ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಚಾರುಮುಡಿ

Team Udayavani, May 26, 2018, 5:25 AM IST

charumudi-25-5.jpg

ಬೆಳ್ತಂಗಡಿ: ಆಗಾಗ ಸುರಿಯುತ್ತಿರುವ ಮಳೆಗೆ ಹಸಿರ ಹೊದ್ದು ಮೈದುಂಬಿದೆ ಚಾರುಮುಡಿ. ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಾ ಹರಿಯುತ್ತಿದೆ ಝರಿ, ಈ ಸೊಬಗನ್ನು ಕಂಡು ಮನಸೋತ ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಾ ಸುಂದರ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಳೆಯಿಂದ ಚಾರುಮುಡಿ ಬೆಟ್ಟಗಳ ಹುಲ್ಲುಗಾವಲು ಚಿಗುರಿ ಹಸುರಿನಿಂದ ಕಂಗೊಳಿಸುತ್ತಿದೆ. ಪ್ರವಾಸಿಗರು ಈ ದೃಶ್ಯವನ್ನು ಕಣ್ತಂಬಿಕೊಳ್ಳುವ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ರಾ.ಹೆ. 234ರ ಬಂಟ್ವಾಳ – ವಿಲುಪುರಂ ವ್ಯಾಪ್ತಿಯಲ್ಲಿ ಬರುವ ಬೆಟ್ಟ ಪ್ರದೇಶ ಬಯಲು ಸೀಮೆ, ಕರಾವಳಿಗೆ ಸಂಪರ್ಕ ಕೊಂಡಿಯಂತಿದ್ದು, ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ಭಕ್ತರು ಚಾರುಮುಡಿ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪಾರ್ಕಿಂಗ್ ನಿಂದ ಸಮಸ್ಯೆ
ಶಿರಾಡಿ ಘಾಟಿ ಕಾಮಗಾರಿ ಪ್ರಯುಕ್ತ ನಿರ್ಬಂಧ ಹೇರಿರುವುದರಿಂದ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನಗಳನ್ನು ರಸ್ತೆಬದಿ ನಿಲ್ಲಿಸುವುದರಿಂದ ಆಗಮಿಸುವ ಇತರ ಆಗಲ ಕಿರಿದಾದ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಜಾಗವಿದ್ದು, ಅಲ್ಲಿ ವಾಹನ ನಿಲ್ಲಿಸಿದರೆ ಯಾರಿಗೂ ಸಮಸ್ಯೆ ಉಂಟಾಗುವುದಿಲ್ಲ. 

ನೀರಿನಲ್ಲಿ ಆಡುವಾಗ ಎಚ್ಚರಿಕೆ

ಇನ್ನೇನು ಮಳೆಗಾಲ ಆರಂಭಗೊಂಡು ಝರಿ, ತೊರೆ ತುಂಬಲಿದ್ದು, ಪ್ರವಾಸಿಗರು ನೀರಿನಲ್ಲಿ ಆಟವಾಡುವ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಕಲ್ಲುಗಳು ಜಾರಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಸೆಲ್ಫಿ ತೆಗೆಯುವಾಗ ಇರಲಿ ಎಚ್ಚರ 
ದೃಶ್ಯ ಸೆರೆಹಿಡಿಯುವಾಗ, ಸೆಲ್ಫಿ ತೆಗೆಯುವ ವೇಳೆ ಎಚ್ಚರ ವಹಿಸಬೇಕಾಗಿದೆ. ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಾಗುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಎತ್ತರದ ಕಟ್ಟೆಗಳಲ್ಲಿ ನಿಂತು ಪೋಟೋ ಕ್ಲಿಕ್ಕಿಸುವ ವೇಳೆ ಕಾಲು ಜಾರಿ ಬೀಳುವ ಸಾಧ್ಯತೆ ಇದೆ.

ಸಂಯಮ ಅಗತ್ಯ 
ವಾಹನ ಚಾಲನೆ ವೇಳೆಯೂ ರಸ್ತೆ ನಿಯಮ ಪಾಲನೆ ಮಾಡಬೇಕಿದೆ. ತಿರುವುಗಳು ಹೆಚ್ಚಾಗಿರುವ ಕಾರಣ ವಾಹನ ಸವಾರರು ಸಂಯಮದಿಂದ ವಾಹನ ಚಾಲನೆ ಮಾಡಬೇಕಿದೆ. ಓವರ್‌ ಟೇಕ್‌ ಮಾಡುವ ವೇಳೆಯೂ ಎಚ್ಚರ ವಹಿಸಬೇಕಿದೆ. ಸ್ವಲ್ಪ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಎಸೆಯದಿರಿ ಕಸ 
ಖಾದ್ಯ ಸವಿದು ಕಸ ಎಸೆಯುವುದರಿಂದ ಕಸದ ರಾಶಿ ಪ್ರಕೃತಿ ಸೌಂದರ್ಯ ಹಾಳು ಮಾಡುತ್ತಿದೆ. ಉತ್ತಮ ಪರಿಸರಕ್ಕಾಗಿ ಕಸ ಎಸೆಯದಿದ್ದಲ್ಲಿ ಉತ್ತಮ.

ಮಾರ್ಗಸೂಚಿ
ಬಂಟ್ವಾಳದಿಂದ ಉಜಿರೆ ಮಾರ್ಗ ಸಂಪರ್ಕಿಸುವ ರಾ.ಹೆ. 234ರಲ್ಲಿ ಚಾರುಮುಡಿ ಘಾಟಿಯಿದೆ. ರಸ್ತೆಯಲ್ಲಿ ಸುಮಾರು 12 ಹೇರ್‌ ಪಿನ್‌ ತಿರುವುಗಳಿವೆ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸುವ ರಸ್ತೆಯಲ್ಲಿ ಸಿಗುವ ಉಜಿರೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಚಾರ್ಮಾಡಿ ಗ್ರಾಮದಿಂದ ಘಾಟಿ ರಸ್ತೆ ಆರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ. ಚಿಕ್ಕಮಗಳೂರು,ಚಿತ್ರದುರ್ಗ, ಹಾಸನ, ತುಮಕೂರು, ಬೆಂಗಳೂರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಸಾವಿರಾರು ಜನ ಈ ಘಾಟಿ ಮೂಲಕ ಆಗಮಿಸುತ್ತಾರೆ.

ಪ್ರಕೃತಿ ಸೌಂದರ್ಯ ಅವಿಸ್ಮರಣೀಯ
ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆಂದು ಅಗಮಿಸಿದ್ದೇವೆ. ಜಲಪಾತ, ಹಸಿರು ಬೆಟ್ಟ ನೋಡಿ ಖುಷಿಯಾಯಿತು. ಕುಟುಂಬದವರು, ಮಕ್ಕಳು ನೋಡಿ ಆನಂದಿಸಿದ್ದಾರೆ. ಪ್ರಕೃ‌ತಿ ಸೌಂದರ್ಯ ಅವಿಸ್ಮರಣೀಯ.
– ಮಡಿವಾಳಪ್ಪ, ಉಪ್ಪಿನಬೆಟಗೇರಿ, ಧಾರವಾಡ

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ

Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ

1(1

Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !

1-vitla

Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.