ರಾಗಧನದ ಮೂರು ಸಂಗೀತ ಮಾಲಿಕೆ 

Team Udayavani, May 25, 2018, 6:00 AM IST

c-8.jpg

“ರಾಗಧನ’ದ ವತಿಯಿಂದ ವಸಂತಿ ರಾಮ ಭಟ್‌ ಅವರು ಪ್ರತಿ ತಿಂಗಳು ಆಯೋಜಿಸುತ್ತಿರುವ ಗೃಹ ಸಂಗೀತ ಮಾಲಿಕೆಯಲ್ಲಿ ಫೆಬ್ರವರಿಯ ಕಛೇರಿಯನ್ನು ನಡೆಸಿಕೊಟ್ಟವರು ಮುಂಬಯಿಯ ಪ್ರಭಾ ರಾವ್‌.

ರಾಗ, ತಾಳಗಳ ಮೇಲಿನ ಹಿಡಿತ, ಗಟ್ಟಿತನದ ನಿರೂಪಣೆ ಮತ್ತು ವರ್ಷಗಳ ಅನುಭವದ ಪಕ್ವತೆ ಅವರ ವೈಶಿಷ್ಟé. ಕಾನಡಾ ವರ್ಣ, ಕುಮುದ ಕ್ರಿಯ (ಅರ್ಧನಾರೀಶ್ವರಂ) ನಾಗಸ್ವರಾವಳಿ (ಶ್ರೀಪತೇ) ಲಲಿತ (ಹಿರಣ್ಮಯೀಂ) ಕನ್ನಡ ಗೌಳ (ಓರಜೂಪು) ಕೃತಿಗಳು ಬಿಗುತನವಿದ್ದರೂ ರಾಗಭಾವದೊಂದಿಗೆ ಮೂಡಿಬಂದವು. ರಾಗ ಮತ್ತು ಸ್ವರ ಕಲ್ಪನೆಗಳೊಂದಿಗೆ ಚೊಕ್ಕವಾಗಿ ವಿಸ್ತರಿಸುವ (ಹಂಸಾನಂದಿ) ಮೂಲಾಧಾರ, ಕರ್ನಾಟಕ ಶುದ್ಧ ಸಾವೇರಿ (ಏಕಾಂಭ್ರಂಶ ನಾಯಿಕಾ) ಮತ್ತು ಪ್ರಧಾನ ರಾಗ ವರಾಳಿ (ವಟಿ ಜನ್ಮಮಿದಿ) ಕೃತಿಗಳು ಸರಳ ಸುಂದರವಾಗಿ ಮೂಡಿಬಂದವು.ಷಣ್ಮುಖ ಪ್ರಿಯ ರಾಗಾಲಾಪನೆ ಮತ್ತು “ತಾನಂ’ ಹಾಡಿದ ಗಾಯಕಿ ಚತುರಸ್ರ ತ್ರಿಪುಟ ತಾಳದಲ್ಲಿ “ಹರೇ ರಾಮ ಗೋವಿಂದ ಮುರಾ|ರೇ ಮುಕುಂದ ಶೌರೇ ಮುರ| ಹರ’ ಎಂಬ ಪಲ್ಲವಿಯನ್ನು ಚುಟುಕಾಗಿ ಹಾಡಿ ರಾಗಮಾಲಿಕೆಯಲ್ಲಿ ಸ್ವರ ಕಲ್ಪನೆಗಳನ್ನು ನೀಡಿದರು. ಬೃಂದಾವನ ಸಾರಂಗಾ, ತಿಲಂಗ್‌, ಭಾಗೇಶ್ರೀ ರಾಗಗಳಲ್ಲಿ ಲಘು ಪ್ರಸ್ತುತಿಗಳೊಂದಿಗೆ ಕಛೇರಿ ಸಮಾಪನಗೊಂಡಿತು.ವಯಲಿನ್‌ನಲ್ಲಿ ವಸಂತಿ ರಾಮ ಭಟ್‌ ಚುರುಕಾದ ಬೆರಳುಗಾರಿಕೆಯನ್ನು ತೋರಿದರೆ, ಮೃದಂಗದಲ್ಲಿ ದೇವೇಶ್‌ ಭಟ್‌ ಔಚಿತ್ಯಪೂರ್ಣವಾದ ಲಯಗಾರಿಕೆಯನ್ನು ತೋರಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ನಡೆದ ವಸಂತಲಕ್ಷ್ಮೀ ಹೆಬ್ಟಾರ್‌ ಅವರ ಕಛೇರಿಯಲ್ಲಿ ಪರಂಪರಾಗತ ಚೌಕಟ್ಟನ್ನು ಕಾಯ್ದುಕೊಳ್ಳುವ ಎಚ್ಚರವಿತ್ತು; ಹೊಸ ಪ್ರಯೋಗಗಳನ್ನು ಸ್ವಾಗತಿಸುವ ನಾವೀನ್ಯವಿತ್ತು. ಸಾವೇರಿ ವರ್ಣ, ದ್ವಿಜಾವಂತಿ (ಅಖೀಲಾಂಡೇಶ್ವರಿ) ದೇವಗಾಂಧಾರಿ (ನಳಿನಜಾಂಡ) ಕೋಕಿಲ ಪ್ರಿಯ (ಕೋದಂಡ ರಾಮ) ಕೃತಿಗಳು ಹಿತವಾಗಿ ಮತ್ತು ಸೌಖ್ಯವಾಗಿ ಅರಳಿಕೊಂಡವು. ಭಾವಶುದ್ಧವಾದ ರಾಗ ವಿಸ್ತಾರ, ನೆರವಲ್‌, ಸ್ವರ ಕಲ್ಪನೆಗಳೊಂದಿಗೆ ನೀಡಲಾದ ಪ್ರಧಾನ ರಾಗ ಶಂಕರಾಭರಣ (ಸ್ವರ ರಾಗ ಸುಧಾ) ಉತ್ತಮವಾಗಿ ಮೂಡಿಬಂತು. ಅಭೇರಿ, ದೇಶ ಮುಂತಾದ ರಾಗಗಳ ದೇವರ ನಾಮಗಳೊಂದಿಗೆ ಕಛೇರಿ ಕೊನೆಗೊಂಡಿತು. ವಸಂತಿ ಭಟ್‌ ಹದವರಿತು ವಯಲಿನ್‌ ನುಡಿಸಿದರು. ಬಾಲಚಂದ್ರ ಭಾಗವತ ಮೃದಂಗ ಸಹವಾದನವನ್ನು ನೀಡಿದರು.

ಈ ಗೃಹ ಸಂಗೀತ ಮಾಲಿಕೆಯ ಮುಂದಿನ ಕಛೇರಿ ಎ.28ರಂದು ನಡೆಯಿತು. ನಡೆಸಿಕೊಟ್ಟವರು ಬೆಂಗಳೂರಿನ ಲಕ್ಷ್ಮೀ ನಾಗಾನಂದ.

ನವರಾಗ ಮಾಲಿಕಾ ವರ್ಣ, ಬೇಗಡೆ (ವಲ್ಲಭ ನಾಯಕಸ್ಯ) ಕಾಪಿ ನಾರಾಯಣ (ಸರಸ ಸಾಮದಾನ) ರೀತಿ ಗೌಳ (ಪರಿಪಾಲಯ ಮಾಂ). ಪುನ್ನಾಗ ವರಾಳಿ (ಕನಕಶೈಲ ವಿಹಾರಿಣಿ) ಮತ್ತು ವಿಳಂಬ ಕಾಲದಲ್ಲಿ ನೀಲಾಂಬರಿ (ಅಂಬಾ ನೀಲಾಯಕಾಕ್ಷಿ) ಕೃತಿಗಳಲ್ಲದೆ ವಿಸ್ತಾರಕ್ಕಾಗಿ ಆಯ್ದುಕೊಳ್ಳಲಾದ ರಾಗ ಅಮೃತವರ್ಷಿಣಿ (ಸುಧಾಮಯಿ). ಇದರಲ್ಲಿ ರಾಗವಿಸ್ತಾರ, ನೆರವಲ್‌, ಸ್ವರವಿನಿಕೆಗಳು ಮುಂತಾಗಿ ಎಲ್ಲಾ ಅಂಗಗಳಿದ್ದರೂ ಈ ಕೃತಿ ಶ್ರೋತೃಗಳನ್ನು ತಲಪುವಲ್ಲಿ ವಿಫ‌ಲವಾಯಿತು.ಯಮನ, ಬೃಂದಾವನ ಮತ್ತು ರಾಗಮಾಲಿಕೆಯಲ್ಲಿ ಲಘು ಪ್ರಸ್ತುತಿಗಳ ಸಹಿತ ಕಛೇರಿ ಸಂಪನ್ನಗೊಂಡಿತು.ತಾಳದ ಮೇಲಿನ ಹಿಡಿತ, ಶ್ರುತಿಯ ಅಚಲತೆಗಾಗಿ ನಿರಂತರ ಸಾಧನೆ ನಡೆಸಿದರೆ ಈ ಕಲಾವಿದೆ ಮುಂದೆ ಉತ್ತಮವಾಗಿ ಬೆಳಗಬಲ್ಲರು. ವಸಂತಿ ರಾಮ ಭಟ್‌ (ವಯಲಿನ್‌) ಮತ್ತು ದೇವೇಶ್‌ ಭಟ್‌ (ಮೃದಂಗ) ಸಹವಾದಕರಾಗಿದ್ದರು.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.