ಹಳಿಯಾಳದಲ್ಲಿ ಗೋ ವಧಾಲಯವಿಲ್ಲ ; ಸುನೀಲ್ ಹೆಗಡೆಗೆ ತಿರುಗೇಟು
Team Udayavani, May 25, 2018, 12:13 PM IST
ಹಳಿಯಾಳ: ಹಳಿಯಾಳದಲ್ಲಿ ಯಾವುದೇ ಗೋ ವಧಾಲಯ ಇಲ್ಲ, ಇಲ್ಲಿಯ ಚಿಕನ್ ಅಂಗಡಿದಾರರಿಗೆ ನಾವು ತೊಂದರೆ ಕೊಡಲ್ಲ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಶಾಸಕ ಸುನೀಲ್ ಹೆಗಡೆ ತಾಕತ್ತಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು ಚರ್ಚೆ ಮಾಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್ ತಳವಾರ ಸವಾಲು ಹಾಕಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಸುನೀಲ್ ಹೆಗಡೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ಪುರಸಭೆಯಲ್ಲಿ ಸದಸ್ಯರು ದಲಾಲಗಿರಿ ಮಾಡುತ್ತಿದ್ದಾರೆಂದು ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ, ಇದು ಸದಸ್ಯರಿಗೆ ಅವಮಾನ ಮಾಡಿದಂತಾಗಿದೆ ಎಂಂದು ಆರೋಪಿಸಿದರು.
2002ರಲ್ಲಿ ಪಪಂ ಅಧ್ಯಕ್ಷರಾಗಿದ್ದ ಸುನೀಲ್ ಹೆಗಡೆ ಎರಡೂವರೆ ವರ್ಷ ಅಧಿಕಾರ ಮಾಡಿ
ಬಳಿಕ ಪೂರ್ಣ ಅವ ಧಿ ಸದಸ್ಯರಾಗಿ ಇರದೆ ಅರ್ಧಕ್ಕೆ ರಾಜೀನಾಮೆ ನೀಡಿದ್ದರಿಂದ ಪುರಸಭೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದರು.
ಚುನಾವಣೆಯಲ್ಲಿ ಸೋತಿರುವ ಹಾಗೂ ಹಳಿಯಾಳ ಪಟ್ಟಣದಲ್ಲಿ ಕಡಿಮೆ ಮತ ಗಳಿಸಿರುವ ಅವರಿಗೆ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಇರದ ಹಿಂದುತ್ವ ಅಜೆಂಡಾ ಬಿಜೆಪಿಗೆ ಬಂದ ಮೇಲೆ ಬಂದಿದೆಯಾ? ಪೊಳ್ಳು ಹಿಂದುತ್ವದ ಡೊಂಬರಾಟ ಹಳಿಯಾಳದಲ್ಲಿ ನಡೆಯಲ್ಲ. ಮುಂದಿನ ಪುರಸಭೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ ಎಂದು ನುಡಿದರು.
ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮಾತನಾಡಿ ಗೋ, ದನದ ಮಾಂಸದ ಮಾರುಕಟ್ಟೆ ಸರ್ಕಾರಿ ಜಾಗೆಯಲ್ಲಿ ಇಲ್ಲ. ಖಾಸಗಿ ಜಾಗೆಯಲ್ಲಿ ಇರಬಹುದು. ಅದು ನಮ್ಮ ಗಮನಕ್ಕೆ ಇಲ್ಲ. ಇನ್ನು ಚಿಕನ್ ಅಂಗಡಿಗಳು ಹಲವಾರು ಬಿಜೆಪಿ ಮುಖಂಡರ ಒಡೆತನದ ಜಾಗೆಯಲ್ಲಿಯೇ ನಡೆಯುತ್ತಿದ್ದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕಾರ್ಯ ನಾವು ಮಾಡಲ್ಲ. ಚಿಕನ್ ಅಂಗಡಿಕಾರರಿಗೆ ಪ್ರತ್ಯೇಕ ಮಾರುಕಟ್ಟೆಗೆ ಕ್ರಿಯಾಯೋಜನೆ ಮಾಡಿದ್ದು ಸದ್ಯದಲ್ಲೇ ಆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹಾಗೂ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇನಾಯಿತುಲ್ಲಾ ಬೇಪಾರಿ ಮಾತನಾಡಿ ಪಟ್ಟಣದಲ್ಲಿ ಸರ್ಕಾರಿ ಸ್ಥಳದಲ್ಲಿ ಎಲ್ಲೂ ಗೋಮಾಂಸ ಮಾರುಕಟ್ಟೆ ಇಲ್ಲ. ಮೇದಾರಗಲ್ಲಿಯ ಹಿಂದಿನ ಕಸಾಯಿಗಲ್ಲಿಯ ರಸ್ತೆಯ ಮಧ್ಯೆ ಇರುವ ದನದ ಮಾಂಸ ಮಾರುಕಟ್ಟೆಯ ಕಟ್ಟಡ ಶತಮಾನಗಳಿಂದ ಇದ್ದು ಅದನ್ನು ತೆರವುಗೊಳಿಸುವ ಪ್ರಶ್ನೆàಯೇ ಇಲ್ಲ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ ಬೊಳಶೆಟ್ಟಿ, ನಾಮನಿರ್ದೇಶಿತ ಸದಸ್ಯ ಅನಿಲ ಫರ್ನಾಂಡಿಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.