ಕ್ರಿಮಿಕೀಟಗಳಿಂದ ರಕ್ಷಣೆಗೆ ನೈಸರ್ಗಿಕ ವಿಧಾನ ಬಳಸಿ
Team Udayavani, May 26, 2018, 3:09 PM IST
ಮನೆಯಲ್ಲಿ ಕ್ರಿಮಿಕೀಟಗಳ ಕಾಟ ಜಾಸ್ತಿ ಇದೆ ಎಂದು ರಾಸಾಯನಿಕ ವಸ್ತಗಳನ್ನು ಬಳಸಿ ನಿರ್ಮೂಲನೆ ಮಾಡಿದರೆ ಅದು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು.
ಇರುವೆ, ಜಿರಳೆ, ಹಲ್ಲಿ, ಸೊಳ್ಳೆಗಳನ್ನು ಕೊಲ್ಲಲು ಅಂಗಡಿಗಳಲ್ಲಿ ಸಿಗುವ ರಾಸಾಯನಿಕಗಳನ್ನು ತಂದು ಬಳಸಿದರೆ ಚಿಕ್ಕ ಮಕ್ಕಳಿದ್ದರಂತೂ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ನಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತಹ ನೈಸರ್ಗಿಕವಾದ ವಸ್ತಗಳನ್ನು ಬಳಸಿ ಕೀಟಗಳನ್ನು ಓಡಿಸಲು ಪ್ರಯತ್ನಿಸಬೇಕು.
ಹೀಗೆ ಮಾಡಿ
.ಸ್ನಾನ ಮಾಡುವ ಸೋಪ್ ಮತ್ತು ನೀರಿನ ಮಿಶ್ರಣವನ್ನು ಜಿರಳೆಗಳ ಮೇಲೆ ಸಿಂಪಡಿಸಿ.
.ಕರಿಬೇವು ಸೊಪ್ಪನ್ನು ಮನೆಯ ಮೂಲೆ ಮೂಲೆಗಳಲ್ಲಿ ಹಾಕುವುದರಿಂದ ಜಿರಳೆ, ಹಲ್ಲಿಗಳನ್ನು ನಿಯಂತ್ರಿಸಬಹುದು.
.ಮೆಣಸಿನ ಪುಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಪೇಸ್ಟ್ ಅನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಮನೆಯ ಮೂಲೆ, ಬಾಗಿಲು, ಕಿಟಕಿಗಳ ಸಂದಿಗಳಿಗೆ ಸಿಂಪಡಿಸಿ.
.ಅರಸಿ ಹುಡಿಗಳನ್ನು ಕೀಟಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿ ಹಾಕಿ.
. ಬೇಕಿಂಗ್ ಸೋಡಾ ಮತ್ತು ಸಕ್ಕರೆ ಮಿಶ್ರಣವನ್ನು ಸಿಂಪಡಿಸಿ.
. ಸಾಂಬ್ರಾಣಿ ಎಲೆಯನ್ನು ಉರಿಸುವ ಮೂಲಕ ಹೊಗೆ ಹಾಕುವುದು.
. ಲೋಬಾನ, ಗರಿಕೆ, ಬೇವಿನ ಸೊಪ್ಪುಗಳನ್ನು ಉರಿಸುವ ಮೂಲಕ ಹೊಗೆ ಹಾಕುವುದು.
. ಲಿಂಬೆ ರಸವನ್ನು ಕೀಟಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಸಿಂಪಡಿಸುವುದು.
.ಲಿಂಬೆ ಹಣ್ಣನ್ನು ತುಂಡರಿಸಿ ಲವಂಗವನ್ನು ಅದರಲ್ಲಿ ಚುಚ್ಚಿ ಇಡುವುದರಿಂದ ಸೊಳ್ಳೆಗಳ ಕಾಟ ಸ್ವಲ್ಪ ಕಡಿಮೆಯಾಗುವುದು.
.ಕರ್ಪೂರವನ್ನು ಉರಿಸುವುದು ಕೂಡ ಕೀಟಗಳ ತೊಂದರೆ ತಡೆಯಲು ಸಹಕಾರಿ.
.ನಿರ್ಗಲ ಗಿಡದ ಸೊಪ್ಪಿನ ರಸವನ್ನು ಸಿಂಪಡಿಸುವುದು.
ಜಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.