ಫ‌ಸಲು ವಿಮೆ ರೈತಸ್ನೇಹಿ ಆಗಬೇಕಾದರೆ…


Team Udayavani, May 28, 2018, 6:00 AM IST

pasdaklu.jpg

ರೈತರ ಕಷ್ಟಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆಯನ್ನು ಜಾರಿಗೆ ತರಲಾಯಿತು. ವಿಪರ್ಯಾಸವೆಂದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿ ವರ್ಗ ಹೆಚ್ಚಿನ ಆಸಕ್ತಿ ತೋರಲಿಲ್ಲ. ನಷ್ಟದ ಪ್ರಮಾಣವನ್ನು ತಿಳಿಯಲು ಕೃಷಿ ಭೂಮಿಗೆ ಇಳಿಯಲೇ ಇಲ್ಲ. ಬದಲಿಗೆ, ಕಚೇರಿಯಲ್ಲಿ ಕುಳಿತು ಒಂದು ಅಂದಾಜಿನ ಮೇಲೆ ಲೆಕ್ಕಪತ್ರದ ದಾಖಲೆಗಳನ್ನು ತಯಾರಿಸಿಬಿಟ್ಟರು….
        
ಈ ವರ್ಷ ಮೇ ತಿಂಗಳ ಬಿರುಬೇಸಿಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲಿಕ ಮಳೆ. ಬರ, ನೆರೆ ಮತ್ತು ಅಕಾಲಿಕ ಮಳೆ ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ ಕೃಷಿಕರ ಅಂದಾಜುಗಳೆಲ್ಲ ತಲೆಕೆಳಗಾಗುತ್ತಿವೆ.

ಇಂಥ ಸನ್ನಿವೇಶದಲ್ಲಿ ಕೃಷಿಕರ ಹಿತಾಸಕ್ತಿಯ ರಕ್ಷಣೆಗೆ ದಾರಿ ಯಾವುದು? ಫ‌ಸಲು ವಿಮೆ ಒಂದು ಪರಿಣಾಮಕಾರಿ ದಾರಿ. ಕೃಷಿಕರಿಗೆ ಕನಿಷ್ಠ ಆದಾಯದ ಗ್ಯಾರಂಟಿ, ಫ‌ಸಲು ವಿಮೆಯ ಪ್ರಧಾನ ಅಂಶ. ನಮ್ಮ ದೇಶದಲ್ಲಿ ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆ ಜಾರಿಯಾದದ್ದು 2016ರ ಮುಂಗಾರು ಹಂಗಾಮಿನಲ್ಲಿ. ರೈತಸ್ನೇಹಿ ಫ‌ಸಲು ವಿಮಾ ಯೋಜನೆಯನ್ನು ದೇಶದ ಉದ್ದಗಲದಲ್ಲಿ ಚಾಲೂ ಮಾಡುವುದು ಈ ಯೋಜನೆಯ ಉದ್ದೇಶ.

ಆದರೆ, ರಾಜ್ಯಗಳ ಹಂತದಲ್ಲಿ ಈ ಉದ್ದೇಶಕ್ಕೆ ಧಕ್ಕೆಯಾಗಿದೆ ಮತ್ತು ಜಿÇÉಾ ಮಟ್ಟದಲ್ಲಿ ಇದನ್ನು ಜಾರಿ ಮಾಡುವಾಗ ಹಲವು ಲೋಪಗಳಾಗಿವೆ. ನವದೆಹಲಿಯ ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವೆ„ರನ್ಮೆಂಟ್‌ (ಸಿಎಸ್‌ಇ) ನಡೆಸಿದ ಅಧ್ಯಯನದ ಪ್ರಕಾರ ಈ ವಿಮಾ ಯೋಜನೆಯ ಅಸಮರ್ಪಕ ಜಾರಿಯ ಬಗ್ಗೆ ರೈತರಲ್ಲಿ ಅಸಮಾಧಾನ ಮಡುಗಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಈ ಯೋಜನೆಯನ್ನೇ ರದ್ದು ಮಾಡಬೇಕೆಂದು ಹರಿಯಾಣದ ಕೆಲವು ರೈತ-ಕಾರ್ಯಕರ್ತರು ಹೈಕೋರ್ಟ್‌ನಲ್ಲಿ ದಾವೆ ಹೂಡಿದರು.

ರೈತರಿಗೆ ಈ ವಿಮಾ ಯೋಜನೆಯಲ್ಲಿ ಅತ್ಯಂತ ಆತಂಕ ಹುಟ್ಟಿಸುವ ವಿಷಯ ಫ‌ಸಲು ನಷ್ಟದ ಲೆಕ್ಕಾಚಾರ. ಏಕೆಂದರೆ, ಪ್ರತಿಯೊಂದು ಹಳ್ಳಿಯಲ್ಲಿ ಈ ಲೆಕ್ಕಾಚಾರಕ್ಕಾಗಿ ಪರಿಗಣಿಸುವ ಸ್ಯಾಂಪಲ… ಪ್ರದೇಶ ಬಹಳ ಚಿಕ್ಕದು; ಇದರಿಂದಾಗಿ ಫ‌ಸಲು ನಷ್ಟದ ಅಂದಾಜು ಮತ್ತು ವಿಭಿನ್ನತೆಯಲ್ಲಿ ತಪ್ಪುಗಳಾಗಿವೆ. ಹಲವಾರು ಪ್ರಕರಣಗಳಲ್ಲಿ, ಜಿÇÉಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಈ ಲೆಕ್ಕಾಚಾರವನ್ನು ಗ¨ªೆಗಿಳಿದು ಮಾಡುವುದಿಲ್ಲ; ಬದಲಾಗಿ, ಕಚೇರಿಯಲ್ಲಿ ಕುಳಿತು, ಅಂದಾಜು ಮಾಡಿಕೊಂಡು ನಷ್ಟದ ಪ್ರಮಾಣವನ್ನು ಕಾಗದದ ಹಾಳೆಗಳಲ್ಲಿ ದಾಖಲಿಸುತ್ತಾರೆ.

ಫ‌ಸಲು ನಷ್ಟದ ಲೆಕ್ಕಾಚಾರ ಮಾಡಲು ತರಬೇತಿ ಪಡೆದ ಸಿಬ್ಬಂದಿ ಕೊರತೆ, ಭ್ರಷ್ಟಾಚಾರಕ್ಕೆ ಭಾರೀ ಅವಕಾಶ ಮತ್ತು ಸ್ಯಾಂಪಲಿಂಗ್‌ ಪ್ರಕ್ರಿಯೆಯ ವೇಗ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲಿಕ್ಕಾಗಿ ಸ್ಮಾರ್ಟ್‌ ಫೋನ್‌ ಹಾಗೂ ಡ್ರೋನ್‌ ಇತ್ಯಾದಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡದಿರುವುದು  ಇವು ಆ ಅಧ್ಯಯನದಲ್ಲಿ ಕಂಡುಬಂದ ವಿಮಾ ಯೋಜನೆಯ ಪ್ರಧಾನ ದೋಷಗಳು.

ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆಯಿಂದ ವಿಮಾ ಕಂಪೆನಿಗಳಂತೂ 2016ರ ಮುಂಗಾರಿನಲ್ಲಿ ಸುಮಾರು ರೂ.10,000 ಕೋಟಿ ಭರ್ಜರಿ ಲಾಭಗಳಿಸಿವೆ. ಆದರೆ, ಅಸಮರ್ಪಕ ವಿಮಾ ಪರಿಹಾರ ಮತ್ತು ಪರಿಹಾರ ಪಾವತಿಯಲ್ಲಿ ವಿಳಂಬದ ಬಗ್ಗೆ ಹಲವಾರು ದೂರುಗಳು ಬಂದಿವೆ. ಅನೇಕ ಪ್ರಕರಣಗಳಲ್ಲಿ, ವಿಮಾ ಕಂಪೆನಿಗಳು ಸ್ಥಳೀಯ ವಿಕೋಪದಿಂದಾದ ನಷ್ಟದ ಬಗ್ಗೆ ತನಿಖೆ ನಡೆಸಲಿಲ್ಲ; ಹಾಗಾಗಿ ವಿಮಾ ಪರಿಹಾರ ಪಾವತಿಸಲಿಲ್ಲ.
ಕೆಲವು ಜಿÇÉೆಗಳಲ್ಲಿ ಪರಿಹಾರದ ಕ್ಲೈಮುಗಳನ್ನೇ ಇನ್ನೂ ಇತ್ಯರ್ಥ ಪಡಿಸಿಲ್ಲ.

ಮುಂಗಾರು 2016ರ ಮತ್ತು 2016-17ರ ಎರಡನೇ ಬೆಳೆ ಹಂಗಾಮಿನ (ರಾಬಿ) ಕ್ಲೈಮುಗಳೂ ಬಾಕಿ ಇವೆ. ಆದರೆ, ಮುಂಗಾರು 2016ರಲ್ಲಿ ವಿಮಾ ಕಂಪೆನಿಗಳು ರೈತರಿಗೆ ಅಧಿಕ ಪ್ರೀಮಿಯಮ್ ವಿಧಿಸಿದ್ದವು. ಫ‌ಸಲು (ಬೆಳೆ) ವಿಮೆಯ ಪ್ರೀಮಿಯಮ್ ಭವಿಷ್ಯದ ಫ‌ಸಲಿನ ನಷ್ಟದ ನಿರೀಕ್ಷಿತ ಬೆಲೆ ಆಗಿರುತ್ತದೆ. ಅದರಂತೆ, ವಿಮಾ ಕಂಪೆನಿಗಳು  ಶೇಕಡಾ 12.6 ಸರಾಸರಿ ಪ್ರೀಮಿಯಮ್ ವಿಧಿಸಿದ್ದವು. ಇದು ಭಾರತದ ಫ‌ಸಲು (ಬೆಳೆ) ವಿಮೆಯ ಚರಿತ್ರೆಯÇÉೇ ಅತ್ಯಧಿಕ ಪ್ರೀಮಿಯಮ್ ದರ.

ಕೆಲವು ರಾಜ್ಯಗಳಲ್ಲಿ ವಿಧಿಸಿದ ಫ‌ಸಲು ವಿಮೆ ಪ್ರೀಮಿಯಮ್ ಗಮನಿಸಿ: ಗುಜರಾತಿನಲ್ಲಿ ಶೇ.20.5, ರಾಜಸ್ಥಾನದಲ್ಲಿ ಶೇ.19.9, ಮಹಾರಾಷ್ಟ್ರದಲ್ಲಿ ಶೇ.18.9. ಅದರಿಂದಾಗಿ, ವಿಮಾ ಕಂಪೆನಿಗಳ ಫ‌ಸಲು ವಿಮೆ ಪ್ರೀಮಿಯಮ್ ಸಂಗ್ರಹದಲ್ಲಿ ಭಾರೀ ಹೆಚ್ಚಳದ ಸಾಧನೆ: ಮುಂಗಾರು 2016ರಲ್ಲಿ ರೂ.16,70,000 ಕೋಟಿ ಮತ್ತು ರಾಬಿ 2016-17ರಲ್ಲಿ ರೂ.5,66,989 ಕೋಟಿ.

ಫ‌ಸಲು ವಿಮಾ ಯೋಜನೆಯ ಅನುಕೂಲ ಬ್ಯಾಂಕುಗಳ ಸಾಲಗಾರ ರೈತರಿಗೆ ಸೀಮಿತ. ಯಾಕೆಂದರೆ, ಅವರು ಕಡ್ಡಾಯವಾಗಿ ಫ‌ಸಲು ವಿಮೆ ಪ್ರೀಮಿಯಮ್ ಪಾವತಿಸಬೇಕು. ಗೇಣಿಬೇಸಾಯ ಮಾಡುವ ರೈತರು ಈ ಯೋಜನೆಯಿಂದ ಹೊರಗೆ ಉಳಿದಿ¨ªಾರೆ. ಮುಂಗಾರು 2016ರಲ್ಲಿ 38.6 ದಶಲಕ್ಷ ಹೆಕ್ಟೇರ್‌ ಮತ್ತು ರಾಬಿ 2016-17ರಲ್ಲಿ 19.5 ದಶಲಕ್ಷ$ ಹೆಕ್ಟೇರ್‌ ಜಮೀನಿನ ಬೆಳೆಗಳಿಗೆ ಫ‌ಸಲು ವಿಮೆ ಮಾಡಿಸಲಾಗಿತ್ತು (28-7-2017ರ ಮಾಹಿತಿ).

ಆದರೆ, ಬಹುಪಾಲು ರೈತರಲ್ಲಿ ಪ್ರಫ‌ ವಿಮಾ ಯೋಜನೆ ಬಗ್ಗೆ ಜಾಗೃತಿ ಮೂಡಿಲ್ಲ. ರೈತರಿಗೂ ವಿಮಾಕಂಪೆನಿಗಳಿಗೂ ನೇರ ಸಂಪರ್ಕ ಇನ್ನೂ ಚಾಲ್ತಿಯಲ್ಲಿಲ್ಲ. ಫ‌ಸಲುವಿಮೆ ಪರಿಣಾಮಕಾರಿ ಆಗಬೇಕಾದರೆ, ಗೇಣಿಬೇಸಾಯ ಮಾಡುವ ರೈತರಿಗೂ ಫ‌ಸಲುವಿಮೆ ವಿಸ್ತರಿಸಬೇಕು ಮತ್ತು ಎಲ್ಲ ಮುಖ್ಯ ಬೆಳೆಗಳಿಗೂ ಫ‌ಸಲುವಿಮೆ ಒದಗಿಸಬೇಕು. ಫ‌ಸಲು ವಿಮೆಗೆ ನೋಂದಾಯಿಸುವ ರೈತರು ಮಿಶ್ರಬೆಳೆ ಬೆಳೆಯುವುದನ್ನು ಕಡ್ಡಾಯಗೊಳಿಸಬೇಕು. ಕೆಲವು ಬೆಳೆಗಳ ಫ‌ಸಲು ಪ್ರಮಾಣದ ಬಗ್ಗೆ ದಶಕಗಳ ಮಾಹಿತಿ ಲಭ್ಯವಿಲ್ಲ;

ಅಂತಹ ಬೆಳೆಗಳ ಕನಿಷ್ಠ ಫ‌ಸಲು ಪ್ರಮಾಣ ನಿರ್ಧರಿಸಲು ಲಭ್ಯವಿರುವ ಮಾಹಿತಿ ಬಳಸಬೇಕು. ಜೊತೆಗೆ, ಕಾಡುಪ್ರಾಣಿಗಳು, ಬೆಂಕಿ ಅಥವಾ ತೀವ್ರ ಚಳಿಯಿಂದಾದ ಫ‌ಸಲು ನಷ್ಟಕ್ಕೂ ವಿಮಾ ಪರಿಹಾರ ನೀಡಬೇಕು. ಫ‌ಸಲಿನ ಕೊಯ್ಲಿನ ನಂತರ, ಆಲಿಕಲ್ಲು ಮಳೆಯಂತಹ ಪ್ರಾಕೃತಿಕ ವಿಕೋಪದಿಂದ ಫ‌ಸಲು ನಷ್ಟವಾದರೆ, ಅದಕ್ಕೂ ವಿಮಾ ಪರಿಹಾರ ಕೊಡಬೇಕು.

ಮಳೆಬಾರದೆ ಬಿತ್ತನೆ ಮಾಡದಿದ್ದರೆ ಅದನ್ನೂ ಬೆಳೆನಷ್ಟವೆಂದು ಪರಿಗಣಿಸಬೇಕು.  ವಿಮಾ ಯೋಜನೆಯ ಎಲ್ಲ ಮಾಹಿತಿಯೂ ವಿಮಾಕಂಪೆನಿ ಮತ್ತು ಸರಕಾರಗಳ ಕೃಷಿ ಇಲಾಖೆಗಳ ವೆಬ್‌ಸೈಟುಗಳಲ್ಲಿ ಸುಲಭವಾಗಿ ಲಭ್ಯವಿರಬೇಕು. ಗ್ರಾಮ ಪಂಚಾಯಿತಿ ಮತ್ತು ರೈತರನ್ನು ಫ‌ಸಲು ನಷ್ಟ ಅಂದಾಜಿಸುವ ಪ್ರಕ್ರಿಯೆಯಲ್ಲಿ ತೊಡಗಿಸುವ ಮೂಲಕ ಅದನ್ನು ಪಾರದರ್ಶಕವಾಗಿಸಬೇಕು. ಅಂತಿಮವಾಗಿ, 15 ದಿನಗಳೊಳಗೆ ರೈತರ ದೂರುಗಳನ್ನು ಇತ್ಯರ್ಥ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು.

ಈ ಎಲ್ಲ ಸುಧಾರಣೆಗಳನ್ನು ಮಾಡಿದರೆ, ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆ ರೈತಸ್ನೇಹಿಯಾಗಿ, ಪ್ರಾಕೃತಿಕ ವಿಕೋಪಗಳಿಂದ ತತ್ತರಿಸುವ ರೈತರಿಗೆ ಅವರ ಸಂಕಟದ ಕಾಲದಲ್ಲಿ ಆಸರೆಯಾಗಲು ಸಾಧ್ಯವಾಗುತ್ತದೆ. 

* ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.