ಯೇನಪೊಯ ಕ್ಯಾಂಪಸಿನಲ್ಲಿ ಅಣಬೆಗಳ ದಾಖಲೀಕರಣ


Team Udayavani, May 26, 2018, 10:34 AM IST

26-may-2.jpg

ಮಹಾನಗರ : ಒಂದು ವಿಶಿಷ್ಟ ಪ್ರಯತ್ನ ನಡೆಸಿರುವ ಯೇನಪೊಯಾ ಡೀಮ್ಡ್ ಯೂನಿವರ್ಸಿಟಿಯು ತನ್ನ ದೇರಳಕಟ್ಟೆ ಕ್ಯಾಂಪಿಸ್ಸಿನಲ್ಲಿರುವ ಎಲ್ಲ ಅಣಬೆಗಳ ದಾಖಲೀಕರಣ ಮಾಡಿದೆ. ಆರು ತಿಂಗಳ ಅವಧಿಯಲ್ಲಿ ಯೇನಪೊಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಅರಳಿದ ಎಲ್ಲ ಅಣಬೆ ಪ್ರಬೇಧಗಳನ್ನು ಅಧ್ಯಯನ ನಡೆಸಿ ಅವುಗಳ ದಾಖಲೆಯನ್ನು ಮಾಡಲಾಗಿದ್ದು, ಅಣಬೆ ಮತ್ತು ಅವುಗಳ ಪ್ರಬೇಧಗಳ ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ.

ಇಂತಹ ಅಪೂರ್ವ ಮಾಹಿತಿಯನ್ನು ‘ಮ್ಯಾಕ್ರೊಫಂಗಲ್‌ ರಿಸೋರ್ಸಸ್‌ ಆಫ್‌ ಯೇನಪೊಯಾ ಯೂನಿವರ್ಸಿಟಿ’ ಎಂಬ ಕೃತಿಯ ಮೂಲಕ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯದ ಕುಲಾಧಿಪತಿ ಯೇನಪೊಯ ಅಬ್ದುಲ್ಲಾ ಕುಂಞ ಅವರು ಕ್ಯಾಂಪಸಿನಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕುಲಪತಿ ಡಾ|ಎಂ.ವಿಜಯ ಕುಮಾರ್‌, ರಿಜಿಸ್ಟ್ರಾರ್  ಡಾ|ಜಿ.ಶ್ರೀಶಕುಮಾರ್‌ ಮೆನನ್‌ ಮತ್ತಿತರರು ಉಪಸ್ಥಿತರಿದ್ದರು. ಈ ಕೃತಿ ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ|ಎಂ.ಅಬ್ದುಲ್‌ ರಹಿಮಾನ್‌ ಅವರಿಗೆ ಅರ್ಪಿತವಾಗಿದೆ. ಯೇನಪೊಯ ತನ್ನ 32 ಎಕರೆ ಕ್ಯಾಂಪಸ್‌ ಅನ್ನು ಪರಿಸರ ಸ್ನೇಹಿವಲಯವನ್ನಾಗಿ ಮಾಡಲು ಶ್ರಮಿಸುತ್ತಿದ್ದು, ಹುಲ್ಲುಗಾವಲುಗಳು, ಅರ್ಬೊರೇಟಂ, ಬಿದಿರು ಪೊದೆಗಳು, ಔಷಧೀಯ ಸಸ್ಯ ತೋಟ, ಅಡಕೆ ತೋಟ, ಅಕೇಶಿಯ ತೋಪುಗಳಂತಹ ವಿವಿಧ ರೀತಿಯ ಸಸ್ಯ ಸಂಕುಲಗಳ ಮೂಲಕ ಕ್ಯಾಂಪಸ್ಸನ್ನು ಹಚ್ಚ ಹಸಿರಿನ ಭೂ ಪ್ರದೇಶವಾಗಿ ಮಾಡಲಾಗಿದೆ.

ಕ್ಯಾಂಪಸ್ಸಿನಲ್ಲಿ ದೊಡ್ಡದಾದ ಮಳೆನೀರು ಕೊಯ್ಲು ಕೊಳ, ಛಾವಣಿಯ ಮಳೆ ನೀರಿನ ಕೊಯ್ಲು, ತ್ಯಾಜ್ಯ ನೀರಿನ ಸಂಸ್ಕರಣ ಮತ್ತು ಮರುಬಳಕೆ ಸ್ಥಾವರ, ವರ್ಮಿ ಕಾಂಪೋಸ್ಟ್‌ ಘಟಕ ಮತ್ತು ಸೌರ ವಿದ್ಯುತ್‌ ಉತ್ಪಾದನಾ ಸೌಲಭ್ಯವನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯ ಈ ಕ್ಯಾಂಪಸಿನ ಪರಿಸರದ ನಿಯಮಿತ ಪರಿಶೋಧನೆ ನಡೆಸುವುದಲ್ಲದೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲು ಇಕೊ ಕ್ಲಬ್‌ ಅನ್ನು ಕೂಡ ಪ್ರೋತ್ಸಾಹಿಸುತ್ತದೆ. ಇಲ್ಲಿಯ ಚಟುವಟಿಕೆಗಳು ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಸಂರಕ್ಷಣೆ ಕಾಳಜಿ ಮೂಡಿ ಮುಂದಿನ ದಿನಗಳಲ್ಲಿ ಇವುಗಳ ರಾಯಭಾರಿಗಳು ಅವರಾಗಲಿ ಎಂಬುದು ಸಂಸ್ಥೆಯ ಆಶಯವಾಗಿದೆ.

60 ಜಾತಿಯ ಅಣಬೆ
ಪ್ರೊ|ಕೆ.ಆರ್‌.ಶ್ರೀಧರ್‌ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮ್ಯಾಕ್ರೋಫಂಗಲ್‌ ಅಧ್ಯಯನವನ್ನು ಕೈಗೊಂಡಿದ್ದು, ಡಾ| ಎನ್‌.ಸಿ. ಕರುಣ್‌ ಮತ್ತು ಡಾ|ಭಾಗ್ಯ ಬಿ. ಶರ್ಮಾ ಅವರು ಸಂಶೋಧನಾ ತಂಡದ ಸದಸ್ಯರು. 2016ರ ಜೂನ್‌-ನವೆಂಬರ್‌ ಅವಧಿಯಲ್ಲಿ ಅಧ್ಯಯನ ನಡೆಸಲಾಗಿದ್ದು, ಈ ಕ್ಯಾಂಪಸಿನಲ್ಲಿ ಕಂಡುಬಂದಿರುವ ಸುಮಾರು 60 ಜಾತಿಯ ಅಣಬೆಗಳಲ್ಲಿ ಸುಮಾರು 40 ಅಣಬೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪ್ರಕಟವಾದ 40 ಪ್ರಭೇದಗಳಲ್ಲಿ, 12 ಅಣಬೆ ಜಾತಿಗಳು ಖಾದ್ಯವಾಗಿದೆ.

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.