ತುಪ್ಪದ ಶಿರಾ ತಿನ್ಬೇಕಾ?


Team Udayavani, May 28, 2018, 6:00 AM IST

tuppa.jpg

ಈ ಹೋಟೆಲ್‌ನಲ್ಲಿ ಉಪ್ಪಿಟ್ಟು, ಇಡ್ಲಿ, ವಡೆ, ಒಂದಕ್ಕಿಂತ ಮತ್ತೂಂದು ಉತ್ಕೃಷ್ಟ ಖಾದ್ಯಗಳು ದೊರೆತರೂ ತುಪ್ಪದ ಶಿರಾ (ಕೇಸರಿಬಾತ್‌) ಇಲ್ಲಿನ ಬ್ರಾಂಡೆಡ್‌ ಐಟಮ್‌.  ಶಿರಾ ಸವಿಯುವುದಕ್ಕಾಗಿಯೇ ಗ್ರಾಹಕರು ದೂರದ ಊರುಗಳಿಂದ ಈ ಹೋಟೆಲ್‌ಗೆ ಬರುತ್ತಾರೆ. ಒಮ್ಮೆ ಬಂದವರು ಮತ್ತೂಮ್ಮೆ ಬರುವುದು ಗ್ಯಾರಂಟಿ. 

ಶಿರಾ ಹೊಟೇಲ್‌ ಎಂದೇ ಹುಬ್ಬಳ್ಳಿಯಲ್ಲಿ ಖ್ಯಾತಿ ಪಡೆದಿರುವುದು ರೈಲು ನಿಲ್ದಾಣ ರಸ್ತೆಯ ಪೂರ್ಣಿಮಾ ಬ್ರಾಹ್ಮಣರ ರೆಸ್ಟೋರೆಂಟ್‌. ಮಂಗಳೂರು ತಾಲೂಕಿನ ಅಶ್ವತ್ಥಪುರದ ನಾರಾಯಣರಾವ ನೂಜಿ 54 ವರ್ಷಗಳ ಹಿಂದೆ ಆರಂಭಿಸಿದ ಈ ಹೋಟೆಲನ್ನು ಪ್ರಸ್ತುತ ಅವರ ಮಕ್ಕಳು ಮುನ್ನಡೆಸುತ್ತಿದ್ದಾರೆ. 

ಈ ಹೋಟೆಲ್‌ನಲ್ಲಿ ಉಪ್ಪಿಟ್ಟು, ಇಡ್ಲಿ, ವಡೆ, ಒಂದಕ್ಕಿಂತ ಮತ್ತೂಂದು ಉತ್ಕೃಷ್ಟ ಖಾದ್ಯಗಳು ದೊರೆತರೂ ತುಪ್ಪದ ಶಿರಾ (ಕೇಸರಿಬಾತ್‌) ಇಲ್ಲಿನ ಬ್ರಾಂಡೆಡ್‌ ಐಟಮ್‌. ಶಿರಾ ಸವಿಯುವುದಕ್ಕಾಗಿಯೇ ಗ್ರಾಹಕರು ದೂರದ ಪ್ರದೇಶಗಳಿಂದ ಈ ಹೋಟೆಲ್‌ಗೆ ಬರುತ್ತಾರೆ. ಒಮ್ಮೆ ಬಂದವರು ಮತ್ತೂಮ್ಮೆ ಬರುವುದು ಗ್ಯಾರಂಟಿ. ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಶಿರಾ ಸಿಗುತ್ತದೆ.

ಉತ್ತಮ ಗುಣಮಟ್ಟದ ತುಪ್ಪ ಬಳಕೆ ಮಾಡುವುದರಿಂದ ಶಿರಾ ತಿಂದ ನಂತರ ಬಹಳ ಹೊತ್ತಿನವರೆಗೆ ತುಪ್ಪದ ರುಚಿ ಬಾಯಿಯಲ್ಲಿ ಉಳಿಯುತ್ತದೆ. ಧಾರವಾಡದ ಪ್ರಸಿದ್ಧ ಬಾಂಬೆ ರೆಸ್ಟೋರೆಂಟ್‌ ನಲ್ಲಿ ಕೆಲಸ ಮಾಡುತಿದ್ದ ನಾರಾಯಣರಾವ ನೂಜಿ, ನಂತರ ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿ 1935ರಲ್ಲಿ ಲಕ್ಕಿ ರೆಸ್ಟೋರೆಂಟ್‌ ಆರಂಭಿಸಿದರು.

ಮುಂದೆ ಬಾನಿ ಓಣಿಯಲ್ಲಿ ಗೋಪಾಳಪ್ಪನ ಖಾನಾವಳಿ, ಘಂಟಿಕೇರಿಯಲ್ಲಿ ವಸಂತಕೆಫೆ ಆರಂಭಿಸಿದರು. ಅಲ್ಲದೇ ನಾಟಕ ಕಂಪನಿಗಳ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿದ್ದರು. ಎಲ್ಲವುಗಳ ಮಧ್ಯೆ ಈ ಪೂರ್ಣಿಮಾ ರೆಸ್ಟೋರೆಂಟ್‌ ಅನ್ನು ಹಾಗೇ ಉಳಿಸಿಕೊಂಡರು. ನಾರಾಯಣರಾವ್‌ ತಮ್ಮ 4 ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಮಕ್ಕಳು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಪೂರೈಸಿದರು.

ತಂದೆಯ ನಿಧನದ ನಂತರ ಮೂವರು ಪುತ್ರರು ಹೋಟೆಲ್‌ ನಿರ್ವಹಣೆ ಮಾಡುತ್ತಿದ್ದಾರೆ. ಹೋಟೆಲ್‌ನಲ್ಲಿ ಜನಸಂದಣಿ ಹೆಚ್ಚಾದರೆ ಯಾವುದೇ ಹಿಂಜರಿಕೆ ಇಲ್ಲದೆ  ಮನೆಯ ಸದಸ್ಯರೆಲ್ಲ ಬಂದು ಕೆಲಸಮಾಡುತ್ತಾರೆ. ತಂದೆ ಆರಂಭಿಸಿದ, ತಮ್ಮ ಶ್ರೇಯಸ್ಸಿಗೆ ಕಾರಣವಾದ ಹೋಟೆಲ್‌ ಉಳಿಸಿಕೊಂಡು ಹೋಗಬೇಕೆಂಬುದು ಕುಟುಂಬದ ಸದಸ್ಯರ ಅಭಿಲಾಷೆ. ಈಗ ಹಿರಿಯ ಸೋದರ ಜಯಕೃಷ್ಣ ನೂಜಿ ಅವರ ನೇತೃತ್ವದಲ್ಲಿ ಹೋಟೆಲ್‌ ನಡೆಯುತ್ತಿದೆ. 

ಇಲ್ಲಿ ಶಿರಾ ಅಲ್ಲದೇ ಮಿಕ್ಸಚರ್‌ ಖಾರಾ (ಅವಲಕ್ಕಿ ಚೂಡಾ ಮಿಶ್ರಣ), ಪೂರಿ-ಪಾತಾಳಭಾಜಿ ಕೂಡ ಫೇಮಸ್ಸು. ಹಿರಿಯ ರಾಜಕಾರಣಿ ಎಚ್‌.ಕೆ.ಪಾಟೀಲರು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಇದೇ ಹೊಟೇಲ್‌ಗೆ ಬರುತ್ತಿದ್ದರು. ಈಗಲೂ ಅವರು ಹುಬ್ಬಳ್ಳಿಗೆ ಬಂದಾಗ ಇಲ್ಲಿಗೆ ಬಂದು, ತಿಂದು ಹೋಗುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಹಲವು ಬಾರಿ ಇಲ್ಲಿನ  ಭೋಜನ ಸವಿದಿದ್ದಾರೆ. 

ಒಂದು ಕಾಲದಲ್ಲಿ ಪೂರ್ಣಿಮಾ ರೆಸ್ಟೋರೆಂಟ್‌ನಲ್ಲಿ ಪೇಡ ಕೂಡ ತಯಾರಾಗುತ್ತಿತ್ತು. ಆದರೆ ಗುಣಮಟ್ಟದ ಹಾಲಿನ ಕೊರತೆಯಿಂದಾಗಿ ನಿಲ್ಲಿಸಲಾಯಿತು.  ಮಂದ ಮಸಾಲೆಯ ಸಾಂಬಾರ್‌ಗಾಗಿಯೇ ಇಲ್ಲಿ ಊಟಕ್ಕೆ ಬರುವವರಿದ್ದಾರೆ. ರೊಟ್ಟಿ-ಚಪಾತಿ ಊಟ ಕೂಡ ಲಭ್ಯ. ಬೇಸಿಗೆಯಲ್ಲಿ ಪುದಿನಾ ಮಜ್ಜಿಗೆ ಮಾಡಲಾಗುತ್ತದೆ.

ರೈಲ್ವೆ ನಿಲ್ದಾಣದ ಸಮೀಪ ಇರುವುದರಿಂದ ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ರೈಲ್ವೆ ಸಿಬ್ಬಂದಿ, ಮಹಾನಗರ ಪಾಲಿಕೆ ಅಧಿಕಾರಿಗಳು, ಎಲ್‌ಐಸಿ ಸಿಬ್ಬಂದಿ, ಸಮೀಪದ ಕಚೇರಿಗಳ ನೌಕರರು ಇಲ್ಲಿನ ಖಾಯಂ ಗ್ರಾಹಕರು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಗ್ರಾಹಕರಿಗೆ ಉತ್ತಮ ಖಾದ್ಯಗಳನ್ನು ನೀಡಬೇಕೆಂಬುದು ನೂಜಿ ಸೋದರರ ಉದ್ದೇಶ. ಪ್ರತಿ ಪ್ಲೇಟ್‌ ಶಿರಾಕ್ಕೆ 20 ರೂ. ನಿಗದಿಪಡಿಸಿದ್ದರೆ, ರೊಟ್ಟಿ ಊಟಕ್ಕೆ 75 ರೂ. ಇದೆ.  

* ವಿಶ್ವನಾಥ ಕೋಟಿ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.