ಮುಂಬಯಿ ಕನ್ನಡಿಗರು ಮಾತೃತ್ವ ಉಳಿಸಿದ್ದಾರೆ: ಸುಬ್ರಾಯ ಚೊಕ್ಕಾಡಿ


Team Udayavani, May 27, 2018, 3:56 PM IST

2605mum07.jpg

ಮುಂಬಯಿ: ಗ್ರಾಮೀಣ ಮತ್ತು ಹೊರನಾಡ ಕನ್ನಡಿಗರು ಮಾತ್ರ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಆದರೆ ಒಳನಾಡ ಕನ್ನಡಿಗರಲ್ಲಿ ಇದು ಮರೆಯಾಗುತ್ತಿರುವುದು ದುರದೃಷ್ಟಕರ. ಹೊರನಾಡಿನ ಜನರಿಂದಲೇ ಭಾಷೆ, ಸಂಸ್ಕೃತಿಯ ಉಳಿವು ಸ್ತುತ್ಯರ್ಹ. ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ. ನಾನು ನನಗಾಗಿ, ಬದುಕಿಗಾಗಿ ಬರೆಯುತ್ತಿದ್ದವ. ಆದರೆ ನನ್ನ ಬರವಣಿಗೆ ಓದುವ ಸಾಹಿತ್ಯಾಸಕ್ತ ಸ್ನೇಹಿತರಿಂದ ಈ ಮಟ್ಟಕ್ಕೆ ಬೆಳೆದಿದ್ದೆನೆ. ರಾತ್ರಿ ಬೆಳಗಾಗುವ ಒಳಗೆ ಪುಸ್ತಕಗಳನ್ನು ನಾಡಿನಾದ್ಯಂತ ಹೊತ್ತು ಮಾರಿದ ಕಾರಣ ನನ್ನ ಬರವಣಿಗೆಯು ವಿಸ್ತಾರವಾಯಿತು. ಜೊತೆಗೆ ನನ್ನ ಓದಿನ ಪ್ರೀತಿ ಸಂಪಾದನೆ ಆಯಿತು. ಇವೆಲ್ಲವುಗಳ ಫಲವೇ ಈ ಪ್ರಶಸ್ತಿಯಾಗಿದೆ ಎಂದು ಸಾಹಿತಿ,  ಕವಿ, ವಿಮರ್ಶಕ ಹಾಗೂ ಶಿಕ್ಷಕ ಸುಬ್ರಾಯ ಚೊಕ್ಕಾಡಿ  ತಿಳಿಸಿದರು.

ಮೇ 26ರಂದು ಸಂಜೆ ಸಾಂತಾಕ್ರೂಜ್‌ ಪೂರ್ವ  ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ. ಬಿ. ಕುಕ್ಯಾನ್‌ ಪ್ರಾಯೋಜಿತ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ-2018ನ್ನು ಸ್ವೀಕರಿಸಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭಕ್ಕೆ ಚೊಕ್ಕಾಡಿ ದೀಪ ಬೆಳಗಿಸಿ ಚಾಲನೆಯನ್ನಿತ್ತರು. ಬಿಲ್ಲವರ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಪ್ರಧಾನ ಅಭ್ಯಾಗತರಾಗಿದ್ದು ಚೊಕ್ಕಾಡಿ ಅವರಿಗೆ 25,000 ರೂ.  ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರದೊಂದಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಅಭಿನಂದಿಸಿದರು.

ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ರಚಿತ  “ಪ್ರಗತಿಪರ ಚಿಂತನೆಯ ಸಾಹಿತಿ ಎಂ.ಬಿ ಕುಕ್ಯಾನ್‌’ ಕೃತಿಯನ್ನು ಬಿಡುಗಡೆಗೊಳಿಸಿದರು.
ನನ್ನನ್ನು ಸಾಹಿತಿಯಾಗಿಸಿದ್ದೇ ಜಯ ಸುವರ್ಣರು. ಅವರಿಂದಾಗಿ ಸರಸ್ವತಿಯನ್ನು, ಸ್ವಂತಿಕೆಯಿಂದ ಲಕ್ಷ್ಮೀಯನ್ನು ಒಲಿಸಿಕೊಂಡಿ ದ್ದೇನೆ. ಅಕ್ಷಯದೊಂದಿಗೆ ನಾನೂ ಬೆಳೆದಿದ್ದೇನೆ. ನಾರಾಯಣ ಗುರುಗಳಿಂದ ಪ್ರೇರಿತನಾಗಿ ನಾನು ಬಹಳಷ್ಟು ಸಂಪಾದಿಸಿದ್ದೇನೆ. ಅದ್ದ ರಿಂದ ಈ ಪ್ರಶಸ್ತಿಯನ್ನು ನಾನು ಗುರು ಗಳಿಗೆ ಸಮರ್ಪಿಸಿದ್ದೇನೆ ಎಂದು ಪ್ರಶಸ್ತಿ ಯ ಪ್ರಾಯೋಜಕ ಎಂ. ಬಿ. ಕುಕ್ಯಾನ್‌ ಅಭಿಪ್ರಾಯಿಸಿದರು.

ಈ ಬಾರಿಯೂ ಯೋಗ್ಯ ವ್ಯಕ್ತಿಗೆ ಈ ಪ್ರಶಸ್ತಿ ಸಂದಿದೆ ಎಂದ ಸುನೀತಾ ಶೆಟ್ಟಿ ಅವರು, ಚೊಕ್ಕಾಡಿಯವರ ಬರಹ, ಕವಿತೆಗಳ ಬಗ್ಗೆ ಮೆಲುಕು ಹಾಕಿದರು. ಅಂತೆಯೇ ಎಂ. ಬಿ. ಕುಕ್ಯಾನ್‌ ಬಗ್ಗೆ ಅಲೆವೂರು ಬರೆದ ಕೃತಿಯೂ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಸರ್ವೋತ್ಕೃಷ್ಟ ಸೇವೆಗೈದ ಮಹಾನೀಯರನ್ನು ಗುರುತಿಸುವ ಅಗತ್ಯವಿದೆ ಎಂದು ನುಡಿದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಭವನದಲ್ಲಿ ಈ ಹಿಂದೆ ಸೇವಾನಿರತರಾಗಿದ್ದು, ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದ  ಡಾ| ಮೋಹನ್‌ ಬೊಳ್ಳಾರು ಅವರನ್ನು ಅಭಿನಂದಿಸಿ ಗೌರವಿಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾ ದ ನ್ಯಾಯವಾದಿ ರಾಜ ವಿ. ಸಾಲ್ಯಾನ್‌, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್‌, ಗೌ| ಪ್ರ| ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಮತಾ ಆರ್‌. ನಾಯಕ್‌ ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಯರಾಮ ಜಿ. ನಾಯಕ್‌ ಪುರಸ್ಕೃತರನ್ನು ಪರಿಚಯಿಸಿದರು. ಅಕ್ಷಯ ಸಹ ಸಂಪಾದಕ ಹರೀಶ್‌ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸತೀಶ್‌ ಎನ್‌.ಬಂಗೇರ ವಂದಿಸಿದರು.

ಮನೋರಂಜನಾ ಕಾರ್ಯಕ್ರಮವಾಗಿ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು  ಮರಾಠಿ ಮೂಲದ ಕಾವ್ಯಾ ಕಣಂಜಾರ್‌ ತುಳು ಭಾಷೆಗೆ ಅನುವಾದಿಸಿದ “ಕುಡೊಂಜಿ ಕತೆ’ ತುಳು ನಾಟಕ‌ವನ್ನು ಮಧುಕರ್‌ ಮಾನೆ ನಿರ್ದೇಶನ ಹಾಗೂ ಸದಾಶಿವ ಎ. ಕರ್ಕೇರ ಮತ್ತು ಗಣೇಶ ಸುವರ್ಣ ಇವರ ಪ್ರಾಯೋಜಕತ್ವದಲ್ಲಿ ಅಸೋ ಸಿಯೇಶನ್‌ನ ನಲ್ಲಸೋಪರ – ವಿರಾರ್‌ ಸ್ಥಳೀ ಯ ಸಮಿತಿಯ ಸದಸ್ಯರು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಧರ್ಮೇಶ್‌ ಎಸ್‌. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

  ಗುರುನಾರಾಯಣ ಅವರ ತತ್ವಾನುಸಾರ ಮುನ್ನಡೆಯುವ ಬಿಲ್ಲವ ಸಮಾಜ ಗುರುಗಳ ಅನುಗ್ರಹದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಪ್ರಶಸ್ತಿ ಒಂದು ಉತ್ತಮ ಮತ್ತು ಆದರ್ಶವಾದ ಕಾಯಕವಾಗಿದೆ. ಭವಿಷ್ಯತ್ತಿನುದ್ದಕ್ಕೂ ಈ ಪ್ರಶಸ್ತಿ ಯೋಗ್ಯವ್ಯಕ್ತಿಗಳಿಗೆ ಪ್ರಾಪ್ತಿಯಾಗಲಿ. ಇದು ಯುವ ಪೀಳಿಗೆಯೂ ಮಾದರಿಯಾಗಬೇಕು. ಬಿಲ್ಲವ ಸಂಸ್ಥೆಯೂ, ಸಮಾಜವು ಸಾಹಿತ್ಯಕವಾಗಿಯೂ ಸಾಮರಸ್ಯವಾಗಿ ಮುನ್ನಡೆಯುತ್ತಿರಲಿ 
– ನಿತ್ಯಾನಂದ ಡಿ. ಕೋಟ್ಯಾನ್‌ 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.