ಸಿಬಿಎಸ್‌ಇಯಲ್ಲೂ ಹೆಣ್ಣುಮಕ್ಕಳೇ ಸ್ಟ್ರಾಂಗು
Team Udayavani, May 27, 2018, 6:00 AM IST
ಹೊಸದಿಲ್ಲಿ: ವಿವಾದಗಳ ಮಧ್ಯೆಯೂ ಮುಗಿದಿದ್ದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ನೋಯ್ಡಾ ಶಾಲೆಯ ಕಲಾ ವಿಭಾಗದ ಮೇಘನಾ ಶ್ರೀವಾಸ್ತವ ಪ್ರಥಮ ಸ್ಥಾನ ಗಳಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಸರಾಸರಿ ಶೇಕಡಾವಾರು 83.01 ಆಗಿದ್ದು, ಕಳೆದ ವರ್ಷ ಶೇ. 82.02 ಆಗಿತ್ತು. ಇತರ ಪರೀ ಕ್ಷೆ ಗಳಂತೆಯೇ ಸಿಬಿಎಸ್‌ಇ 12ನೇ ತರಗ ತಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಪಾಸ್ ಪರ್ಸಂಟೇಜ್ 88.31 ಆಗಿದ್ದು, ವಿದ್ಯಾರ್ಥಿಗಳದ್ದು ಶೇ.78.99 ಆಗಿದೆ.
ಮೇಘನಾ ಶೇ. 99.8 ಗಳಿಸಿದ್ದು, 500 ಅಂಕಗಳಲ್ಲಿ 499 ಅಂಕ ಪಡೆದಿದ್ದಾರೆ. ನೋಯ್ಡಾದ ಸ್ಟೆಪ್ ಬೈ ಸ್ಟೆಪ್ ಶಾಲೆಯ ವಿದ್ಯಾರ್ಥಿನಿ ಈಕೆ. ಇಂಗ್ಲಿಷ್‌ನಲ್ಲಿ 99 ಪಡೆದಿರುವ ಈಕೆ, ಉಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ಎರಡನೇ ಸ್ಥಾನವೂ ಕಲಾ ವಿಭಾಗದ ಅನುಷ್ಕಾ ಚಾಂದ್ ಪಾಲಾಗಿದ್ದು, ಈಕೆ ಗಾಜಿಯಾಬಾದ್ ಶಾಲೆಯ ವಿದ್ಯಾ ರ್ಥಿನಿ. ಈಕೆ 500 ಕ್ಕೆ 498 ಅಂಕ ಪಡೆದಿದ್ದಾಳೆ. ಮೂರನೇ ಸ್ಥಾನವನ್ನು ಏಳು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇವರು 500ಕ್ಕೆ 497 ಅಂಕ ಪಡೆದಿದ್ದಾರೆ.
ತಿರುವನಂತಪುರಂ ಪ್ರದೇಶ ಅತ್ಯುತ್ತಮ ಸಾಧನೆ ಮಾಡಿದ್ದು, ಪಾಸ್ ಪರ್ಸಂಟೇಜ್ ಶೇ. 97.32 ಆಗಿದೆ. ಚೆನ್ನೈ ವಲಯ ಎರಡನೇ ಸ್ಥಾನದಲ್ಲಿದ್ದು, ಪಾಸ್ ಪರ್ಸಂಟೇಜ್ ಶೇ. 93.87 ಆಗಿದೆ. ಶೇ. 89 ಪಾಸ್ ಪರ್ಸಂಟೇಜ್ ಹೊಂದಿರುವ ದೆಹಲಿ ಮೂರನೇ ಸ್ಥಾನದಲ್ಲಿದೆ. ಪರೀಕ್ಷೆಯಲ್ಲಿ ಪಾಸಾದ ಎಲ್ಲರಿಗೂ ಅಭಿನಂದನೆಗಳು. ಪಾಸಾಗದವ ರಿಗೆ ನನ್ನ ಶುಭಕಾಮನೆಗಳು. ಅವರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಈ ಹಿನ್ನಡೆ ತಾತ್ಕಾಲಿಕ ಎಂದು ಸಚಿವ ಜಾವಡೇಕರ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಯ ಮಗಳೇ ಟಾಪರ್
ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಶಬೀರ್ ಶಾ ಪುತ್ರಿ ಸಮಾ ಶಬೀರ್ ಸಿಬಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಇಲ್ಲಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿ ರುವ ಸಮಾ ಶೇ.97.8 ಅಂಕಗಳನ್ನು ಪಡೆದಿದ್ದಾಳೆ. ಈಕೆಯ ತಂದೆ, ಜಮ್ಮು ಕಾಶ್ಮೀರ ಡೆಮಾಕ್ರಾಟಿಕ್ ಫ್ರೀಡಂ ಪಾರ್ಟಿ ಮುಖ್ಯಸ್ಥ ಶಬೀರ್ ಶಾ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರಿಗೆ ಹಣಕಾಸು ನೆರವು ಒದಗಿಸಿದ ಆರೋಪದಲ್ಲಿ ಈತನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.