ಗಿರಡ್ಡಿ ಶ್ರಮಿಸಿದು ಎಡ-ಬಲದ ಸಮತೋಲನಕ್ಕೆ: ಪ್ರೊ| ಚಂಪಾ
Team Udayavani, May 27, 2018, 4:48 PM IST
ಧಾರವಾಡ: ಹಿರಿಯ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್ ಅವರಿಗೆ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಮನೋಹರ ಗ್ರಂಥ ಮಾಲೆ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಸಾಹಿತ್ಯ ಪ್ರಕಾಶನ, ಚಿತ್ರಾ ಫಿಲ್ಮ್ ಸೊಸೈಟಿ, ರಂಗಾಯಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಯಿಂದ ಶನಿವಾರ ನುಡಿ ನಮನ ಸಲ್ಲಿಸಲಾಯಿತು.
ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ದೇಶದಲ್ಲಿ ಎಡ-ಬಲಗಳ ಮಧ್ಯೆ ಬಹುದೊಡ್ಡ ಕಂದಕ ನಿರ್ಮಾಣಗೊಳ್ಳುತ್ತಿರುವ ಈ ಸಮಯದಲ್ಲಿ ಅವೆರಡನ್ನೂ ಸಮತೋಲಿಸುವ ಮಹತ್ವದ ಭಾರ ಗಿರಡ್ಡಿ ಮೇಲಿತ್ತು. ಅವರು ಜೀವನಪೂರ್ತಿ ಯಾವುದೇ ಇಸಂಗಳಿಗೆ ಜೋತು ಬೀಳಲಿಲ್ಲ ಎಂದರು.
ಡಾ| ಗಿರಡ್ಡಿ ಬದುಕಿನುದ್ದಕ್ಕೂ ಒಂದೇ ವೇಗ, ಒಂದೇ ಲಯ ಹಾಗೂ ಸಮಾಧಾನವಾಗಿ ಹರಿಯುವ ನದಿಯಂತೆ ಬಾಳಿದ. ರಾಜ್ಯ, ದೇಶದಲ್ಲಿ ನಡೆದ ಯಾವ ಚಳವಳಿಯಲ್ಲೂ ನೇರವಾಗಿ ಭಾಗಿಯಾಗಲಿಲ್ಲ. ಯಾವುದೇ ಚಳವಳಿ ಬಗ್ಗೆಯೂ ನಿರ್ದಿಷ್ಟವಾಗಿ ಮಾತನಾಡಬಲ್ಲವನಾಗಿದ್ದ, ಅಂತಹ ಅಪರೂಪದ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಸಾಹಿತಿ ಗುರುಲಿಂಗ ಕಾಪಸೆ ಮಾತನಾಡಿ, ಗಿರಡ್ಡಿ ಅವರ ಓದು ವ್ಯಾಪಕ ಹಾಗೂ ವಿಶಿಷ್ಟವಾಗಿತ್ತು. ಗೋಕಾಕ ಅವರಿಗಿಂತ ಗಿರಡ್ಡಿ ಅವರು ಒಂದು ಹೆಜ್ಜೆ ಮುಂದಿದ್ದರು. ವ್ಯಾಪಕ ಓದು ಅಳವಡಿಸಿಕೊಂಡಿದ್ದರಿಂದಲೇ ಅವರು ವಿಮರ್ಶಕರಾಗಲು ಅನುಕೂಲವಾಯಿತು. ಎಂ.ಎಂ. ಕಲಬುರ್ಗಿ ಹಾಗೂ ಡಾ| ಗಿರಡ್ಡಿ ಗೋವಿಂದರಾಜ್ ಅವರನ್ನು ಕಳೆದುಕೊಂಡಿರುವುದು ಅಪಾರ ನಷ್ಟವಾದಂತಾಗಿದೆ ಎಂದರು.
ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಗಿರಡ್ಡಿ ಹಾಗೂ ನನ್ನದು 62 ವರ್ಷಗಳ ಸ್ನೇಹ. ಅವನೊಂದಿಗೆ ಮಾಡದಿದ್ದ ಚರ್ಚೆಗಳಿರಲಿಲ್ಲ. ಎಂದೂ ಅವನು ತನ್ನತನವನ್ನು ಬಿಟ್ಟು ಕೊಡಲಿಲ್ಲ. ಕಾಲೇಜು ದಿನಗಳಿಂದಲೇ ವಿಮರ್ಶೆ ಗುಣ ಬೆಳೆಸಿಕೊಂಡ ಗಿರಡ್ಡಿ, ನಮ್ಮ ನಡುವಿನ ಮಧ್ಯಮವೇ ಆಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿ, ಈ ವರ್ಷದ ಅಡ್ಡ ಮಳೆ ಹಾಗೂ ಸಿಡಿಲಿನ ಆಘಾತಕ್ಕಿಂತ ಗಿರಡ್ಡಿ ಅವರ ಸಾವು ಬಹು ದೊಡ್ಡ ಆಘಾತ ನೀಡಿದೆ. ಅಪಾರ ಪ್ರತಿಭೆ ಹೊಂದಿದ್ದ ಗಿರಡ್ಡಿ ಅವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ವಿಮರ್ಶೆಯಲ್ಲಿ ಪ್ರಖರ ಹಾಗೂ ಪಕ್ವವಾಗಿದ್ದರು. ಸಾಹಿತ್ಯ ಸಂಭ್ರಮ ಯಶಸ್ಸಿಗೆ ಅವರೇ ಕಾರಣ ಎಂದು ಹೇಳಿದರು.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ವೀಣಾ ಸಂಕನಗೌಡರ, ರಮಾಕಾಂತ್ ಜೋಶಿ, ಅನ್ವೇಷಣಾ ಕೂಟದ ನರಸಿಂಹ ಪರಾಂಜಪೆ, ಆಲೂರು ಟ್ರಸ್ಟ್‌ನ ಟ್ರಸ್ಟಿ ವೆಂಕಟೇಶ ದೇಸಾಯಿ, ಅಭಿನಯ ಭಾರತಿಯ ಅರವಿಂದ ಕುಲಕರ್ಣಿ, ಶಶಿಧರ ತೋಡ್ಕರ, ಆನಂದ ಜುಂಝರವಾಡ, ಎಂ.ಎ. ಸುಬ್ರಹ್ಮಣ್ಯ, ಪ್ರಕಾಶ ಭಟ್, ಬಸು ಬೇವಿನಗಿಡದ, ರಾಘವೇಂದ್ರ ಪಾಟೀಲ, ರಜನಿ ಗರುಡ, ಬಿ.ಎಲ್. ಪಾಟೀಲ, ನಿರ್ಮಲಾ ಹಂಚಿನಮನಿ, ಮಾಲತೇಶ ಹುಬ್ಬಳ್ಳಿ ಮಾತನಾಡಿದರು. ಸಮೀರ ಜೋಶಿ, ಇತರರು ಇದ್ದರು. ಹಾ.ವೆ. ಕಾಖಂಡಕಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.