ಮೋದಿ ಜೀ, 40 ರೂ.ಗೆ ಪೆಟ್ರೋಲ್ ಸಿಗೋದು ಯಾವಾಗ: ಚಾಂಡಿ ಪ್ರಶ್ನೆ
Team Udayavani, May 26, 2018, 3:43 PM IST
ತಿರುವನಂತಪುರ : ಪ್ರಧಾನಿ ನರೇಂದ್ರ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿರುವ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರು ಟ್ವಿಟರ್ ಮೂಲಕ ಪ್ರಶ್ನೆಗಳ ಸರಮಾಲೆಯನ್ನು ಪ್ರಧಾನಿಯವರ ಉತ್ತರಕ್ಕಾಗಿ ಎಸೆದಿದ್ದಾರೆ.
“ಪ್ರಧಾನಿ ಮೋದಿಯವರೇ, ಈ ದೇಶದ ಜನರಿಗೆ ನೀವು ಕೊಟ್ಟಿರುವ ಭರವಸೆ ಪ್ರಕಾರ ಲೀಟರ್‌ಗೆ 40 ರೂ. ದರದಲ್ಲಿ ಪೆಟ್ರೋಲ್ ಸಿಗೋದು ಯಾವಾಗ?’ ಎಂದು ಚಾಂಡಿ ಪ್ರಶ್ನಿಸಿದ್ದಾರೆ.
”ಹಾಗೆಯೇ, ವಿದೇಶದಲ್ಲಿ ಕಪ್ಪು ಹಣ ಕೂಡಿ ಹಾಕಿರುವವರ ಪಟ್ಟಿ ಬಿಡುಗಡೆಯಾಗುವುದು ಯಾವಾಗ ? ನಿಮ್ಮ ಸರಕಾರದ ಅತೀ ಮುಖ್ಯ ಯೋಜನೆಗಳಾಗಿರುವ ಮೇಕ್ ಇನ್ ಇಂಡಿಯಾ, ಸ್ವಚ್ಚ ಭಾರತ ಅಭಿಯಾನ, ಲೋಕಪಾಲ ಮಸೂದೆ, ಭ್ರಷ್ಟಾಚಾರ ವಿರೋಧಿ ಚಳವಳಿಯ ಗತಿ ಈಗೇನಾಗಿದೆ ? ಎಂದು ದಯವಿಟ್ಟು ತಿಳಿಸಿ” ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಚಾಂಡಿ ಪ್ರಧಾನಿ ಮೋದಿ ಅವರನ್ನು ಕೇಳಿದ್ದಾರೆ.
“ನಿಮ್ಮ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿ ದೇಶದ ಎರಡನೇ ಅತ್ಯಂತ ಮಾಲಿನ್ಯ ಪೀಡಿತ ನಗರವೆಂದು ಈಚಿನ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ; ಆ ಬಗ್ಗೆ ಏನಂತೀರಿ?’ ಎಂದು ಪ್ರಶ್ನಿಸಿರುವ ಚಾಂಡಿ, ನೋಟು ಅಮಾನ್ಯದಿಂದ ದೇಶಕ್ಕೆ ಏನಾದರೂ ಪ್ರಯೋಜನವಾಗಿದೆಯೇ ಎಂಬುದನ್ನು ತಿಳಿಸಿ” ಎಂದು ಆಗ್ರಹಿಸಿದ್ದಾರೆ.
ಕೇರಳದ ಎರಡು ಬಾರಿಯ ಮುಖ್ಯಮಂತ್ರಿ ಆಗಿದ್ದ ಚಾಂಡಿ ಅವರು ಆಧಾರ್ ಡೇಟಾಬೇಸ್‌ನಿಂದ ಮಾಹಿತಿ ಸೋರಿಕೆಯಾಗಿರುವುದು ಹೇಗೆ ? ಉತ್ತರಿಸಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.