ಎಂಬತ್ತರ ಅಮೃತಾಭಿನಂದನೆ ಸುಭದ್ರಮ್ಮ ಮನ್ಸೂರು


Team Udayavani, May 27, 2018, 7:00 AM IST

2.jpg

ಹಾಡು, ನಟನೆ ಎರಡರಲ್ಲೂ ಸಾಧನೆಯ ಸಿದ್ಧಿ ಪಡೆದ ಗಾನಕೋಗಿಲೆ ಹಾಗೂ ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರರಿಗೆ ಈಗ ಎಂಬತ್ತು. ಆ ನಿಮಿತ್ತ ರಾಜ್ಯದ ಪ್ರತಿಷ್ಠಿತ ರಂಗತಂಡವಾದ ಬಳ್ಳಾರಿಯ ರಂಗತೋರಣವು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಇಂದು ಅವರಿಗೆ ಅಮೃತಾಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು; ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಸಂಗೀತ ಹಾಗೂ ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದ ಸುಭದ್ರಮ್ಮ ಮನ್ಸೂರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದೆ. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೂಂದು ಹೆಸರೇ ಸುಭದ್ರಮ್ಮ ಮನ್ಸೂರು. ಅಂತೆಯೇ ಅವರು ಗಾನಕೋಗಿಲೆಯೂ ಹೌದು, ಅಭಿನೇತ್ರಿಯೂ ಹೌದು. 80 ವರ್ಷ ವಯಸ್ಸಿನ ಸುಭದ್ರಮ್ಮ ಮನ್ಸೂರು ಏಳು ದಶಕಗಳ ಕಾಲ ನಿರಂತರವಾಗಿ ವೃತ್ತಿ ನಟಿಯಾಗಿ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದಾರೆ.

ಬಾಲನಟಿ ಹಾಡುನಟಿ
ಬಳ್ಳಾರಿಯ ಭಾಗ್ಯಮ್ಮ -ಜ್ವಾಲಾಪತಿ ದಂಪತಿಗೆ 1939 ರಲ್ಲಿ ಜನಿಸಿದ ಸುಭದ್ರಾ ತನ್ನ ಹನ್ನೊಂದನೇ ವಯಸ್ಸಿಗೆ ಬಳ್ಳಾರಿಯಲ್ಲಿ ಕ್ಯಾಂಪ್‌ ಮಾಡಿದ್ದ ಶ್ರೀ ಸುಮಂಗಲಿ ನಾಟ್ಯಸಂಘ ಎಂಬ ನಾಟಕ ಕಂಪನಿ ಸೇರಿ ಬಾಲ ನಟಿಯಾಗಿ ಬಣ್ಣ ಹಚ್ಚಿದರು. ಒಂದೊಂದಾಗಿ ಹಾಡುಗಳನ್ನು ಕಲಿತರು. ಕ್ರಮೇಣ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಅಭಿನಯ, ಹಾಡುಗಾರಿಕೆ ಒಟ್ಟೊಟ್ಟಿಗೆ ಕಲಿಯುತ್ತ “ಹಾಡು ನಟಿ’ಯಾದರು. ನಾಟಕ ಕಂಪನಿ ಕರ್ನಾಟಕಾಂಧ್ರದ ಹಲವು ಪಟ್ಟಣಗಳಲ್ಲಿ ಎರಡು ವರ್ಷ ಕ್ಯಾಂಪ್‌ ಮುಂದುವರಿಸಿತು. ಅದೇ ಕಂಪನಿಯ ಹಿರಿಯ ನಟರಾಗಿದ್ದ ಲಿಂಗರಾಜ ಮನ್ಸೂರು -ಸುಭದ್ರಾ ಮಧ್ಯೆ ಪ್ರೇಮ ಅಂಕುರಿಸಿ 1952 ರಲ್ಲಿ ಅವರ ವಿವಾಹವಾಯಿತು. ಸುಭದ್ರ ಇಲ್ಲಿಂದ ಸುಭದ್ರ ಮನ್ಸೂರು ಆದರು. 

 ಲಿಂಗರಾಜ ಮನ್ಸೂರು ಅದಾಗಲೇ ವೃತ್ತಿ ರಂಗಭೂಮಿಯ ಪ್ರಖ್ಯಾತ ನಟರೆನಿಸಿಕೊಂಡಿದ್ದರು. ಮುಂದಿನ 17 ವರ್ಷ ಕಾಲ ಸುಭದ್ರ- ಮನ್ಸೂರು ದಂಪತಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ, ಮಾಸ್ಟರ್‌ ಹಿರಣ್ಣಯ್ಯ ಮಿತ್ರಮಂಡಳಿ ಹಾಗೂ ಮಾಚ ಮತ್ತು ಹನುಮಂತರ ಬೆನಕಟ್ಟಿ ನಾಟಕ ಕಂಪೆನಿಗಳಲ್ಲಿ ನಟ ನಟಿಯರಾಗಿ ಸೇವೆ ಸಲ್ಲಿಸಿದರು. ಆ ಹದಿನೇಳು ವರ್ಷ ಸುಭದ್ರ ಅವರಿಗೆ ನಟನೆ ಮತ್ತು ಅಭಿನಯದ ಕಲಿಕೆಯ ಜತೆಗೆ ಅದನ್ನು ಪ್ರಯೋಗಕ್ಕೆ ತರುವ ಅವಧಿಯಾಗಿದ್ದರೆ; ಲಿಂಗರಾಜ ಮನ್ಸೂರರಿಗೆ ತಮ್ಮ ಪ್ರಬುದ್ಧ ಅಭಿನಯ ಪ್ರದರ್ಶನಕ್ಕೆ ಅಖಾಡವಾಗಿತ್ತು.

ಹವ್ಯಾಸಿ ಅಗ್ರಗಣ್ಯ ವೃತ್ತಿನಟಿ
ಹದಿನೇಳು ವರ್ಷದ ನಾಟಕ ಕಂಪೆನಿ ಜೀವನ ಸಾಕೆನಿಸಿ ದಂಪತಿ 1966ರಲ್ಲಿ ಬಳ್ಳಾರಿಗೆ ವಾಪಸು ಬಂದು ನೆಲೆಸಿದರು. ಲಿಂಗರಾಜ ಅವರ ವಯಸ್ಸು ಐವತ್ತು ಮೀರಿತ್ತು. ಸುಭದ್ರಮ್ಮಗೆ 27ರ ಹರೆಯ. ಲಿಂಗರಾಜ ಅವರು ತಮ್ಮ ಅಭಿನಯ ಸಾಧ್ಯತೆಗಳನ್ನೆಲ್ಲ ನಾಟಕ ಕಂಪೆನಿಗಳಲ್ಲಿ ಸೂರೆ ಹೊಡೆದಾಗಿತ್ತು. ಅಷ್ಟಕ್ಕೂ ಗ್ರಾಮೀಣ ಮತ್ತು ಪಟ್ಟಣದ ಹವ್ಯಾಸಿ ರಂಗಭೂಮಿಯಲ್ಲಿ ವೃತ್ತಿನಟರಿಗೆ ಅವಕಾಶ ಇಲ್ಲ. ವೃತ್ತಿನಟಿಯರಿಗೆ ಹೇರಳ ಅವಕಾಶ ಇದೆ. ಇಲ್ಲಿಂದ ಮುಂದಿನದು ಲಿಂಗರಾಜ ಅವರಿಗೆ ವಿಶ್ರಾಂತ ಜೀವನ. ಸುಭದ್ರಮ್ಮನಿಗೆ ಬಿಡುವಿಲ್ಲದ ರಂಗಪಯಣ. ನಾಟಕ ಕಂಪೆನಿಗಳಲ್ಲಿ ಅಭಿನಯ, ಹಾಡುಗಾರಿಕೆಯ ಹಲವು ಪಟ್ಟುಗಳನ್ನು ಕಲಿತು ಹೊರಬಂದಿದ್ದ ಸುಭದ್ರಮ್ಮಗೆ ಅದನ್ನು ಪ್ರಯೋಗಕ್ಕೊಡ್ಡುವ ದೊಡ್ಡ ಅಖಾಡ ಆಂಧ್ರದ ಗಡಿ ಮತ್ತು ಕರ್ನಾಟಕದಾದ್ಯಂತ ಲಭಿಸಿತು. ಮುಂದಿನ ಐವತ್ತು ವರ್ಷಗಳ ಕಾಲ ಪಟ್ಟಣವೂ ಸೇರಿದ ಗ್ರಾಮೀಣ ಹವ್ಯಾಸಿ ರಂಗಭೂಮಿ ವೃತ್ತಿ ನಟಿಯರ ಪೈಕಿ ಅಗ್ರಗಣ್ಯರೆನಿಸಿದರು. ಅದು ಅರ್ಧ ಶತಮಾನದ ಕನ್ನಡ ರಂಗಭೂಮಿಯ ಚರಿತ್ರೆ.

 ಪೌರಾಣಿಕ ನಾಟಕಗಳ ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ, ಮಂಡೋದರಿ, ಮಲ್ಲಮ್ಮ, ನಂಬೆಕ್ಕ; ಸಾಮಾಜಿಕ ನಾಟಕಗಳ ನಾಯಕಿ, ಉಪನಾಯಕಿ, ಖಳನಾಯಕಿ, ಹಾಸ್ಯ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಹೆಸರು ಮಾಡಿದರು. ಪ್ರಯೋಗಶೀಲ ನಾಟಕಗಳಲ್ಲಿ ನಟಿಸಿದರು. ರಂಗಗೀತೆ ಗೋಷ್ಠಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರಂಗಶಿಬಿರಗಳಲ್ಲಿ ಹಾಡುಗಳನ್ನು ಕಲಿಸಿದರು.

ಚಿತ್ರರಂಗ- ರಾಜಕುಮಾರ್‌
ರಂಗಭೂಮಿ- ಸುಭದ್ರಮ್ಮ ಮನ್ಸೂರು

ರಂಗಗೀತೆಗಳಿಗೆ ಮತ್ತಷ್ಟು ಶಾಸ್ತ್ರೀಯತೆ ಹಿನ್ನೆಲೆ ಬೇಕಿತ್ತು. ಅದಕ್ಕಾಗಿ ಬಳ್ಳಾರಿಯ ಚಂದ್ರಶೇಖರ ಗವಾಯಿಗಳ ಬಳಿ ಶಾಸ್ತ್ರೀಯ ಸಂಗೀತವನ್ನು ಶ್ರದ್ಧೆಯಿಂದ ಕಲಿತರು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ಎನ್ನುವ ಹಾಗೆ ತಮ್ಮ ಸಂಭಾಷಣಾ ವೈಖರಿಯನ್ನು ಸುಧಾರಿಸುತ್ತಲೇ ಹೋದರು. ಲಿಂಗಮೆಚ್ಚಿ ಅಹುದಹುದೆನ್ನುವ ಹಾಗೆ ಭಾವಪೂರ್ಣವಾಗಿ ನಟಿಸಿದರು. ಚಿತ್ರರಂಗದಲ್ಲಿ ರಾಜಕುಮಾರ್‌ ಹೇಗೋ, ರಂಗಭೂಮಿಯಲ್ಲಿ ಸುಭದ್ರಮ್ಮ ಹಾಗೆ ಎಂಬ ಪ್ರತೀತಿಗೊಳಗಾದರು. ಇಷ್ಟಾದರೂ ತಾನಿನ್ನೂ ಕಲಿಯುವುದಿದೆ ಎನ್ನುವ ನಮ್ರತೆಯನ್ನು ಹೊಂದಿ, ತಮ್ಮ ಸೃಜನಶೀಲ ಪ್ರತಿಭೆ ಸದಾ ಹೊಳೆಯುತ್ತಿರುವಂತೆ ಜತನವಾಗಿ ಪೋಷಿಸಿಕೊಂಡು ಬಂದಿ¨ªಾರೆ. ಪೌರಾಣಿಕ ನಾಟಕಗಳ ಗಟ್ಟಿಗಿತ್ತಿಯರ ಪಾತ್ರಗಳÇÉೇ ಹೆಚ್ಚು ನಟಿಸಿರುವ ಸುಭದ್ರಮ್ಮ- ಆ ಪಾತ್ರಗಳನ್ನು ಆವಾಹಿಸಿಕೊಂಡಿರುವರೋ ಏನೋ ಎನ್ನುವ ಹಾಗೆ ಅವರ ಮುಖದಲ್ಲಿ ಸದಾ ಪ್ರಸನ್ನಭಾವ ಇರುತ್ತದೆ.

ಆಶಾ ಭೋಂಸ್ಲೆ, ಲತಾ ಸಮ
ಸುಭದ್ರಮ್ಮರ ಸುಮಧುರ ಕಂಠ ಅದೆಂತಹ ಮೋಹಕ ಎಂದರೆ ಇವರೇನಾದರೂ ಚಿತ್ರರಂಗಕ್ಕೆ ಹೋಗಿದ್ದರೆ- ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ಹಾಡುಗಾರಿಕೆಗೆ ಅವಕಾಶ ಪಡೆದಿದ್ದರೆ ಲತಾ ಮಂಗೇಶ್ಕರ್‌, ಆಶಾ ಭೋಂಸ್ಲೆ ಅವರಷ್ಟೇ ಖ್ಯಾತಿ ಪಡೆಯುತ್ತಿದ್ದರು ಎನಿಸದಿರದು. ಕನ್ನಡಿಗರ ಸುದೈವ. ಅವರ ಅಮೋಘ ಕಂಠಸಿರಿಯನ್ನು ಕೇಳುವ ಬಾಗ್ಯ ಕಳೆದ ಅರವತ್ತೈದು ವರ್ಷಗಳಿಂದ ನಮ್ಮದಾಗಿದೆ. ಸುಭದ್ರಮ್ಮ ರಂಗಪ್ರವೇಶ         ಪಡೆದ ದಿನದಿಂದ ಇಲ್ಲಿವರೆಗೆ 200 ಕ್ಕೂ ಅಧಿಕ ಶೀರ್ಷಿಕೆಯ ಸುಮಾರು ಹನ್ನೆರಡು ಸಾವಿರ ಪ್ರದರ್ಶನಗಳಲ್ಲಿ ನಟಿಸಿ¨ªಾರೆ. ಸುಭದ್ರಮ್ಮ ಅವರ ಪ್ರತಿಭೆ ಮತ್ತು ರಂಗಭೂಮಿಗೆ ಅವರ ಕೊಡುಗೆಯನ್ನು ಮನ್ನಿಸಿ ಕನ್ನಡ ರಂಗಭೂಮಿಯ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಿವೆ. ಗುಬ್ಬಿ ವೀರಣ್ಣ ಪ್ರಶಸ್ತಿ, ನಾಡೋಜ, ಡಾಕ್ಟರೇಟ್‌, ರಾಜ್ಯೋತ್ಸವ, ನಾಟಕ ಅಕಾಡೆಮಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಅಮೆರಿಕದ ವಿಶ್ವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ¨ªಾರೆ.

 ಜನತೆಯ ನಡೆನುಡಿ, ಹಾವಭಾವವನ್ನು ಕಲಾತ್ಮಕವಾಗಿ ರಂಗದ ಮೇಲೆ ತರುವುದೇ ನಾಟಕ. ಅನುಕರಣೆ ಇದಕ್ಕೆ ಮೂಲ. ಕಲಾವಿದರು ಮೂಲತಃ ಅನುಕರಿಸುವ ಕಲೆ ರೂಢಿಸಿಕೊಳ್ಳಬೇಕು. ಸುಭದ್ರಮ್ಮ ಒಳ್ಳೆಯ ಅನುಕರಣಶೀಲೆ. ಹಾಸ್ಯಪ್ರವೃತ್ತಿ ಅವರಲ್ಲಿ ಜಾಗೃತ. ಗಂಭೀರ ಹಾಗೂ ಪ್ರಸನ್ನ ಮುಖಭಾವದ ಮರೆಯಲ್ಲಿ ಇಂತಹದೊಂದು ತಮಾಷೆಯ, ಅನುಕರಣೆಯ ಕಲಾವಂತಿಕೆ ಅಡಕವಾಗಿರುವುದು ಗೊತ್ತೇ ಆಗುವುದಿಲ್ಲ. ಶ್ರೇಷ್ಠ ನಟಿಯ ಗುಟ್ಟು ಇದು. ಅವರ ಹಾಸ್ಯ ಪ್ರವೃತ್ತಿ, ಜಪ ತಪ ಧ್ಯಾನ ಹಾಗೂ ಅಧ್ಯಯನಶೀಲತೆ ಅವರ ವ್ಯಕ್ತಿತ್ವದ ಘನತೆ ಹೆಚ್ಚಿಸಿದೆ. 

ವೃತ್ತಿಯಿಂದ ಪಡೆದದ್ದು ಹವ್ಯಾಸಿ ರಂಗಕ್ಕೆ
ಕಲಾವಿದೆಯಾಗಿ ಸುಭದ್ರಮ್ಮ ಮನ್ಸೂರು ಸುದೀರ್ಘ‌ ಅವಧಿಗೆ ಸೇವೆ ಸಲ್ಲಿಸಿದ್ದು ಗ್ರಾಮೀಣ ರಂಗಭೂಮಿಗೆ. ಪಟ್ಟಣ, ನಗರಗಳನ್ನೂ ಈ ಗ್ರಾಮೀಣ ರಂಗಭೂಮಿ ಎಂಬ ವ್ಯಾಖ್ಯಾನ ಒಳಗೊಂಡಿದೆ. ವೃತ್ತಿಯಿಂದ ಪಡೆದದ್ದನ್ನು ಅವರು ಹಳ್ಳಿಗಳಿಗೆ ಕೊಂಡೊಯ್ದರು. ಪಟ್ಟಣಗಳಿಗೆ ತೆಗೆದುಕೊಂಡು ಹೋದರು, ನಗರಗಳಲ್ಲಿ ಪ್ರದರ್ಶಿಸಿದರು. ಒಂದು ರೀತಿ ಅದು ವೃತ್ತಿ ರಂಗಭೂಮಿ ಮುಂದುವರಿಕೆ. ತಮ್ಮ ಕಲಾ ಜೀವನದುದ್ದಕುª ಅವರು ಹೆಚ್ಚು ನಾಟಕಗಳ ಪ್ರದರ್ಶನಗಳಲ್ಲಿ ನಟಿಸಿದ್ದು ಹವ್ಯಾಸಿಗಳ ಮಧ್ಯೆ. ಅವರ ರಂಗ ಆಯುಷ್ಯವನ್ನು ಒಟ್ಟು ನಾಲ್ಕು ಭಾಗ ಮಾಡಿದರೆ, ಅದರಲ್ಲಿ ನಾಲ್ಕನೆಯ ಒಂದು ಭಾಗ ಮಾತ್ರ ವೃತ್ತಿ ನಾಟಕ ಕಂಪೆನಿ ಬರುತ್ತದೆ. ಉಳಿದ ಮೂರು ಪಾಲು ಗ್ರಾಮೀಣ ರಂಗಭೂಮಿ ಬರುತ್ತದೆ.

ವಾದ್ಯಗಾರರ ಹಾಗೆ, ಸಹನಟಿಯರ ಹಾಗೆ ಸುಭದ್ರಮ್ಮನೂ ಒಬ್ಬ ವೃತ್ತಿ ನಟಿ. ಅವರೆಲ್ಲರ ಪ್ರತಿನಿಧಿ. ಆದರೆ ಈ ಎಲ್ಲ ವೃತ್ತಿನಟಿಯರು ನಾಟಕಗಳಲ್ಲಿ ನಟಿಸಿದ್ದು ಹವ್ಯಾಸಿ ಕಲಾವಿದರ ಮಧ್ಯೆ. ಅಂತೆಯೇ ಅವರನ್ನು “ವೃತ್ತಿ ರಂಗಭೂಮಿ ಕಲಾವಿದೆ’ ಎಂದು ಕರೆಯುವುದಕ್ಕಿಂತ “ವೃತ್ತಿ ರಂಗ ಕಲಾವಿದೆ’ ಎನ್ನುವುದೇ ಸೂಕ್ತ. ಎರಡೂ ಒಂದೇ. ಅಂತೆಯೇ ವೃತ್ತಿರಂಗಭೂಮಿ ಕಲಾವಿದರಿಗೆಂದು ಇರುವ ಕನ್ನಡ ರಂಗಭೂಮಿಯ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಎರಡೂ ಭಾಗದವರು ಪಡೆಯುತ್ತ ಬಂದಿದ್ದಾರೆ.

ಗುಡಿಹಳ್ಳಿ ನಾಗರಾಜ

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.