಸ್ತಿ ಇರುವುದಿಲ್ಲ. ಟ್ಯಾಂಕರ್ ನೀರಿಂದ 8ಕ್ಕಿಂತ ಹೆಚ್ಚು ಕೊಡ ಸಿಗುತ್ತಿಲ್ಲ. ಇದು ಯಾವುದಕ್ಕೂ ಸಾಕಾಗುವುದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
ಟ್ಯಾಂಕರ್ ನೀರಿಗೆ ಭಾರೀ ಬೇಡಿಕೆ
ಪಂಚಾಯತ್‌ನಿಂದ ಕೊಡುವ ಅಲ್ಪ ಪ್ರಮಾಣದ ನೀರು ಸಾಕಾಗದೇ ಇರುವುದರಿಂದ ಈಗ ಖಾಸಗಿ ಟ್ಯಾಂಕರ್ ನೀರಿಗೆ ಭಾರೀ ಬೇಡಿಕೆಯಿದೆ. ಆದರೆ ಅದು ತುಂಬಾ ದುಬಾರಿಯೂ ಆಗುತ್ತಿದೆ. ಸಾವಿರ ಲೀಟರ್ ನೀರಿಗೆ 350 ರೂ. ವ್ಯಯಿಸಬೇಕಾಗಿದೆ.
ಬೋರ್‌ವೆಲ್‌ಗೆ ಪ್ರಯತ್ನ
ಬಾವಿ ಹಾಗೂ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ ಬೋರ್‌ವೆಲ್ ಕೊರೆಯಿಸಲು ತಾ.ಪಂ., ತಾಲೂಕು ಕಚೇರಿಗೆ ಪತ್ರ ಬರೆಯಲಾಗಿದೆ. ಚುನಾವಣೆ ನೀತಿ ಸಂಹಿತೆಯಿದ್ದುದರಿಂದ ಆಗಿರಲಿಲ್ಲ. ಈಗ ಆದ್ಯತೆ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು.
– ಪಾರ್ವತಿ, ಹೊಸಾಡು ಗ್ರಾ.ಪಂ. ಪಿಡಿಒ
ದುಡ್ಡುಕೊಟ್ಟು ನೀರು
ಟ್ಯಾಂಕರ್ ನೀರು 2 ದಿನಕ್ಕೊಮ್ಮೆ ಕೊಡುತ್ತಾರೆ. ಅದು ಕೂಡ ಬಂದರೆ ಬಂತು. ಪಂಚಾಯತ್‌ನಿಂದ ಕೊಡುವ ನಳ್ಳಿ ನೀರು ಕುಡಿಯಲು ಕೂಡ ಆಗುವುದಿಲ್ಲ. ಟ್ಯಾಂಕ್ ನೀರು ಕರೆಂಟ್ ಇಲ್ಲದಿದ್ದರೆ ಅದು ಕೂಡ ಸಿಗುವುದಿಲ್ಲ. ನಾವು ಕುಡಿಯುವ ನೀರಿಗೆ ದುಡ್ಡು ಕೊಟ್ಟು ತರಿಸುತ್ತಿದ್ದೇವೆ.
– ಪ್ರಕಾಶ್, ಖಾರ್ವಿಕೆರೆ ನಿವಾಸಿ
– ಪ್ರಶಾಂತ್ ಪಾದೆ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.