ಕ್ರೇಜಿ ಕನಸು ಮತ್ತು ಮನಸು


Team Udayavani, May 25, 2018, 6:00 AM IST

c-26.jpg

ರವಿಚಂದ್ರನ್‌ ಅವರು ಅದೊಂದು ದಿನ ಇದ್ದಕ್ಕಿದ್ದಂತೆ “ರಾಜೇಂದ್ರ ಪೊನ್ನಪ್ಪ’ ಚಿತ್ರದ ಫ‌ಸ್ಟ್‌ ಲುಕ್‌ ಬಿಡುಗಡೆ ಮಾಡಬಹುದು ಎಂದು ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ. ಬಹುಶಃ ಮುಂದಿನ ವಾರ ಅವರ ಹುಟ್ಟುಹಬ್ಬದ (ಮೇ 30) ಸಂದರ್ಭದಲ್ಲಿ ಬಿಡುಗಡೆಯಾಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ರವಿಚಂದ್ರನ್‌ ಅವರು ತಮ್ಮ ಹೊಸ ಚಿತ್ರದ ಫೋಟೋಗಳನ್ನು ಬಿಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಖತ್‌ ಸರ್‌ಪ್ರೈಸ್‌ ಕೊಟ್ಟರು. ಬರೀ ಚಿತ್ರದ ಸ್ಟಿಲ್‌ಗ‌ಳಷ್ಟೇ ಅಲ್ಲ, ಚಿತ್ರದ ಕೆಲವು ಸಂಭಾಷಣೆಗಳನ್ನೂ ಹೊರಬಿಡುವ ಮೂಲಕ ಚಿತ್ರ ಹೇಗಿರುತ್ತದೆ ಮತ್ತು ಹೇಗಿರಬಹುದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

“ಚಿತ್ರದ ಫೋಟೋಗಳು ರೆಡಿ ಇತ್ತು. ಜೊತೆಗೆ ರಾಜ್ಯದಲ್ಲಿ ಪೊಲಿಟಿಕಲ್‌ ವಾತಾವರಣ ಬೇರೆ ಇತ್ತು. ಜನರಿಗೆ ಚಿತ್ರದ ಮೂಡ್‌ ಗೊತ್ತಾಗಲಿ ಅಂತ ಕೆಲವು ಫೋಟೋಗಳನ್ನ ಬಿಟ್ಟೆ. ಇದೊಂದು ತುಂಬಾ ರೆಸ್ಪಾನ್ಸಿಬಲ್‌ ಚಿತ್ರ. ಈಗಾಗಲೇ 50 ಪರ್ಸೆಂಟ್‌ ಚಿತ್ರೀಕರಣ ಆಗಿದೆ. ನವೆಂಬರ್‌ ಒಂದಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಹಾಗಂತ, ಈ ಚಿತ್ರಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಇದು ಪೊಲಿಟಿಕಲ್‌ ಸಿನಿಮಾ ಅಲ್ಲ. ಒಂದಿಷ್ಟು ಪೊಲಿಟಿಕಲ್‌ ಪಾತ್ರಗಳಿರುತ್ತವೆ. ಇದೊಂದು ತಂದೆ-ಮಗಳ ಕಥೆ. ಚಿತ್ರದಲ್ಲಿ ನಾನು ಕ್ರಿಮಿನಲ್‌ ಲಾಯರ್‌ ಆಗಿರುತ್ತೀನಿ. ಅಲ್ಲಿ ಬೇರೆ ಪಾತ್ರಗಳು ಬಂದು ಹೋಗುತ್ತವೆ’ ಎನ್ನುತ್ತಾರೆ ರವಿಚಂದ್ರನ್‌. “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಒಂದೊಳ್ಳೆಯ ಮೆಸೇಜ್‌ ಇದೆ ಎನ್ನುತ್ತಾರೆ ರವಿಚಂದ್ರನ್‌. 

“ಇದೊಂದು ಒಳ್ಳೆಯ ಮೆಸೇಜ್‌ ಇರುವ ಚಿತ್ರ. Beware of the Society ಅನ್ನೋಕ್ಕಿಂತ Be Aware of the Society ಅನ್ನೋದು ಈ ಚಿತ್ರ ಸಂದೇಶ. ಇತ್ತೀಚೆಗೆ ಮಕ್ಕಳ ಬಲಾತ್ಕಾರ ಹೆಚ್ಚಾಗ್ತಿದೆ. ಇದು ಮಕ್ಕಳಿಗೆ ಗೊತ್ತಿಲ್ಲ ಅಂತ ಆಗಬಾರದು. ಗೊತ್ತಿರಬೇಕು ಮತ್ತು ಗೊತ್ತಿದ್ದರೇ ಒಳ್ಳೆಯದು. ಗೊತ್ತಿಲ್ಲದಿದ್ದರೆ ಅವರೇ ಸಿಕ್ಕಿಹಾಕಿಕೊಳ್ತಾರೆ. ಒಬ್ಬ ತಂದೆ, ತಾಯಿಯಾದಾಗ, ಅವನ ಜವಾಬ್ದಾರಿ ಏನಾಗಬಹುದು? ಮಕ್ಕಳನ್ನ ಬೆಳೆಸುವಾಗ ತಾಯಿ ಪಾತ್ರ ಬೇರೆ, ತಂದೆ ಪಾತ್ರ ಬೇರೆ. ಇಲ್ಲಿ ಎರಡೂ ಒಂದೇ ಆದಾಗ, ಅವನು ಯೋಚನೆ ಮಾಡುವ ರೀತಿ ಹೇಗಿರುತ್ತದೆ, ಮಗಳನ್ನ ಹೇಗೆ ಬೆಳೆಸುತ್ತಾನೆ ಎನ್ನುವುದು ಚಿತ್ರದ ಕಥೆ. ಇದು ಒಂದು ಪಾರ್ಟು ಅಷ್ಟೇ. ಅದರ ಜೊತೆಗೆ ಇವನ ಲಾಯರ್‌ ಕಥೆಗಳು ಬೇರೆ ಇರುತ್ತವೆ. ಇವೆಲ್ಲಾ ಇಟ್ಟುಕೊಂಡು ಒಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ ರವಿಚಂದ್ರನ್‌.

ರವಿಚಂದ್ರನ್‌ ಅವರು ಹೇಳುವಂತೆ “ರಾಜೇಂದ್ರ ಪೊನ್ನಪ್ಪ’ ಅವರ ಹಳೆಯ ಚಿತ್ರಗಳ ತರಹ ಇರುತ್ತದಂತೆ. “ಈಗಲೂ ಅಭಿಮಾನಿಗಳು ಸಿಕ್ಕರೆ ನಿಮ್ಮ ತರಹ ಸಿನಿಮಾ ಮಾಡುತ್ತಿಲ್ಲ ಅಂತಾರೆ. ಅವರಿಗೆ ಇಷ್ಟವಾಗುವಂತಹ ಸಿನಿಮಾ ಮಾಡೋಕೆ ಹೊರಟಿದ್ದೀನಿ. ತೀರಾ ಹಾಗೆ ಮಾಡುವುದಕ್ಕೂ ಆಗುವುದಿಲ್ಲ. ಒಂದು ಜವಾಬ್ದಾರಿ ಇದೆ. ಅಭಿಮಾನಿಗಳು ಕೊಟ್ಟಿರುವ ಸ್ಥಾನಕ್ಕೆ ಸರಿಯಾಗಿ ಮನರಂಜನೆಯ ಜೊತೆಗೆ ಒಂದೊಳ್ಳೆಯ ಸಂದೇಶವನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೀನಿ’ ಎಂಬುದು ರವಿಚಂದ್ರನ್‌ ಅವರ ಅಭಿಪ್ರಾಯ.

“ರಾಜೇಂದ್ರ ಪೊನ್ನಪ್ಪ’ ಒಂದು ಕಮರ್ಷಿಯಲ್‌ ಚಿತ್ರವಾಗಿರುತ್ತದಂತೆ. ಅದಕ್ಕೆ ಕಾರಣ, ಜನರ ನಿರೀಕ್ಷೆ. “ಜನ ಈಗಲೂ “ಪ್ರೇಮ ಲೋಕ’, “ಅಂಜದ ಗಂಡು’, “ಯುದ್ಧ ಕಾಂಡ’ ರವಿಚಂದ್ರನ್‌ ನಿರೀಕ್ಷೆ ಮಾಡ್ತಾರೆ. ನನಗೆ ವಯಸ್ಸಾಗಿದೆ ಅಂತ ಜನ ಒಪ್ಪಲ್ಲ. ನಿಜ ಹೇಳ್ಬೇಕೆಂದರೆ, ನನ್ನ ಮನಸ್ಸಿಗೆ ಇನ್ನೂ ವಯಸ್ಸಾಗಿಲ್ಲ. ಆದರೆ, ಪಾತ್ರಗಳು ಬರೋಕೆ ಶುರುವಾಯ್ತು. ಸುದೀಪ್‌ ಬಂದು ತಂದೆ ಪಾತ್ರ ಮಾಡು ಅಂದ. ಚಿತ್ರರಂಗಕ್ಕೆ ತಂದೆ ಮಾಡಿ ಹೋದ. ಅದೇ ತರಹ ಮುಂದುವರೆಯಿತು. ಆ ಬಗ್ಗೆ ನನಗೇನು ಬೇಸರ ಇಲ್ಲ. ಅವರಿಗೆ ಅದರಿಂದ ಸಹಾಯವಾದರೆ ಆಗಲಿ. ಆದರೆ, ಜನರಿಗೆ ನಿರಾಶೆಯಾಗಬಾರದಲ್ವಾ? ಜನ ಇವತ್ತಿಗೂ ಎಲ್ಲಿ ಹೋದರೂ ಕೇಳುತ್ತಾರೆ. ಅದಕ್ಕೋಸ್ಕರ ನಾನು ಅವರಿಗೆ ಇಷ್ಟವಾಗುವ ಸಿನಿಮಾಗಳನ್ನ ಮಾಡೋಣ ಅಂತ ಮಾಡ್ತಿದ್ದೀನಿ. ತೀರಾ young ಅಲ್ಲದ, ತೀರಾ ಚಜಛಿಛ ಆಲ್ಲದ ಪಾತ್ರಗಳನ್ನು ನನ್ನ ನಿರ್ದೇಶನದ ಚಿತ್ರಗಳಲ್ಲಿ ಮಾಡ್ತಿ¤ದ್ದೀನಿ’ ಎಂಬ ಉತ್ತರ ಅವರಿಂದ ಬರುತ್ತದೆ.

ವಿಲನ್‌ ಪಾತ್ರ ಮಾಡು ಎಂದರೂ ನಾನು ರೆಡಿ: ಇನ್ನು ಅವರು ಶ್ರೇಯಸ್‌ ಅಭಿನಯದ “ಪಡ್ಡೆಹುಲಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. “ಕೆ. ಮಂಜು ನಮ್ಮ ರೆಗ್ಯುಲರ್‌ ನಿರ್ಮಾಪಕರು. ಅವರು ಬಂದು ಚಿತ್ರದಲ್ಲಿ ತಂದೆ ಪಾತ್ರ ಮಾಡಿ ಎಂದರು. ಬಂದಿದ್ದೀನಿ. ಮಾಡ್ತಿದ್ದೀನಿ. ಮಂಜು ಮಗನಿಗಾಗಿ ಮಾಡ್ತಿದ್ದೀನಿ. ಒಳ್ಳೇದಾದರೆ ಆಗಲಿ ಅಷ್ಟೇ’ ಎನ್ನುತ್ತಾರೆ ಅವರು. ಇದೊಂದೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಅವರು ಹಲವು ಚಿತ್ರಗಳಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಾನೀಗ ತಂದೆಯಾಗಿ ಕಾಣಿಸ್ತೀನಿ. ಎಷ್ಟೋ ಜನ ಬಂದು ಅವರಿಗೊಂದು ಸಪೋರ್ಟ್‌ ಆಗ್ತಿàನಿ ಅಂತ ಕರೀತಾರೆ. ನನ್ನ ಬಳಸಿಕೊಂಡರೆ ಉಪಯೋಗ ಆಗತ್ತೆ, ಬಳಸಿಕೊಳ್ಳದಿದ್ದರೆ ಇಲ್ಲ. ತಂದೆ ಅಂದರೆ ಅಶ್ವತ್ಥ್ ಅವರು ಮಾಡುತ್ತಿದ್ದ ಪಾತ್ರಗಳ ಸ್ಪಾಟ್‌ಗೆ ಹಾಕಿದರೆ ಪ್ರಯೋಜನವಿಲ್ಲ. ನನ್ನದೇ ಆದಂತಹ ಒಂದು ಇಮೇಜ್‌ ಇದೆ. ಅದನ್ನು ಇದಕ್ಕೆ ಬಳಸಿಕೊಳ್ಳೋದರ ಜೊತೆಗೆ, ಒಂದಿಷ್ಟು ಒಳ್ಳೆಯ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡಿದರೆ, ಹೆಲ್ಪ್ ಆಗುತ್ತೆ. ನನಗೆ ಅದೇ ಮಾಡಬೇಕು, ಇದೇ ಮಾಡಬೇಕು ಅಂತೇನಿಲ್ಲ. ನಾನು ಏನು ಕೊಟ್ಟರೂ ಮಾಡೋಕೆ ರೆಡಿಯಾಗಿದ್ದೀನಿ. ತಾತನ ಪಾತ್ರ ಕೊಟ್ಟರೂ ಓಕೆ. ನಾನು ಯಾವುದೇ ಕಟ್ಟುಪಾಡುಗಳನ್ನ ಹಾಕಿಕೊಂಡಿಲ್ಲ. ನಮ್ಮ ಕೈಲೂ ಏನೇನು ಮಾಡೋಕೆ ಆಗುತ್ತದೆ, ಅದನ್ನೆಲ್ಲಾ ಮಾಡೋಣ. ಈ ತರಹ ಎಲ್ಲರೂ ಮುಂದೆ ಬರಲ್ಲ. ಆದರೆ, ನಾನು ಒಬ್ಬ ಕಲಾವಿದ. ಒಬ್ಬ ಕಲಾವಿದ ಆದ್ಮೇಲೆ, ಅದು ಮಾಡಲ್ಲ, ಇದು ಮಾಡಲ್ಲ ಅನ್ನಬಾರದು. ನಾಳೆ ಯಾರಾದರೂ ಬಂದು ವಿಲನ್‌ ಪಾತ್ರ ಮಾಡು ಎಂದರೂ ನಾನು ರೆಡಿ. ಹೀರೋ ಇಮೇಜ್‌ಗೆ ನನ್ನ ಚಿತ್ರಗಳು ಇದ್ದೇ ಇದೆ. ಅಲ್ಲಿ ನನ್ನಿಷ್ಟದ ಪ್ರಕಾರ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ರವಿಚಂದ್ರನ್‌.

ಬೇರೆ ಚಿತ್ರಗಳಲ್ಲಿ ತಾವೊಬ್ಬ ವಿಧೇಯ ನಟ ಮಾತ್ರ ಎನ್ನುತ್ತಾರೆ ರವಿಚಂದ್ರನ್‌. “ನಾನು ಬೇರೆಯವರ ಸಿನಿಮಾಗಳಲ್ಲಿ ನಟಿಸುವಾಗ, ಏನು ಮಾತಾಡಿದರೂ ತಪ್ಪಾಗಿ ಕಾಣಿಸಬಹುದು. ಬೇರೆ ತರಹವೂ ಕಾಣಿಸಬಹುದು. ಆದರೆ, ಇಲ್ಲಿ ನಾನೊಬ್ಬ ನಟ ಅಷ್ಟೇ. Involvement ಇರುವುದಿಲ್ಲ. Interference ಅಂತೂ ಇರುವುದೇ ಇಲ್ಲ. ಎಲ್ಲವೂ ಅವರಿಗೆ ಬಿಟ್ಟಿದ್ದು. ಒಬ್ಬ ವಿಧೇಯ ನಟನ ತರಹ ಬರುತ್ತೀನಿ. ಪಾತ್ರದಲ್ಲಿ Involvement ಇರುತ್ತೆ. ಕಥೆಯಲ್ಲಿ ಇರಲ್ಲ. ಬೊಟ್ಟು ಇಡು ಅಂದ್ರೆ ಇಡ್ತೀನಿ. ತೆಗಿ ಅಂದರೆ ತೆಗೀತೀನಿ. ಅವರೇನಂದುಕೊಂಡಿದ್ದಾರೋ, ಅದನ್ನು ಮಾಡೋದಷ್ಟೇ ಕೆಲಸ. ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಮೆಷೀನ್‌ ತರಹ’ ಎಂದು ನಗುತ್ತಾರೆ ಅವರು.

ಆದರೂ ಎಲ್ಲೋ ಒಂದು ಕಡೆ ತಪ್ಪಾದಾಗ, ತಿದ್ದಬೇಕು ಎನಿಸುವುದಿಲ್ಲವಾ? “ಸಿನಿಮಾ ಚೆನ್ನಾಗಿ ಮಾಡಲಿಲ್ಲ ಎಂದರೆ ನನಗೆ ಕಷ್ಟವೇ. ಎಲ್ಲೋ ತಪ್ಪಾಗುತ್ತಿದೆ ಅಂತ ಗೊತ್ತಿರುತ್ತದೆ. ಬಟ್‌ ಮಾತಾಡುವ ಹಾಗಿಲ್ಲ. ಮಾತಾಡಿದರೆ, ಅದನ್ನು ಅರ್ಥವಾಗೋಕಿಂತ ಬೇಜಾರ್‌ ಮಾಡಿಕೊಳ್ಳುವುದೇ ಹೆಚ್ಚು. ನನಗೆ Involvement, ಅವರಿಗೆ Interference ಆಗುತ್ತದೆ. ದುಡ್ಡು ಹಾಕೋನು ನಾನು, ಸಿನಿಮಾ ತೆಗೆಯೋನು ನಾನು ಅಂತ ಅವರಿಗೂ ಜವಾಬ್ದಾರಿ ಇರುತ್ತೆ. ಅದರ ಮಧ್ಯೆ ಹೋದರೆ, ಗೊಂದಲ ಆಗುತ್ತೆ. ಅದರ ಬದಲು ಅವರಿಗೆ ಇಷ್ಟವಾಗುವ ಹಾಗೆ ಬಿಟ್ಟುಬಿಡೋದು ಬೆಸ್ಟು. ಅವರ ದುಡ್ಡಿಗೆ, ಅವರ ಪ್ರಾಡಕ್ಟ್ಗೆ ಅವರೇ ಜವಾಬ್ದಾರಿ. ಹೀಗಿರುವಾಗ ನಾನು ಮಧ್ಯೆ ಹೋದರೆ, Interference ಅಂತ ಆಗುತ್ತೆ. ಹಾಗಾಗಿ ನಾನು ಕೆಲಸ ಮಾಡಿ ಬರ್ತೀನಿ’ ಎಂದು ಮಾತು ಮುಗಿಸುತ್ತಾರೆ ರವಿಚಂದ್ರನ್‌.

 ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.