ಎಲೆಕ್ಷನ್‌ ಜಾತ್ರೆಯ ಕಲೆಕ್ಷನ್‌ ಕಥೆಗಳು


Team Udayavani, May 24, 2018, 12:30 AM IST

x-11.jpg

ಚುನಾವಣೆ ಸಮಯದಲ್ಲಿ ಮತದಾರರು ಒಂದಲ್ಲಾ ಒಂದು ಪಕ್ಷದ ಕಾರ್ಯಕರ್ತರಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಈಗ ಮಾಮೂಲಾಗಿದೆ. ತಮ್ಮ ಹೊಲಮನೆಯ ಎಲ್ಲ ಕೆಲಸಗಳನ್ನು ಬದಿಗಿಟ್ಟು ಚುನಾವಣಾ ಸುಗ್ಗಿಯಲ್ಲಿ ಮೈ ಮರೆಯುತ್ತಾರೆ. ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಒಂದಿಷ್ಟು ಬಿಳಿ ಬಟ್ಟೆ ಹೊಲಿಸಿಕೊಂಡು ಬೈಕನ್ನೋ  ಕಾರನ್ನೋ ಏರಿ ಪಟ್ಟಣಕ್ಕೆ ತೆರಳುವ ಈ ವ್ಯವಹಾರ ಕುಶಲಿಗಳು, ಪಟ್ಟಣಗಳಲ್ಲಿರುವ ಪಕ್ಷಗಳ ಕಚೇರಿಗಳಲ್ಲಿ ಕಾಣಿಸಿಕೊಂಡು ಮುಖಂಡರ ಗಮನ ಸೆಳೆಯುವಲ್ಲಿ ನಿರತರಾಗುತ್ತಾರೆ.

ಅದು ಬದಾಮಿ ಪಟ್ಟಣದ ಹೊರ ವಲಯದ ಪ್ರಸಿದ್ಧ ಹೊಟೇಲ್‌. ಹೊಟೇಲ್‌ ಎದುರಿನಲ್ಲಿ ಒಂದಿಷ್ಟು ಕಾರುಗಳು. ಅದರ ತುಂಬಾ ಬಿಳಿ ಬಟ್ಟೆ ಧರಿಸಿದವರು ದಂಡು ದಂಡಾಗಿ ಹೋಗಿ ಬಂದು ಮಾಡುತ್ತಿದ್ದರು. ಚುನಾವಣೆ ಘೋಷಣೆಯಾದ ದಿನದಿಂದಲೂ ಹೊಟೇಲ್‌ ತುಂಬಾ ರಶೋ ರಶೋ. ಬಹುತೇಕ ಎಲ್ಲ ಟೇಬಲ್ಲುಗಳೂ ಭರ್ತಿಯಾಗಿದ್ದವು. ಒಂದಿಷ್ಟು ಜನ ಗುಂಪು ಗುಂಪಾಗಿ ಮೆಟ್ಟಿಲು ಕಡೆ, ಹೊರಗಡೆ ಅಲ್ಲಲ್ಲಿ ನಿಂತು ಮಾತಾಡುತ್ತಿದ್ದರು. ನಾನು, ನನ್ನ ಗೆಳೆಯ ಕುಳಿತ ಟೇಬಲ್ಲಿನ ಪಕ್ಕದ ಟೇಬಲ್ಲಿನಲ್ಲಿ ಒಂದು ಗುಂಪು ಸಣ್ಣಗೆ ಜಗಳವನ್ನೇ ನಡೆಸಿತ್ತು. ಆ ಕಡೆ ಈ ಕಡೆ ಒಂದಿಬ್ಬರನ್ನು ಕೂಡಿಸಿಕೊಂಡು ನಡುವೆ ಪ್ರತಿಷ್ಠಾಪಿತ ಗೊಂಡಿದ್ದ ಕುಳ್ಳ ಯುವಕನೊಬ್ಬ ಸ್ಥಳೀಯ ಕಾಂಗ್ರೆಸ್‌ ಮುಖಂಡ ರೊಡನೆ ಜಗಳಕ್ಕಿಳಿದಿದ್ದ. ಜಗಳಕ್ಕೆ ಕಾರಣವಿಷ್ಟೆ: ಆತ ಕೂಡ ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ. ಆದರೆ, ಕಾಂಗ್ರೆಸ್‌ನವರ ಒತ್ತಾಯದಿಂದ ನಾಮಪತ್ರ ವಾಪಸ್‌ ಪಡೆದನಂತೆ.

ವಾಪಸ್‌ ಪಡೆದು ನಾಲ್ಕೈದು ದಿನಗಳು ಕಳೆದರೂ ಯಾವ ಕಾಂಗ್ರೆಸ್‌ ಮುಖಂಡರೂ ಮಾತಾಡಿಸುತ್ತಿಲ್ಲ. ಫೋನಿಗೂ ಸಿಗದೇ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಕಳೆದ ಹದಿನೈದು ದಿನಗಳಲ್ಲಿ ನಾಮಪತ್ರ ಸಲ್ಲಿಕೆ, ಪ್ರಚಾರ ಎಲ್ಲ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ದಿನಾಲೂ ನಾಲ್ಕೈದು ಜನರನ್ನು ಕರೆದುಕೊಂಡು ಓಡಾಡುತ್ತಿದ್ದೇನೆ. ಅವರೆಲ್ಲರಿಗೆ ಮಾಡಿದ ಖರ್ಚೇ ಹತ್ತಾರು ಸಾವಿರ ಆಗಿದೆ. ಹೊಟೇಲಿನ ರೂಮಿನ ಬಿಲ್ಲು ಬೇರೆ ಕಟ್ಟಿಲ್ಲ. ಯಾರಿಗೆ ಹೇಳ್ಳೋಣ ನಮ್ಮ ಪ್ರಾಬ್ಲಿಮ್ಮು ಎಂದು ಆತ ಒಂದೇ ಸಮನೇ ಅಲವತ್ತುಕೊಳ್ಳ ತೊಡಗಿದ್ದ. ಸ್ಥಳೀಯ ಮುಖಂಡ ಮೊಬೈಲ… ಮೇಲೆ ಹತ್ತಾರು ಬಾರಿ ಕುಕ್ಕಿದಂತೆ ಮಾಡಿ ಕಾಲ್‌ ಹೋಗ್ತಿಲ್ಲ ಅಂತ ಮತ್ತೆ ಜೇಬಿಗೆ ಹಾಕಿಕೊಂಡು ನಿನಗೆ ಯಾರು ನಾಮಪತ್ರ ವಾಪಸ್‌ ಮಾಡಲು ಹೇಳಿದರೋ ಅವರ ಹತ್ರಾನೆ ನಿನ್ನ ಸಂಕಟ ಹೇಳ್ಕೊ ಅಂದು ತನ್ನ ತಂಡದ ಜೊತೆ ಹೊರಗೆ ಹೋದ.

ನನ್ನ ಪಕ್ಕದಲ್ಲಿ ಕುಳಿತಿದ್ದ ಪತ್ರಕರ್ತ ಮಿತ್ರರು “ನಿಜ ಹೇಳ ಬೇಕಂದ್ರೆ ಅವನು ಎಸ್ಟಿ ಸಮುದಾಯದವನು. ಇವನಿಂದ ಶ್ರೀರಾಮುಲುಗೆ ಹೊಡೆತ ಇತ್ತು. ಹೀಗಾಗಿ ಇವನ ನಾಮಪತ್ರ ವಾಪಸ್‌ ಕೊಡಿಸಿದವರು ಬಿಜೆಪಿಯವರು. ಅಲ್ಲೀನೂ ಹೀಗೆ ನಾಟಕವಾಡಿ ಒಂದಿಷ್ಟು ದುಡ್ಡು ಮಾಡ್ಕೊಂಡಿದ್ದಾನೆ. ಈಗ ಕಾಂಗ್ರೆಸ್ಸಿನವರೊಂದಿಗೆ ಆಟ ಹೂಡಿದ್ದಾನೆ’ ಎಂದು ನಕ್ಕರು. ನಮ್ಮ ಎದುರಿಗೆ ಕುಳಿತಿದ್ದ ವ್ಯಕ್ತಿ “”ಎಲಕ್ಸನ್‌ ಅಂದ್ರ ಬಿಜಿನೆಸ್ಸು ಅಂತ ತಿಳ್ಕೊಂಡು ಬಿಟ್ಟಾರರಿ ಈ ಮಕ್ಕಳು. ಒಂದಿಷ್ಟು ಮಂದಿ ಹೊಲ ಮನಿ ಕೆಲಸ ಬಿಟ್ಟು ಇದಕ್ಕಾ ನಿಂತ್‌ ಬಿಡ್ತಾರ” ಎಂದು ಬೈದ.

ಇನ್ನೊಂದು ಬದಿಯ ಟೇಬಲ್‌ ಮೇಲೆ ಆಗಷ್ಟೆ ರಾಜಕಾರಣಿ ಯೊಬ್ಬರ ಸಂಬಂಧಿಯೊಬ್ಬರು ಬಂದು ಕುಳಿತರು. ಅವರು ಬಂದು ಕುಳಿತದ್ದೆ ತಡ, ಎಲ್ಲೆಲ್ಲಿಂದಲೋ ಬಂದ ಜನರು ಅವರನ್ನು ಸುತ್ತುವರಿದರು. ಅವರು ಆವತ್ತಿನ ಪ್ರಚಾರದ ರಿಪೋರ್ಟ್‌ ತೆಗೆದುಕೊಳ್ಳುತ್ತಲೇ ಬ್ಯಾನರ್‌, ಫ್ಲೆಕ್ಸ್‌ ಪ್ರಿಂಟ್‌, ಜನರನ್ನು ಕರೆದುಕೊಂಡು ಬರಲು ವಾಹನಗಳ ಬಾಡಿಗೆ, ಬಂದ ಜನರಿಗೆ ಕೊಟ್ಟಿರುವ ಪೇಮೆಂಟು, ಪ್ರಚಾರಕ್ಕೆ ಹೊರಗಡೆಯಿಂದ ಬಂದಿರುವ ಕಾರ್ಯಕರ್ತರ ರೂಮು ಬಾಡಿಗೆ ಎಲ್ಲವನ್ನೂ ಸುತ್ತುವರಿದ ಜನರಿಗೆ ಹಂಚತೊಡಗಿದರು. ಇದು ದಿನ ನಿತ್ಯವೂ ಕಂಡ ಬರುವ ಚಿತ್ರಣವಾಗಿತ್ತು ಎಂದರೂ ತಪ್ಪಿಲ್ಲ.

 ಆ ಗುಂಪಿನಲ್ಲಿದ್ದ ಯುವಕನ ಕಡೆ ತೋರಿಸುತ್ತಾ ಗೆಳೆಯ ಹೇಳತೊಡಗಿದ. “”ಆತ ಕಾಲೇಜು ವಿದ್ಯಾರ್ಥಿ. ಜಿÇÉಾ ಪಂಚಾ ಯತ್‌ ಸದಸ್ಯರೊಬ್ಬರ ಮಗ. ಆತ ದೂರದ ಊರಲ್ಲಿ ವಿದ್ಯಾರ್ಥಿ ಯಾಗಿದ್ದರೂ ಕಾಲೇಜಿಗೆ ಎರಡು ತಿಂಗಳು ಚಕ್ಕರ್‌ ಹಾಕಿ ಕ್ಷೇತ್ರಕ್ಕೆ ಬಂದು ರಾಜಕಾರಣಿಗಳ ಹಿಂದೆ ಓಡಾಡುತ್ತಿ¨ªಾನೆ. ಆತನ ಅಪ್ಪನಿಗೆ ತಾನು ರಾಜ್ಯ ಗುರುತಿಸುವ ದೊಡ್ಡ ಮಟ್ಟದ ರಾಜಕಾರಣಿಯಾಗಬೇಕು ಅಂತ ಆಸೆ ಇತ್ತಂತೆ. ಆದರೆ, ಬದುಕು ಕಟ್ಟಿಕೊಳ್ಳುವ ಜಿದ್ದಾಜಿದ್ದಿಯಲ್ಲಿ ಅದು ಸಾಧ್ಯವಾಗಿರಲಿಲ್ಲ. 

ಆದರೆ, ಮಗನಾದರೂ ನಾನು ಇಷ್ಟಪಟ್ಟಂತೆ ರಾಜಕಾರಣಿಯಾಗಲಿ ಎಂಬುದು ಅವರ ಉದ್ದೇಶ. ಹಾಗಾಗಿ, ಮಗನಿಗಾಗಿ ಒಂದು ಬೆಲೆಬಾಳುವ ಬೈಕ್‌ ಕೊಡಿಸಿದ್ದಾರೆ. ಮಗ ಬೈಕಿನಲ್ಲಿ ಓಡಾಡಿದರೆ, ತಾವು ಕಾರಿನಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗಾಗಿ ಪ್ರಚಾರ ನಡೆಸುತ್ತಿದ್ದಾರೆ”  ಹೊಟೇಲಿನಿಂದ ಹೊರ ಬರುವಾಗ ಮೂಲೆಯಲ್ಲಿ ಒಂದಿಬ್ಬರ ಜೊತೆ ಕುಳಿತುಕೊಂಡಿದ್ದ ಒಬ್ಬ ವ್ಯಕ್ತಿಯನ್ನು ತೋರಿಸಿದ ಗೆಳೆಯ, ಈ ಚುನಾವಣೆಯಲ್ಲಿ ಅತಿ ಹೆಚ್ಚು ದುಡ್ಡು ಮಾಡಿ ಕೊಳ್ಳುವವರೆಂದರೆ ಇವರಂಥವರು ಎಂದು ಅವನ ಬಗ್ಗೆ ಹೇಳ ತೊಡಗಿದ. ಆತ ಮೊದಲು ಒಂದು  ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದನಂತೆ. ನಂತರ ವಯಸ್ಸು ಮಾಗುತ್ತಿದ್ದಂತೆ ಭಾಷಾಪರ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದು. ಒಂಚೂರು ಜಗಳಗಂಟ ಸ್ವಭಾವದವನಾದರೂ ಉತ್ತಮ ವಾಗ್ಮಿ. ಸುಳ್ಳನ್ನು ಸತ್ಯವೆಂತಲೂ,  ಸತ್ಯವನ್ನು ಸುಳ್ಳೆಂತಲೂ ನಂಬಿಸುವ ಚಾಕಚಕ್ಯತೆ ಯುಳ್ಳವನು. ಪ್ರತಿ ವರ್ಷ ಚುನಾವಣೆ ಬರುವ ಮುಂಚೆ ಒಂದು ಒಂದು ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಾನೆ. ನಮ್ಮ ಕಾರ್ಯಕರ್ತರು ಹಗಲಿರುಳು ನಿಮ್ಮ ಗೆಲುವಿಗಾಗಿ ಶ್ರಮಿಸುತ್ತಾರೆ. ಈ ಸಲ ನಿಮ್ಮದೇ ಗೆಲುವು ಚಿಂತೆ ಬಿಡಿ ಎಂದು ಉಬ್ಬಿಸುವ ಆತ, ಅವರಿಂದ ಒಂದಿಷ್ಟು ದುಡ್ಡು ಪೀಕುತ್ತಾನೆ. ಅವತ್ತಿನಿಂದಲೇ ಆತ ವಿರೋಧ ಪಕ್ಷದ ಅಭ್ಯರ್ಥಿಯ ಮಾನ ಕಳೆಯುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಇದರಿಂದ ಕಂಗೆಡುವ ವಿರೋಧಿ ಪಕ್ಷದ ಅಭ್ಯರ್ಥಿಯು ತನ್ನ ಹಿಂಬಾಲಕರ ಮೂಲಕ ಈತನನ್ನು ಕರೆಸಿಕೊಂಡು ಒಂದಿಷ್ಟು ದುಡ್ಡು ಕೊಟ್ಟು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಇಷ್ಟು ದಿನ ಆತ ಯಾರನ್ನು ಬೈದಿದ್ದನೋ ಅವರನ್ನು ಮುಂದಿನ ಪ್ರಚಾರದಲ್ಲಿ ಇಂದ್ರ ಚಂದ್ರ ಎಂದು ಹೊಗಳತೊಡಗುತ್ತಾನೆ. ಇಂಥ ತಂತ್ರ ಗಳಿಂದಲೇ ಆತ ಇಂದು ಕೋಟ್ಯಂತರ ರೂಪಾಯಿ ಬಾಳುತ್ತಾನೆ ಎಂದು ಗೆಳೆಯ ಅವನ ಕಥೆ ಹೇಳಿದ.

ಇನ್ನು ಹಳ್ಳಿಗಳಲ್ಲಿನ ಪ್ರಚಾರದ ಖದರ್ರೆà ಬೇರೆ. ಸಂಜೆಯಾ ಗುತ್ತಿದ್ದಂತೆ ಹಳ್ಳಿಗಳಲ್ಲಿ ಹರಟೆಗಟ್ಟೆಗಳಲ್ಲಿ ಚುನಾವಣೆ ಸುದ್ದಿಗಳು ಹರಳುಗಟ್ಟುತ್ತವೆ. ತಮ್ಮ ಹಿಂಬಾಲಕರೊಂದಿಗೆ ಹಳ್ಳಿಗೆ ಬರುವ ಪಕ್ಷಗಳ ಮುಖಂಡರು ಎದುರಾದವರನ್ನೆಲ್ಲ ಮಾತಿಗೆ ಎಳೆದು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಮೊದಲು ಬುಟ್ಟಿಗೆ ಹಾಕಿಕೊಳ್ಳುವುದು ಅಭ್ಯರ್ಥಿಯ ಸಮುದಾ ಯದ ಮುಖಂಡರನ್ನು. ನಂತರದಲ್ಲಿ ಯುವಕ ಸಂಘ ಮತ್ತು ಮಹಿಳಾ ಸಂಘಗಳ ಪದಾಧಿಕಾರಿಗಳನ್ನು. ಸಂಘದ ಸದಸ್ಯರೆಷ್ಟು, ಅವರು ಯಾವ ಸಮುದಾಯದವರು ಅನ್ನೋದರ ಮೇಲೆ ಆಯಾ ಸಂಘಕ್ಕೆ ಎಷ್ಟು ಹಣ ಕೊಡಬೇಕು ಅನ್ನೋದು ನಿರ್ಧಾರ ವಾಗುತ್ತದೆ. ಕೆಲವು ಜಾತಿ ಸಮುದಾಯಗಳ ಮುಖಂಡರು ತಮಗೆ ದುಡ್ಡು ಕೊಡದಿದ್ದರೂ ನಡೆಯುತ್ತದೆ. ನಮ್ಮ ಸಮು ದಾಯಕ್ಕೊಂದು ಸಮುದಾಯ ಭವನ ಕಟ್ಟಿಸಿಕೊಡಿ, ನಮ್ಮ ಸಮುದಾಯದ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿಕೊಡಿ ಎಂದು ಅಭ್ಯರ್ಥಿ ಗಳಿಗೆ ಗಂಟು ಬಿದ್ದು ಮಾಡಿಸಿಕೊಳ್ಳುತ್ತಾರೆ.

ಇಂದು ಹಳ್ಳಿಗೂ ಕೂಡ ಫ್ಲೆಕ್ಸ್‌, ಬ್ಯಾನರ್‌ ಪ್ರವೇಶ ಪಡೆದಿವೆ. ಕೆಲವರು ತಮ್ಮ ಪಕ್ಷದ ಪ್ರೀತಿಯನ್ನು ತೋರಿಸಿಕೊಳ್ಳಲು ತಮ್ಮ ಮನೆಗಳ ಮೇಲೆ  ತಾವು ಬೆಂಬಲಿಸುವ ಪಕ್ಷದ ಧ್ವಜವನ್ನೋ, ಬ್ಯಾನರ್‌ ಅನ್ನೋ ಕಟ್ಟಿರುತ್ತಾರೆ. ಆದರೆ ಅದಕ್ಕೆ ಚುನಾವಣೆ ಆಯೋಗದಿಂದ ಅನುಮತಿ ಪಡೆದಿರುವುದಿಲ್ಲ. ಇದು ಒಮ್ಮೊಮ್ಮೆ ವಿಪರೀತಕ್ಕೆ ಹೋಗಿ ಜಗಳಕ್ಕೆ ಕಾರಣವಾಗುತ್ತದೆ. ಆಗ ಊರ ಹಿರಿಯರು “”ಲೇ ತಮ್ಮಗೋಳ್ರೋ, ಮೂರ್‌ ದಿನದ ಚುನಾವಣೆಗೆ ಯಾಕ ಜಗಳಾಡ್ತಿರೋ, ನಾವೆಲ್ಲ ಒಂದೂರಾಗ ಕೂಡಿ ಬಾಳ ಬೇಕಾದವರು. ನಾವು ಇಲ್ಲೇ ಹುಟ್ಟಿ ಇಲ್ಲೇ ಸಾಯೋರು, ನಾಳಿ ಒಬ್ಬರಿಗೊಬ್ಬರು ಮುಖ ನೋಡಬೇಕಾಗತೈತಿ. ರಾಜಕಾರಣ ಮಾಡ್ರಿ, ಬ್ಯಾಡ ಅನ್ನಾಂಗಿಲ್ಲ. ಆದ್ರ ಮನಸ್ಸು ಸಣ್ಣದು ಮಾಡ್ಕೊàಬ್ಯಾಡ್ರಿ” ಎಂದು  ಬುದ್ಧಿ ಹೇಳಿ ಜಗಳ ಬಿಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಸಾಮಾನ್ಯವಾಗಿ ಹಳ್ಳಿಯಲ್ಲಿ ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷದ ಅಭ್ಯರ್ಥಿಗೆ ಪ್ರಚಾರ ಮಾಡುತ್ತಿದ್ದುದು ಕಂಡು ಬಂತು. ಇದರ ಬಗ್ಗೆ ಕೇಳಿದಾಗ ಹಳ್ಳಿಯವರ ಜಾಣತನ ಬೆರಗು ಮೂಡಿಸಿತು. “”ಎಲ್ಲರೂ ಒಬ್ಬರಿಗೆ ಓಟು ಹಾಕಿದರೆ ಎಡವಟ್ಟಾಗ್ತದ ಸರ್‌, ಯಾರು ಗೆಲ್ತಾರೆ ಅಂತ ಹೇಳಾಕ್ಕಾಗಲ್ಲ. ನಮ್ಮ ಕಡೆ ಕಾಂಗ್ರೆಸ್ಸು ಬಿಜೆಪಿ ಎರಡು ಪಕ್ಷಗಳು ಸ್ಟ್ರಾಂಗ್‌ ಅದಾವು. ಯಾವ್ಯಾವ ಪಕ್ಷಕ್ಕ ಯಾರ್ಯಾರು ಓಟು ಹಾಕಬೇಕು ಅಂತ ಮೊದಲೇ ನಿರ್ಧಾರ ಮಾಡ್ಕೊಂಡು ಆಯಾ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಳ್ತಾರ” ಅಂತಾರೆ ಲಕ್ಕಲಕಟ್ಟಿ ಗ್ರಾಮದ ಯುವಕರೊಬ್ಬ.  

ಒಟ್ಟಿನಲ್ಲಿ ಹೇಳ್ಳೋದಾದ್ರೆ ಚುನಾವಣೆ ಸಮಯದಲ್ಲಿ ಮತದಾ ರರು ಒಂದಲ್ಲಾ ಒಂದು ಪಕ್ಷದ ಕಾರ್ಯಕರ್ತರಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಈಗ ಮಾಮೂಲಾಗಿದೆ. ತಮ್ಮ ಹೊಲ ಮನೆಯ ಎಲ್ಲ ಕೆಲಸಗಳನ್ನು ಬದಿಗಿಟ್ಟು ಚುನಾವಣಾ ಸುಗ್ಗಿಯಲ್ಲಿ ಮೈ ಮರೆಯುತ್ತಾರೆ. ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಒಂದಿಷ್ಟು ಬಿಳಿ ಬಟ್ಟೆ ಹೊಲಿಸಿಕೊಂಡು ಬೈಕೋ, ಕಾರನ್ನೋ ಏರಿ ಪಟ್ಟಣಕ್ಕೆ ತೆರಳುವ ಈ ವ್ಯವಹಾರ ಕುಶಲಿಗಳು, ಪಟ್ಟಣಗಳಲ್ಲಿ ರುವ ಪಕ್ಷಗಳ ಕಚೇರಿಗಳಲ್ಲಿ ಕಾಣಿಸಿಕೊಂಡು ಮುಖಂಡರ ಗಮನ ಸೆಳೆಯುವಲ್ಲಿ ನಿರತರಾಗುತ್ತಾರೆ. ಚುನಾವಣೆ ಅನ್ನೋದು ಒಂದು ಜಾತ್ರೆ ಇದ್ದಂತೆ. ಹಣ ಮಾಡಿಕೊಳ್ಳುವ ಸುಗ್ಗಿ ಇದ್ದಂತೆ.

ಹನುಮಂತ ಹಾಲಿಗೇರಿ

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.