ಲವ್‌ ಕಡಿಮೆ; ಡವ್‌ ಜಾಸ್ತಿ


Team Udayavani, May 26, 2018, 11:07 AM IST

raja.jpg

ರಾಜ, ರಾಧೆಯನ್ನು ಮನಸಾರೆ ಪ್ರೀತಿಸುವುದೇನೋ ಹೌದು. ಆದರೆ, ಒಂದು ಯಡವಟ್ಟು ಮಾಡಿಕೊಂಡುಬಿಟ್ಟಿರುತ್ತಾನೆ. ಅವಳನ್ನು ಒಲಿಸಿಕೊಳ್ಳುವ ಸಲುವಾಗಿ, ತಾನೊಬ್ಬ ಮೆಕ್ಯಾನಿಕ್‌ ಎಂಬ ವಿಷಯವನ್ನು ಮುಚ್ಚಿಟ್ಟು, ಸಾಫ್ಟ್ವೇರ್‌ ಇಂಜಿನಿಯರ್‌ ಎಂದು ಸುಳ್ಳು ಹೇಳಿರುತ್ತಾನೆ. ಬರೀ ಪ್ರೀತಿಸುವ ಹುಡುಗಿಗಷ್ಟೇ ಅಲ್ಲ, ಹೆತ್ತ ತಾಯಿಗೂ ಸುಳ್ಳು ಹೇಳಿರುತ್ತಾನೆ. ಆದರೆ, ಅವನು ಕಟ್ಟಿರುವ ಸುಳ್ಳಿನ ಮಂಟಪ ಅವರಿಬ್ಬರ ಎದುರೇ ಕುಸಿಯುತ್ತದೆ.

ಬರೀ ಅಷ್ಟೇ ಅಲ್ಲ, ಅವರಿಬ್ಬರ ಎದುರಿಗೇ ಗಾಂಜ ಕೇಸ್‌ನಲ್ಲಿ ಪೊಲೀಸರ ವಶವಾಗುತ್ತಾನೆ. ಹಾಗಾದರೆ, ರಾಜನ ಕಥೆ ಮತ್ತು ಗತಿ ಏನು? “ರಾಜ ಲವ್ಸ್‌ ರಾಧೆ’ ಎಂಬ ಹೆಸರು ಮಾತ್ರ ಹೇಳಿದರೆ, ಇದೊಂದು ಪ್ರೇಮಕಥೆ ಎಂದು ಹೇಳಿಬಿಡಬಹುದು. ಇನ್ನು ಪೋಸ್ಟರ್‌ ಮಾತ್ರ ನೋಡಿದರೆ, ಇದೊಂದು ಕಾಮಿಡಿ ಸಿನಿಮಾ ಎಂದನಿಸಬಹುದು. “ರಾಜ ಲವ್ಸ್‌ ರಾಧೆ’ ಇವೆರೆಡರ ಮಿಶ್ರಣ ಎಂದರೆ ತಪ್ಪಿಲ್ಲ. ಇಲ್ಲಿ ಪ್ರೇಮದ ಜೊತೆಗೆ ಕಾಮಿಡಿ ಇದೆ.

ಇದು ಚಿತ್ರದ ಪ್ಲಸ್ಸೂ ಹೌದು, ಸಮಸ್ಯೆಯೂ ಹೌದು. ಏಕೆಂದರೆ, ಎರಡರ ಮಿಸಳಬಾಜಿಯಾಗಿರುವುದರಿಂದ, ಆ ಕಡೆ ಪ್ರೇಮದ ತೀವ್ರತೆಯೂ ಇಲ್ಲ, ಈ ಕಡೆ ಕಾಮಿಡಿಯು ಹೊಟ್ಟೆ ಹುಣ್ಣಾಗಿಸುವುದೂ ಇಲ್ಲ. ಈ ಚಿತ್ರದಿಂದ ಪ್ರೇಕ್ಷಕನಷ್ಟೇ ಅಲ್ಲ, ಚಿತ್ರರಂಗವೂ ತಿಳಿದುಕೊಳ್ಳಬೇಕಾದ ಪಾಠವೆಂದರೆ, ಹಾಸ್ಯನಟರು ಇದ್ದಾರೆ ಎಂದ ಮಾತ್ರಕ್ಕೆ ನಗು ಇರಲೇಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ, ಚಿತ್ರದಲ್ಲಿರುವ ಹಾಸ್ಯ ನಟರ ಸಂಖ್ಯೆ ನೋಡಿದರೆ ಗಾಬರಿಯಾಗುತ್ತದೆ.

ಸಾಧು ಕೋಕಿಲ, ರಂಗಾಯಣ ರಘು, ಟೆನ್ನಿಸ್‌ ಕೃಷ್ಣ ಹೊರತುಪಡಿಸಿದರೆ ಮಿಕ್ಕಂತೆ ಕುರಿ ಪ್ರತಾಪ್‌, ಪವನ್‌, ಮಿತ್ರ, ತಬಲಾ ನಾಣಿ, ಕುರಿ ರಂಗ, ಎಲ್ಲಕ್ಕಿಂತ ಹೆಚ್ಚಾಗಿ ರವಿಶಂಕರ್‌ … ಹೀಗೆ ನಗಿಸಬಹುದಾದ ದೊಡ್ಡ ಸಂಖ್ಯೆಯೇ ಇದೆ. ಆದರೆ, ನಗಿಸುವುದಕ್ಕೆ ಪ್ರಸಂಗಗಳೇ ಇಲ್ಲವಾದ್ದರಿಂದ, ಅವರ ಅಭಿನಯ ಸರ್ಕಸ್‌ನಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ನಿರ್ದೇಶಕ ರಾಜಶೇಖರ್‌ ಇನ್ನೂ ಸಾಕಷ್ಟು ಶ್ರಮ ಹಾಕಬೇಕಿತ್ತು.

ಇಷ್ಟೊಂದು ಹಾಸ್ಯನಟರನ್ನು ಒಂದೇ ಚಿತ್ರದಲ್ಲಿ ಸೇರಿಸುವಾಗ, ಅವರಿಗೆ ಸೂಕ್ತವಾದ ಪ್ರಸಂಗಗಳನ್ನು ಬರೆಯುವ ಮತ್ತು ನಗು ಉಕ್ಕಿಸುವ ಅವಶ್ಯಕತೆ ಹೆಚ್ಚಿತ್ತು. ಆದರೆ, ಅಂತಹ ಪ್ರಸಂಗಗಳೇ ಚಿತ್ರದಲ್ಲಿಲ್ಲ. ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದೇ ಒಂದು ಪ್ರಸಂಗ ನಗು ತರಿಸುವುದಿಲ್ಲ. ವಿಜಯ್‌ ಅವರ ಒಂದಿಷ್ಟು ಸಂಭಾಷಣೆಗಳು ನಗು ತರಿಸುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ಪ್ರೇಕ್ಷಕ ನಗುವುದಕ್ಕಿಂತ ಬೇಸರಗೊಳ್ಳುವುದೇ ಹೆಚ್ಚು.

ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಈ ಪೈಕಿ ವಿಜಯ್‌ ರಾಘವೇಂದ್ರ, ರವಿಶಂಕರ್‌, ಶೋಭರಾಜ್‌ ಮುಂತಾದವರು ಗಮನಸೆಳೆಯುತ್ತಾರೆ. ಗ್ಲಾಮರ್‌ಗೆ ಶುಭಾ ಪೂಂಜಾ ಇದ್ದಾರೆ. ಚಿದಾನಂದ್‌ ಛಾಯಾಗ್ರಹಣ ಅಲ್ಲಲ್ಲಿ ಕಣ್ಸೆಳೆಯುತ್ತದೆ. ವೀರ್‌ ಸಮರ್ಥ್ ಸಂಗೀತದಲ್ಲಿ ಒಂದೆರೆಡು ಹಾಡುಗಳು ಗುನುಗುವಂತಿವೆ.

ಚಿತ್ರ: ರಾಜ ಲವ್ಸ್‌ ರಾಧೆ
ನಿರ್ದೇಶನ: ರಾಜಶೇಖರ್‌
ನಿರ್ಮಾಣ: ಎಚ್‌.ಎಲ್‌.ಎನ್‌. ರಾಜ್‌
ತಾರಾಗಣ: ವಿಜಯ್‌ ರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್‌, ತಬಲಾ ನಾಣಿ, ಶೋಭರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.