ಇಂದಿನಿಂದ ರೊಲ್ಯಾಂಡ್ ಗ್ಯಾರೋಸ್ ಸಮರ ವಿಶ್ವಾಸದಲ್ಲಿ ರಫೆಲ್ ನಡಾಲ್
Team Udayavani, May 27, 2018, 6:35 AM IST
ಪ್ಯಾರಿಸ್: ರವಿವಾರ ಇತ್ತ ಭಾರತದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ತೆರೆ ಸರಿಯುತ್ತಿದ್ದಂತೆಯೇ ಅತ್ತ ದೂರದ ಪ್ಯಾರಿಸ್‌ನಲ್ಲಿ ಫ್ರೆಂಚ್ ಓಪನ್ ರ್ಯಾಕೆಟ್ ಸಮರಕ್ಕೆ ಚಾಲನೆ ಲಭಿಸಿರುತ್ತದೆ. ಕ್ರೀಡಾಭಿಮಾನಿಗಳು ನಿಧಾನವಾಗಿ ಕ್ರಿಕೆಟ್‌ನಿಂದ ಟೆನಿಸ್‌ನತ್ತ ತಮ್ಮ ಕುತೂಹಲವನ್ನು ವರ್ಗಾಯಿಸಿಕೊಳ್ಳುವುದು ಅನಿವಾರ್ಯ!
ಆವೆಯಂಗಳದ ಈ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್ ಸಮರವೆಂದೊಡನೆ ನೆನಪಾಗುವವರು ಸ್ಪೇನಿನ ಟೆನಿಸ್ ದೈತ್ಯ ರಫೆಲ್ ನಡಾಲ್. ಮರಳಿ ವಿಶ್ವದ ನಂಬರ್ ವನ್ ಟೆನಿಸಿಗನಾಗಿ ಮೂಡಿಬಂದಿರುವ ನಡಾಲ್ ಒಟ್ಟು 10 ಸಲ ಇಲ್ಲಿ ಕಿರೀಟವೇರಿಸಿಕೊಂಡಿದ್ದು, ಈ ಬಾರಿ 11ನೇ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ. ಅನುಭವಿ ಆಟಗಾರ ರೋಜರ್ ಫೆಡರರ್ ಗೈರಾದುದರಿಂದ, ಜೊಕೋವಿಕ್ ಫಾರ್ಮ್ನಲ್ಲಿ ಇಲ್ಲದುದರಿಂದ ಇಲ್ಲಿ ನಡಾಲ್ ಅವರನ್ನು ತಡೆಯುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ರೋಮ್ ಗೆಲುವು ಸ್ಫೂರ್ತಿ
ಕಳೆದ ಮ್ಯಾಡ್ರಿಡ್ ಓಪನ್‌ನಲ್ಲಿ ಡೊಮಿನಿಕ್ ಥೀಮ್‌ಗೆ ಶರಣಾದರೂ ಅನಂತರದ ರೋಮ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನಡಾಲ್ ಪಾಲಿನ ಹೆಗ್ಗಳಿಕೆ. “ರೋಮ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದೆ. ಇದು ಪ್ಯಾರಿಸ್ ಹೋರಾಟಕ್ಕೆ ಸ್ಫೂರ್ತಿಯಾಗಲಿದೆ. ಇಲ್ಲಿ 11ನೇ ಪ್ರಶಸ್ತಿ ನನ್ನ ಗುರಿ’ ಎಂಬುದಾಗಿ ನಡಾಲ್ ಹೇಳಿದ್ದಾರೆ.
ಕಳೆದ 14 ವರ್ಷಗಳ ಅವಧಿಯಲ್ಲಿ 11 ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ನಡಾಲ್, ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಆಡಿದ 81 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಸೋತಿದ್ದಾರೆ. ಇದು ಆವೆಯಂಗಳದಲ್ಲಿ ನಡಾಲ್ ಅವರ ಪ್ರಭುತ್ವವನ್ನು ಸಾರುತ್ತದೆ.
ರವಿವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.