ಅಪಾಯಕ್ಕೆಆಹ್ವಾನ ನೀಡುವ ಕೆರೆಕಟ್ಟೆ ರಸ್ತೆ
Team Udayavani, May 24, 2018, 3:17 PM IST
ಮುಳಬಾಗಿಲು: ತಾಲೂಕಿನ ಮಂಡಿಕಲ್ ಗ್ರಾಮದ ಕೆರೆ ಕಟ್ಟೆ ಮೇಲೆ ದಶಕಗಳ ಹಿಂದೆ ನಿರ್ಮಿಸಲಾಗಿರುವ ರಸ್ತೆಯಲ್ಲಿ ಮಣ್ಣು ಕುಸಿದು ಹಳ್ಳ ದಿನ್ನೆಗಳು ಉಂಟಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದರೂ ಸಂಬಂಧಿಸಿದ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್ ದೊಡ್ಡಕೆರೆ ಕಟ್ಟೆ ಮೇಲೆ ತಿರುವುಗಳಂತೆ ನಿರ್ಮಿಸಿರುವ ಕಿರಿದಾದ ರಸ್ತೆಯಲ್ಲಿ ಭಾರೀ ವಾಹನಗಳ ಅತಿಯಾಗಿ ಒಡಾಟದಿಂದ ಕಟ್ಟೆಯ ಇಕ್ಕೆಲಗಳಲ್ಲಿನ ಮಣ್ಣು ಕುಸಿದು ಹಳ್ಳಗಳು ಉಂಟಾಗಿವೆ. ಈ ರಸ್ತೆಯಲ್ಲಿ ನಿಧಾನವಾಗಿ ಸಂಚರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ವಾಹನ ಬಂದಾಗ ಮತ್ತೂಂದು ವಾಹನ ಸಾಕಷ್ಟು ಪರದಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ವಾಹನ ಅತೀ ವೇಗದಿಂದ ಸಂಚರಿಸಿದರೆ 20 ಅಡಿಗಳ ಆಳದ ಕೆರೆ ಅಥವಾ ಗದ್ದೆಗಳಲ್ಲಿ ಬೀಳುವ ಸಂಭವವಿದೆ.
ಆದರೂ, ಪ್ರತಿನಿತ್ಯ ಈ ಭಾಗದ ಅಗರಂ, ಕೊಲದೇವಿ, ಮಂಡಿಕಲ್ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಮುಳಬಾಗಿಲಿಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಹೋಗಬೇಕು. ಅದರೊಂದಿಗೆ ಖಾಸಗಿ ಶಾಲಾ ವಾಹನಗಳು ಈ ಭಾಗದ ಮಕ್ಕಳನ್ನು ಕರೆದುಕೊಂಡು ಮುಳಬಾಗಿಲಿಗೆ ಸಂಚರಿಸುತ್ತವೆ.
ಅಲ್ಲದೇ, ರಾಮಸಂದ್ರ ರಸ್ತೆಯಿಂದ ರಾ.ಹೆ.234ಕ್ಕೆ ಮುಡಿಯನೂರು ಸೇರುವ ಪ್ರಮುಖ ರಸ್ತೆಯು ಇದಾಗಿದೆ. ಪ್ರಮುಖವಾಗಿ ಮಂಡಿಕಲ್ ಶ್ರೀ ಚೌಡೇಶ್ವರಿ ದೇವಾಲಯ, ಕೊಲದೇವಿ ಗರುಡ ದೇವಾಲಯ, ಹರಪನಾಯಕನಹಳ್ಳಿ ಕೋಟೆ ಸ್ಥಳಗಳು ಇದೇ ಮಾರ್ಗದಲ್ಲಿ ಇರುವುದರಿಂದ ಪ್ರತಿನಿತ್ಯ ವಾಹನಗಳ ಸಂಚಾರ ಹೆಚ್ಚಾಗಿಯೇ ಇರುತ್ತದೆ.
ಈ ಕೆರೆ ಕಟ್ಟೆಯ ಮೇಲೆ ಹಲವಾರು ದಶಕಗಳ ಹಿಂದೆ ರಸ್ತೆ ನಿರ್ಮಿಸಿದ್ದರೂ ಉತ್ತಮವಾಗಿದ್ದ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಿರಂತರವಾಗಿ ಮರಳು ಲಾರಿಗಳು ರಾತ್ರಿ ವೇಳೆ ಓಡಾಟ ನಡೆಸಿದ್ದರಿಂದ ಕಿರಿದಾದ ಕಟ್ಟೆಯ ಮೇಲಿನ ಮಣ್ಣು ಕೆಳಗಡೆ ಕುಸಿದು ಇಂತಹ ದುಸ್ತಿತಿಗೆ ಕಾರಣವಾಗಿದೆ.
3 ವರ್ಷದ ಹಿಂದೆ ಡೆಕ್ಕನ್ ವಿದ್ಯಾ ಸಂಸ್ಥೆಯ ಬಸ್ ಎದುರಿಗೆ ಬಂದ ಮತ್ತೂಂದು ವಾಹನಕ್ಕೆ ಸ್ಥಳಾವಕಾಶ ನೀಡಲು ಪಕ್ಕಕ್ಕೆ ನಿಲ್ಲುತ್ತಿದ್ದಂತೆ ಎಡಗಡೆ ಕುಸಿದು ಹಳ್ಳಕ್ಕೆ ಬಿದ್ದಿತ್ತು. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದಿದ್ದರೂ 40-50 ಮಕ್ಕಳು ಗಾಯಗೊಂಡಿದ್ದರು. ಆಗ ಜನರ ಆಕ್ರೋಶಕ್ಕೆ ತಲ್ಲಣ ಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಪ್ರಯೋ ಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವರೇ ಎಂಬುದನ್ನು ಕಾದುನೋಡಬೇಕಾಗಿದೆ.
ಎಷ್ಟೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಮಾರ್ಗದಲ್ಲಿ ದೇವಾಲಯಕ್ಕೆ ಬಂದು ಹೋದರೂ ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗೆ ಯಾರೊಬ್ಬರೂ ಕಾಯಕಲ್ಪ ನೀಡದಿರುವುದು ವಾಹನಗಳ ಸಂಚಾರಕ್ಕೆ ತೊಂದರೆ ಯುಂಟಾಗಿದೆ. ಶೀಘ್ರವೇ ಕೆರೆ ಕಟ್ಟೆಯೊಂದಿಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ನಾಗರಾಜ್, ಮಂಡಿಕಲ್ ತಾಲೂಕಿನ ಮಂಡಿಕಲ್ ಕೆರೆ ಕಟ್ಟೆ ರಸ್ತೆಗೆ ಪ್ರಸ್ತುತ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ 6 ತಿಂಗಳೊಳಗೆ ಅನುದಾನ ಬಿಡುಗಡೆಯಾದರೆ ಕ್ರಿಯಾ ಯೋಜನೆ ತಯಾರಿಸಿ ಈ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೋಗೇಗೌಡ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.