ರಾಜ್ಯ ಕ್ರಿಕೆಟ್ ಸಂಸ್ಥೆ ಖರ್ಚಿನಲ್ಲಿ ಶಿಸ್ತು ತರಲು ನಿರ್ಧಾರ
Team Udayavani, May 24, 2018, 6:00 AM IST
ಹೊಸದಿಲ್ಲಿ: ರಾಜ್ಯ ಸಂಸ್ಥೆಗಳ ಆತಿಥ್ಯ ವಹಿಸುವ ದೇಶಿ ಕ್ರಿಕೆಟ್ ಪಂದ್ಯಗಳ ಖರ್ಚಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಂದೊಂದು ರಾಜ್ಯಗಳು ಸಲ್ಲಿಸುವ ಬಿಲ್ನಲ್ಲಿ ಒಂದೊಂದು ಲೆಕ್ಕ ಕಂಡುಬಂದಿದೆ. ಆದ್ದರಿಂದ ಬಿಸಿಸಿಐ ಈ ರೀತಿಯ ವೆಚ್ಚ ಪಾವತಿಯಲ್ಲಿ ನಿರ್ದಿಷ್ಟ ಶಿಸ್ತು ತರಲು ನಿರ್ಧರಿಸಿದೆ.
ಎಲ್ಲ ರಾಜ್ಯಗಳಿಗೂ ದೇಶಿ ಪಂದ್ಯಗಳ ಆತಿಥ್ಯ ವಹಿಸುವುದಕ್ಕೆ ನಿರ್ದಿಷ್ಟ ಹಣಕಾಸು ಮಿತಿಯನ್ನು ಹೇರುವ ಸಾಧ್ಯತೆಯಿದೆ. ಈಗಾಗಲೇ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸುವ ರಾಜ್ಯ ಸಂಸ್ಥೆಗಳಿಗೆ ಹಣದ ಮಿತಿಯನ್ನು ನಿಗದಿಗೊಳಿಸಿದೆ. ಟೆಸ್ಟ್ ಪಂದ್ಯ ಆಯೋಜನೆಗೆ 25 ಲಕ್ಷ ರೂ., ಏಕದಿನ ಹಾಗೂ ಟಿ20 ಪಂದ್ಯಗಳ ಆಯೋಜನೆಗೆ ತಲಾ 15 ಲಕ್ಷ ರೂ. ನೀಡುತ್ತಿದೆ. ಇದೇ ಮಾದರಿ ದೇಶಿ ಕ್ರಿಕೆಟ್ ಆಯೋಜನೆಗೂ ಅನ್ವಯವಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.