ಬಿತ್ತನೆಗೆ 12 ಲಕ್ಷ ಬೀಜದುಂಡೆ ಸಿದ್ಧ
Team Udayavani, May 26, 2018, 5:19 AM IST
ಕೋಟ: ವಾತಾವರಣದ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಸ್ಯ ಸಂಕುಲದ ನಾಶ ಇದಕ್ಕೆಲ್ಲ ಕಾರಣ ಎನ್ನುವುದು ನಿಸ್ಸಂಶಯ. ಪರಿಹಾರೋಪಾಯವೆಂದರೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದು. ಇದಕ್ಕಾಗಿ ‘ಸಾಸ್ತಾನ ಮಿತ್ರರು’ ಸಂಘಟನೆ ಲಕ್ಷಾಂತರ ಬೀಜದುಂಡೆಗಳನ್ನು ತಯಾರಿಸಿದ್ದು, ಮಳೆಗಾಲದ ಆಗಮನಕ್ಕೆ ಕಾಯುತ್ತಿದೆ. ಸಮಾಜಮುಖೀ ಸೇವೆಗಳನ್ನು ಮಾಡುತ್ತಿರುವ ಈ ಸಂಘಟನೆ ಕಳೆದ ವರ್ಷ 15 ಸಾವಿರ ಬೀಜದುಂಡೆಗಳನ್ನು ತಯಾರಿಸಿ ನಾಟಿ ಮಾಡಿತ್ತು. ಈ ಬಾರಿ ಮಳೆಗಾಲಕ್ಕಾಗಿ ಕಳೆದ ಜೂನ್ ನಿಂದಲೇ ತಯಾರಿ ನಡೆಸಿದೆ. ಶಾಲೆ – ಕಾಲೇಜು, ಸ್ವಸಹಾಯ ಸಂಘ, ಸಾಮಾಜಿಕ ಸಂಘಟನೆಗಳ ಸದಸ್ಯರಿಗೆ ತರಬೇತಿ ನೀಡಿ ಅವರ ಮೂಲಕ 12 ಲಕ್ಷ ಸೀಡ್ ಬಾಲ್ ಗಳನ್ನು ತಯಾರಿಸಿದೆ. ಹುಣಸೆ, ರಾಮಫಲ, ಕದಂಬ, ಲಕ್ಷ್ಮಣ ಫಲ, ಹೊಂಗೆ, ತುಳಸಿ, ಅರಳಿ ಮುಂತಾದ ಬೀಜಗಳಿಂದ ಇವು ಸಿದ್ಧಗೊಂಡಿವೆ. ಇಷ್ಟೊಂದು ಸಂಖ್ಯೆಯಲ್ಲಿ ಸೀಡ್ ಬಾಲ್ ತಯಾರಿ ಪ್ರಾಯಃ ಪ್ರಥಮ.
ಹೆಚ್ಚಿನ ಬೇಡಿಕೆ
‘ಸಾಸ್ತಾನ ಮಿತ್ರ’ರ ಬೀಜದುಂಡೆ ಯೋಜನೆಯ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದು ಪ್ರಭಾವಿತರಾದ ಸಾಗರ, ತೀರ್ಥಹಳ್ಳಿ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಕಡೆಯ ಪರಿಸರ ಪ್ರೇಮಿಗಳು ಇವರಿಂದ ಸೀಡ್ ಬಾಲ್ ಗಳನ್ನು ಪಡೆಯುತ್ತಿದ್ದಾರೆ. ಶಿವಮೊಗ್ಗದ ಉತ್ತಿಷ್ಠ ಭಾರತ ಹಾಗೂ ಬಾಳ್ಕುದ್ರು ಮಠದವರು ‘ಸಾಸ್ತಾನ ಮಿತ್ರ’ರಿಗೆ ವಿವಿಧ ಗಿಡಮರಗಳ ಬೀಜಗಳನ್ನು ಸರಬರಾಜು ಮಾಡುತ್ತಾರೆ.
ಸೀಡ್ ಬಾಲ್ ತಯಾರಿ
ಮೂರು ಭಾಗ ಮಣ್ಣಿಗೆ ಒಂದು ಭಾಗ ಗೋಮೂತ್ರ, ಸೆಗಣಿ ಮಿಶ್ರಣ ಮಾಡಿ ಅದರೊಳಗೆ ಬೀಜ ಇರಿಸಿ ಉಂಡೆ ತಯಾರಿಸಲಾಗುತ್ತದೆ. ಇದು ಗಟ್ಟಿಯಾಗಲು ಸ್ವಲ್ಪ ಜೇಡಿಮಣ್ಣು ಬಳಸಲಾಗುತ್ತದೆ. ಇದನ್ನು ಒಂದೆರಡು ದಿನ ಬಿಸಿಲಲ್ಲಿ ಒಣಗಿಸಿದರೆ ಸೀಡ್ ಬಾಲ್ ಸಿದ್ಧಗೊಳ್ಳುತ್ತದೆ. ಮಳೆಗಾಲದಲ್ಲಿ ರಸ್ತೆಬದಿ, ಖಾಲಿ ಜಾಗ ಹಾಗೂ ಕಾಡಿನಲ್ಲಿ ಇದನ್ನು ಬಿತ್ತಲಾಗುತ್ತದೆ. ಈ ಬಾರಿಯ ಬಿತ್ತನೆ ಈಗಾಗಲೇ ಆರಂಭಗೊಂಡಿದೆ.
ಬೀಜದುಂಡೆ ಉಡುಗೊರೆ
ಶುಭ ಸಮಾರಂಭ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ಸೀಡ್ ಬಾಲ್ ನೀಡುವ ಸಂಪ್ರದಾಯವನ್ನು ಈ ಭಾಗದಲ್ಲಿ ‘ಸಾಸ್ತಾನ ಮಿತ್ರರು’ ಚಾಲ್ತಿಗೆ ತಂದಿದ್ದು, ಜನಪ್ರಿಯಗೊಂಡಿದೆ. ಲಕ್ಷಾಂತರ ಬೀಜದುಂಡೆಗಳು ಈಗಾಗಲೇ ಹೀಗೆ ವಿತರಣೆಯಾಗಿವೆ.
ಹಸುರು ಬೆಳೆಸುವ ಜಾಗೃತಿ ಮೂಡಿಸುವುದಕ್ಕಾಗಿ ಈ ಅಭಿಯಾನ ಆರಂಭಿಸಿದೆವು. ಈಗಾಗಲೇ 12 ಲಕ್ಷ ಬೀಜದುಂಡೆ ತಯಾರಿಸಿದ್ದೇವೆ. ಆಸಕ್ತರಿಗೆ ಇದನ್ನು ನೀಡುತ್ತೇವೆ, ಉಳಿದವುಗಳನ್ನು ನಾವೇ ಬಿತ್ತನೆ ಮಾಡುತ್ತೇವೆ. ಬಿತ್ತುವುದು ಮಾತ್ರ ಅಲ್ಲ, ಎಷ್ಟು ಮೊಳಕೆ ಒಡೆದು, ಬೆಳೆದಿವೆ ಎನ್ನುವುದನ್ನು ಗಮನಿಸುತ್ತಿರುತ್ತೇವೆ.
– ವಿನಯ್‌ಚಂದ್ರ ಸಾಸ್ತಾನ, ಮುಖ್ಯಸ್ಥರು – ಸಾಸ್ತಾನ ಮಿತ್ರರು ಸಂಘಟನೆ
— ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.