ಆಯುಷ್ಮಾನ್ ಭಾರತ್ ಯೋಜನೆ: ಅಗ್ಗ ದರದ ಚಿಕಿತ್ಸೆ
Team Udayavani, May 25, 2018, 6:00 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ್’ ಅಡಿಯಲ್ಲಿ ವಿವಿಧ ರೋಗ ಗಳನ್ನು ಒಳಗೊಂಡಂತೆ 1,354 ಪ್ಯಾಕೇಜ್ ಸೇರ್ಪ ಡೆಗೊಳಿಸಲಾಗಿದ್ದು, ಇದು ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳಿಗಿಂತ ಶೇ. 15ರಿಂದ 20 ಅಗ್ಗವಾಗಿರ ಲಿದೆ. ಹೀಗೆಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ನೀಡಿದ್ದಾರೆ.
ಹೃದಯ ರಕ್ತನಾಳದ ಬೈಪಾಸ್, ಮಂಡಿ ಚಿಕಿತ್ಸೆ ಮತ್ತು ಸ್ಟೆಂಟ್ ಅಳ ವಡಿಕೆ ಸಹಿತ ಹಲವು ಮಹತ್ವದ ಚಿಕಿತ್ಸೆಗಳು ಇದರಲ್ಲಿ ಒಳಗೊಂಡಿವೆ. ಆಥೋìಪೆಡಿಕ್ಸ್, ಕಾರ್ಡಿಯಾಲಜಿ, ಕ್ಯಾನ್ಸರ್ ಚಿಕಿತ್ಸೆ, ನ್ಯೂರೋ ಸರ್ಜರಿಯಂಥ 20 ಚಿಕಿತ್ಸೆಗಳಿಗೆ ದರ ನಿಗದಿ ಮಾಡಲಾಗಿದೆ ಎಂದೂ ಅವರು ತಿಳಿಸಿದರು. ಇದೇ ವೇಳೆ, ರಾಷ್ಟ್ರೀಯ ಸ್ವಾಸ್ಥ ವಿಮೆ ಯೋಜನೆ ಹಾಗೂ ಇತರ ಕೇಂದ್ರೀಯ ಆರೋಗ್ಯ ಯೋಜನೆ ಗಳನ್ನು ವಿಶ್ಲೇಷಿಸಿ ಪ್ಯಾಕೇಜ್ಗಳ ದರ ವನ್ನು ನಿಗದಿಸಲಾಗಿದೆ. ಅವುಗಳಿಗಿಂತಲೂ ಇದು ಶೇ. 15ರಿಂದ 20ರಷ್ಟು ಕಡಿಮೆಯಾಗಿರಲಿದೆ ಎಂದು ಆಯುಷ್ಮಾನ್ ಭಾರತ್ ಯೋಜನೆ ಸಿಇಒ ಇಂದು ಭೂಷಣ್ ಹೇಳಿದ್ದಾರೆ. ಈ ಸಂಬಂಧ 205 ಪುಟಗಳ ಕರಡು ಯೋಜನೆಯನ್ನು ರಾಜ್ಯಗಳಿಗೆ ನೀಡಲಾಗಿದೆ.
ಆ.15ರಂದು ಚಾಲನೆ?: ದೇಶದ ಬಡವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿರುವ ಆಯುಷ್ಮಾನ್ ಭಾರತ್ ಯೋಜನೆಯು ದೇಶದ 10 ಕೋಟಿ ಜನರಿಗೆ ನೆರವು ಒದಗಿಸಲಿದೆ. ಆಗಸ್ಟ್ 15ರಂದು ಪ್ರಧಾನಿ ಮೋದಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗಳಿಗೆ ಪ್ರೋತ್ಸಾಹಧನ: ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಆಸ್ಪತ್ರೆಗಳನ್ನು ವಿಮೆ ವ್ಯಾಪ್ತಿಯಲ್ಲಿ ತರಲು ಖಾಸಗಿ ಆಸ್ಪತ್ರೆಗಳಿಗೆ ಪ್ರೋತ್ಸಾಹಧನ ನೀಡಲೂ ಕೇಂದ್ರ ಸರಕಾರ ಯೋಜಿಸಿದೆ. ಪ್ರಾಥಮಿಕ ಹಂತದ ಪ್ರಮಾಣಪತ್ರ ಹೊಂದಿರುವ ಆಸ್ಪತ್ರೆಗಳಿಗೆ ಶೇ. 10 ಹಾಗೂ ಸುಧಾರಿತ ಹಂತದ ಪ್ರಮಾಣಪತ್ರ ಹೊಂದಿರುವ ಆಸ್ಪತ್ರೆ ಗಳಿಗೆ ಶೇ. 15ರಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ. ಹಿಂದುಳಿದ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ಶೇ. 10ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.