ನಗರಸಭೆ, ಲೋಕಸಭೆ ಚುನಾವಣೆ ಗೆಲುವು ಗುರಿ
Team Udayavani, May 27, 2018, 6:00 AM IST
ಉಡುಪಿ: ಬಿಜೆಪಿ ಕೈಯಲ್ಲಿದ್ದ ಉಡುಪಿ ನಗರಸಭೆಯ ಅಧಿಕಾರವನ್ನು ಮರಳಿ ಪಡೆಯುವುದು, 2019ರಲ್ಲಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಮುಂದಿನ ಗುರಿ. ಇದಕ್ಕೆ ಕಾರ್ಯಕರ್ತರು ಈಗಲೇ ಸನ್ನದ್ಧರಾಗಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಮೇ 26ರಂದು ಚಿತ್ತರಂಜನ್ ಸರ್ಕಲ್‌ನಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ಉಡುಪಿಯಲ್ಲಿ ನಾನು ಗೆದ್ದಿರುವುದಲ್ಲ, ಇದು ಕಾರ್ಯಕರ್ತರ ಗೆಲುವು. ಹಾಗಾಗಿ ನನಗೆ ಯಾವುದೇ ಅಭಿನಂದನೆ, ಸಮ್ಮಾನ ಬೇಡ. ನಿಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನೀವು ಇಟ್ಟ ಭರವಸೆ ಹುಸಿಗೊಳಿಸುವುದಿಲ್ಲ. ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಲು, ಅಭಿವೃದ್ಧಿ ಕೆಲಸಗಳನ್ನು ನಡೆಸಲು ಸದಾ ಬದ್ದನಾಗಿರುತ್ತೇನೆ. ಅಧಿಕಾರ ಇಲ್ಲ ಎಂದು ಕಾರ್ಯಕರ್ತರು ಎದೆಗುಂದುವ ಆವಶ್ಯಕತೆಯಿಲ್ಲ. ಕಾರ್ಯಕರ್ತರ ಸುಖ -ದುಃಖದಲ್ಲಿ ನಾನಿರುತ್ತೇನೆ. ಈ ಬಾರಿ ನಗರಸಭೆಯ ಎಲ್ಲ 35 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ಈ ಕ್ಷೇತ್ರದಲ್ಲಿ 33,000 ಇದ್ದ ಅಂತರವನ್ನು ಈ ಬಾರಿ 40,000ಕ್ಕೆ ಹೆಚ್ಚಿಸಿಕೊಳ್ಳಬೇಕು ಎಂದು ಭಟ್ ಹೇಳಿದರು.
ಮರ್ಯಾದೆ ಹರಾಜು!
ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರವೇ ಬರಬೇಕೆಂಬುದು ಜನರ ಆಶಯ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಅಪ್ಪನಾಣೆ ಹಾಕುವ ಮೂಲಕ ಮರ್ಯಾದೆ ಹರಾಜು ಹಾಕಿದ್ದಾರೆ. ಈ ಸರಕಾರ ಹೆಚ್ಚು ಸಮಯ ಬಾಳದು ಎಂದರು.
ಅಧ್ಯಕ್ಷತೆಯನ್ನು ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಪಕ್ಷದ ಮುಂದಾಳುಗಳಾದ ಯಶ್‌ಪಾಲ್ ಸುವರ್ಣ, ದಿನಕರ ಶೆಟ್ಟಿ ಹೆರ್ಗ, ಶ್ರೀಶ ನಾಯಕ್, ಸಂಧ್ಯಾ ರಮೇಶ್, ನಳಿನಿ ಪ್ರದೀಪ್ ರಾವ್, ರಜನಿ ಹೆಬ್ಟಾರ್, ಚುನಾವಣಾ ಉಸ್ತುವಾರಿಗಳಾದ ಶ್ಯಾಮಲಾ ಕುಂದರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಅಲ್ಪಸಂಖ್ಯಾಕ ಮೋರ್ಚಾದ ದಾವೂದ್ ಮೊದಲಾದವರು ಪಾಲ್ಗೊಂಡಿ ದ್ದರು. ಉಪೇಂದ್ರ ನಾಯಕ್ ಸ್ವಾಗತಿಸಿ ಜಗದೀಶ ಆಚಾರ್ಯ ವಂದಿಸಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.
ಕೆಲಸದತ್ತ ಗಮನ ಹರಿಸೋಣ
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಸಾಕಷ್ಟು ಚರ್ಚೆ ನಡೆಸಿ ಹಣಕಾಸು ಸಾಧ್ಯತೆಗಳನ್ನು ಗಣನೆಗೆ ತೆಗೆದು ಕೊಂಡೇ ಬಿಜೆಪಿಯ ಪ್ರಣಾಳಿಕೆ ಸಿದ್ಧಪಡಿಸಿದ್ದೆವು. ಆಡಳಿತ ಪಕ್ಷದಲ್ಲಿ ಇದ್ದಾಗಲೇ ಕೆಲಸಗಳು ಆಗಬೇಕೆಂದೇನಿಲ್ಲ. ನಾವು ಉತ್ತಮ ವಿರೋಧ ಪಕ್ಷವಾಗಿದ್ದಾಗಲೂ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿದೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಪ್ರಯತ್ನ ಪಡೋಣ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.