ಮಳೆ ಬಂದರೂ ಎಚ್ಚೆತ್ತಿಲ್ಲ ಗ್ರಾಮ ಪಂಚಾಯತ್
Team Udayavani, May 27, 2018, 11:36 AM IST
ಹಳೆಯಂಗಡಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ವಸತಿ ಪ್ರದೇಶವಾಗಿರುವ ಇಂದಿರಾನಗರದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಮಳೆಯ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಗ್ರಾಮ ಪಂಚಾಯತ್ ಮಾತ್ರ ಮೌನವಾಗಿ ಕುಳಿತಿದೆ.
ಇಲ್ಲಿ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ಶೇ. 70 ರಷ್ಟಿದ್ದರೂ ಅದರ ಪಕ್ಕದಲ್ಲಿ ಚರಂಡಿಗಳ ಕೊರತೆ ಇದೆ. ಕೆಲವೆಡೆ ಚರಂಡಿಗಳಿದ್ದರೂ ಅದರಲ್ಲಿ ಕಸ ತುಂಬಿ, ಹುಲ್ಲುಗಳು ಬೆಳೆದು, ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ.
ಕಳೆದ ಹದಿನೈದು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಮಳೆ ಹೆಚ್ಚಾದರೆ ರಸ್ತೆಯಲೆಲ್ಲ ಚರಂಡಿ ನೀರು ಹರಿಯುವ ಭೀತಿ ಎದುರಾಗಿದೆ. ಹೀಗಾಗಿ ಪಂಚಾಯತ್ ಇನ್ನಾದರೂ ಶೀಘ್ರದಲ್ಲಿ ಚರಂಡಿ ಸ್ವಚ್ಛತೆ ಹಾಗೂ ಕೆಲವೊಂದು ಚರಂಡಿಯಲ್ಲಿ ತುಂಬಿ ರುವ ಕೊಳಚೆ ನೀರು ಸರಾ ಗ ವಾಗಿ ಹರಿಯಲು ಪಂಚಾಯತ್ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಸ್ಥಳೀ ಯರು ಆತಂಕ ವ್ಯಕ್ತಪಡಿಸಿದ್ದಾರೆ.
ತುರ್ತು ಸಮಸ್ಯೆಗೆ ಸ್ಪಂದಿಸಿ
ಚುನಾವಣಾ ನೀತಿ ಸಂಹಿತೆಯಿಂದಾಗಿ ಗ್ರಾ.ಪಂ.ನ ಸಭೆಗಳು ನಡೆಯದಿದ್ದ ಕಾರಣ ಈ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾವಿ ಸ ಲಾಗಲಿಲ್ಲ ಎಂದು ಗ್ರಾಮ ಪಂಚಾಯತ್ ಹೇಳುತ್ತಿದೆ. ಆದರೆ ಮಳೆಗಾಲದ ಸಮಸ್ಯೆ ಗಳಿಗೆ ತುರ್ತು ಪರಿಹಾರ ಕೈಗೊಳ್ಳಲು ಯಾವ ಸದಸ್ಯರು ಸಹ ವಿರೋಧಿಸುವುದಿಲ್ಲ. ಹೀಗಾಗಿ ಗ್ರಾಮ ಸಭೆ ನಡೆಯು ವವರೆಗೆ ಯಾಕೆ ಕಾಯಬೇಕು ಎನ್ನುವ ಗ್ರಾಮಸ್ಥರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಂಚಾಯತ್ ಮೀಟಿಂಗ್ ಸಮಸ್ಯೆ
ಚುನಾವಣಾ ನೀತಿ ಸಂಹಿತೆಯಿಂದ ಗ್ರಾಮ ಪಂಚಾಯತ್ನಲ್ಲಿ ಸಾಮಾನ್ಯ ಸಭೆಯು ನಡೆದಿಲ್ಲ. ಇಂದಿರಾನಗರ ಸಹಿತ ಹಲವೆಡೆ ಚರಂಡಿ ಹೂಳೆತ್ತಲು ಸಭೆಯ ನಿರ್ಣಯ ಅಗತ್ಯವಾಗಿಬೇಕಾಗಿದೆ. ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಮಳೆಗಾಲಕ್ಕೆ ಸರ್ವ ಸಿದ್ಧತೆ ನಡೆಸಲು ಉದ್ದೇಶಿಸಲಾಗಿದೆ.
– ಕೇಶವ ದೇವಾಡಿಗ,
ಪ್ರಭಾರ ಪಿಡಿಒ, ಹಳೆಯಂಗಡಿ
ಗ್ರಾ.ಪಂ.
ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.