ಸರ್ಕಾರ ಇಪ್ಪುದು ಉಳ್ಳವರ ಹಿತ ಕಾಯಲು!?


Team Udayavani, May 28, 2018, 6:00 AM IST

sarkara.jpg

ಸೋಲಾರ್‌ ವಿದ್ಯುತ್‌ ಪಾರ್ಕ್‌ನಲ್ಲಿ ರೈತರ ಹೆಸರಿನಲ್ಲಿ ಬಹುಪಾಲು ಗುತ್ತಿಗೆಗಳನ್ನು ಗಿಟ್ಟಿಸಿಕೊಂಡಿದ್ದು ವಿಧಾನಸೌಧದಲ್ಲಿ ಠಳಾಯಿಸುವ ರಾಜಕಾರಣಿಗಳು. 9 ರೂ. ಯೂನಿಟ್‌ ದರ! ಇತ್ತ ಪ್ರತಿಷ್ಟಿತರ ಶಾಲೆಗಳು, ಸಂಕೀರ್ಣಗಳ ಮೇಲಿನ ರೂಫ್ಟಾಪ್‌ಗ್ಳ ಸಂಬಂಧವೂ 8-9 ರೂ. ಯೂನಿಟ್‌ ಮಾರಾಟದ ಒಪ್ಪಂದ 25 ವರ್ಷಕ್ಕಾಗಿದೆ. ಇಲ್ಲೂ ಹಿನ್ನೆಲೆಯಲ್ಲಿರುವವರು ನಮ್ಮನ್ನಾಳುವವರೇ. 

ಎರಡು ಸತ್ಯಗಳು ನಮ್ಮ ಮುಂದಿವೆ. ಕಳೆದ ಮೂರು ತಿಂಗಳಿನಿಂದ ನಾವು ಕಾಣುತ್ತಿರುವಂತೆ ರಾಜಕೀಯ ಪಕ್ಷಗಳಿಗೆ ಜನರೇ ಜನಾರ್ದನರು. “ಬಹುಮತ ಕೊಡದಿದ್ದರೆ ನಾವು ಜನರ ಮುಂದೆ ಹೋಗುತ್ತೇವೆ’. “ನಾವು ಸಂಗಾತಿಗಳಾಗುತ್ತಿರುವುದು ಜನರ ಆದೇಶದ ಪಾಲನೆಗೆ’. “ಈ ನಾಡಿನ ಜನರ, ರೈತರ ಸಂಕಷ್ಟ ನೋಡಲಾಗುವುದಿಲ್ಲ. ಸರ್ವತೋಮುಖ ಅಭಿವೃದ್ಧಿಗೆ ಪಣ ತೊಡುತ್ತೇವೆ’.

ದುರಂತ ಎಂದರೆ ಗೌರವಾನ್ವಿತ ಜನಪ್ರತಿನಿಧಿಗಳು ಹೇಳುವ ಇಂಥ ಮಾತನ್ನು ನಾವು ದೇವರು ಹೇಳಿಸಿದ್ದಾನೇನೋ ಎಂಬಂತೆ ಪರಿಭಾವಿಸುತ್ತೇವೆ. ಎಷ್ಟೋ ಬಾರಿ, ಶಾಸಕ ಮಂತ್ರಿಗಳೇ ನಮಗೆ ದೇವರು! ರಾಜ್ಯದ ಜನರಿಗಾಗಿ ಅಧಿಕಾರ ಹಿಡಿಯುವ ಸರ್ಕಸ್‌ನಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ಗಳಿದ್ದರೆ, ಅತ್ತ ಬಾಯ್ತುದಿಯಲ್ಲಿರುವ ಜನರ ಹಿತಕ್ಕೆ ಮಾರಕವಾದ ತೀರ್ಮಾನವನ್ನು ನಾಡಿನ ವಿದ್ಯುತ್‌ ಸರಬರಾಜು ಕಂಪನಿಗಳು ಮುಗುಮ್ಮಾಗಿ ಮಾಡಿವೆ!

ಸೋಲಾರ್‌ ರೂಫ್ಟಾಪ್‌ಗೆ ನೋ!:  ಸೂರ್ಯ ನಮಗೆ ಪುನಶ್ಚೇತನಗೊಳ್ಳುವ ಶಕ್ತಿ ಮೂಲ. ಅವನಿಂದ ನಾವು ವಿದ್ಯುತ್‌ಅನ್ನು ಪಡೆಯಬಹುದು. ಪರಿಸರದ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳಬಹುದು ಎಂಬುದು ಸತ್ಯ. ಕಳೆದ ಕೆಲ ವಾರಗಳಿಂದ ಈ “ಸೂರ್ಯ ಶಿಕಾರಿ’ ಹೇಳುತ್ತಿರುವುದು ಕೂಡ ಅದೇ. ಅತ್ತ ಪ್ರಕೃತಿಗೂ ಪೂರಕವಾದ, ಇತ್ತ ತೀರಾ ಅನಿವಾರ್ಯವಾದ ವಿದ್ಯುತ್‌ ಅವಶ್ಯಕತೆಯನ್ನು ಪೂರೈಸುವ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಸರ್ಕಾರಗಳು ಮುಂದಾಗಬೇಕು.

ಇದಕ್ಕೆ ರಾಜ್ಯದ ವಿದ್ಯುತ್‌ ಗ್ರಾಹಕನನ್ನೇ ಉತ್ಪಾದಕನನ್ನಾಗಿಯೂ ಬದಲಾಯಿಸಬಹುದು. ಸೋಲಾರ್‌ ರೂಫ್ ಟಾಪ್‌ ಎಂಬುದು ಅದಕ್ಕಿರುವ ಸಾಧ್ಯತೆ. ಅದರಲ್ಲಿ ಯಶಸ್ವಿಯಾದ ರಾಜ್ಯದ ಹಲವು ನಾಗರಿಕರು, ರೈತರು ಇದ್ದಾರೆ ಎಂಬುದನ್ನು ಹೇಳಲಾಗಿತ್ತು. ಇದೀಗ ಮಾಹಿತಿ ಹೊರಬಿದ್ದಿರುವ ಪ್ರಕಾರ, ಎಸ್ಕಾಂಗಳು ಸದ್ಯ ವಿದ್ಯುತ್‌ ಗ್ರಾಹಕರೊಂದಿಗೆ ಸೋಲಾರ್‌ ವಿದ್ಯುತ್‌ ಕುರಿತಂತೆ ಖರೀದಿ ಒಪ್ಪಂದ ಮಾಡಿಕೊಳ್ಳುವುದನ್ನು ಅಧಿಕೃತವಾಗಿ ಸ್ಥಗಿತಗೊಳಿಸಿವೆ.

ಜನಹಿತ ಎಲ್ಲಿದೆ?: ಬೆಸ್ಕಾಂನ ಉದಾಹರಣೆಯನ್ನು ತೆಗೆದುಕೊಂಡರೆ, ಏಪ್ರಿಲ್‌ ಮೂರರಂದು ಅದು ಹೊರಡಿಸಿರುವ ಸುತ್ತೋಲೆ(ಬೆಸ್ಕಾಂ/ಬಿಸಿ-51/2018-19/ಸಿವೈಎಸ್‌-01) ಪ್ರಕಾರ, ರೂಫ್ಟಾಪ್‌ ಹಾಗೂ ನೆಲದ ಮೇಲೆ ಅಳವಡಿಸುವ ಸೋಲಾರ್‌ ಪ್ರಾಜೆಕ್ಟ್ ಅರ್ಜಿಗಳ ವಿಚಾರದಲ್ಲಿ ಏಪ್ರಿಲ್‌ ಒಂದರಿಂದ ಒಪ್ಪಂದ ಮಾಡಿಕೊಳ್ಳದಂತೆ ಎಲ್ಲ ಕೆಳಗಿನ ಸ್ಥಾನಿಕ ಅಧಿಕಾರಿಗಳಿಗೆ ಸೂಚಿಸಿದೆ.

ಹಿನ್ನೆಲೆ ಇಷ್ಟೇ:  ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರ-ಕೆಇಆರ್‌ಸಿ, ಫೆಬ್ರವರಿ 2ರಂದು ಸೋಲಾರ್‌ ಯೋಜನೆಗಳ ಕುರಿತ ಬೆಲೆ ಪಟ್ಟಿ ಹಾಗೂ ನಿಯಮಗಳ ಕುರಿತು ಮಾರ್ಪಾಡುಗಳಿಗೆ ಕರಡು ನಿಯಮಗಳನ್ನು ಚರ್ಚೆಗೆ ಇಟ್ಟಿದೆ. ಅದರಲ್ಲಿನ ಎರಡು ಮುಖ್ಯ ಸಲಹೆಗಳು ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತವೆ.

ಗ್ರಾಹಕನ ಮಂಜೂರಾದ ಲೋಡ್‌ ಅಥವಾ ಒಪ್ಪಂದದ ಶೇ. 75ರ ಸಾಮರ್ಥ್ಯದ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಮಾತ್ರ ಅವಕಾಶ ಕೊಡಬೇಕು ಎಂಬುದು ಒಂದು. ಈಗ ಸ್ಯಾಂಕ್ಷನ್‌ ಲೋಡ್‌ನ‌ಷ್ಟೇ ಮಾರಾಟಕ್ಕೂ ಅವಕಾಶವಿದೆ. ಒಂದು ಕಿ.ವ್ಯಾನಿಂದ ಸಾವಿರ ಕಿ.ವ್ಯಾ ಸೋಲಾರ್‌ ವಿದ್ಯುತ್‌ ಯೂನಿಟ್‌ಗೆ 3.27 ರೂ. ದರ ನಿಗದಿಪಡಿಸಬಹುದೇ ಎಂಬುದು ಅದರ ಮುಂದಿರುವ ವಿಚಾರಗಳು.

ಠಳಾಯಿಸುವ ರಾಜಕಾರಣಿಗಳಿಗೆ ಬುತ್ತಿ!: 2016ರ ಮೇ ಎರಡರಲ್ಲಿ ಕೆಇಆರ್‌ಸಿ ನೀಡಿದ ಆದೇಶದಂತೆ ನಡೆಯುತ್ತಿದ್ದ ಸೋಲಾರ್‌ ಪವರ್‌ ಜನರೇಶನ್‌ ಒಪ್ಪಂದಗಳನ್ನು ಮಾರ್ಚ್‌ 31ಕ್ಕೆ ಅನ್ವಯವಾಗುವಂತೆ ಎಲ್ಲ ಎಸ್ಕಾಂಗಳು ನಿಲ್ಲಿಸಿವೆ. ನಿಗದಿಪಡಿಸುತ್ತಿರುವ ದರವನ್ನು ಗಮನಿಸಿದರೆ ಭವಿಷ್ಯದಲ್ಲಿ ಯಾವ ಗ್ರಾಹಕರೂ ಈ ದರಕ್ಕೆ ಪಿಪಿಎ ಮಾಡಿಕೊಳ್ಳುವುದು ಕೂಡ ಅಸಂಭವವೇ.

ಅದರಲ್ಲೂ ಈ ದರ 25 ವರ್ಷಗಳ ಒಪ್ಪಂದದ ಸಂಪೂರ್ಣ ಅವಧಿಗೆ ಅನ್ವಯಿಸುತ್ತದೆ ಎಂತಾದರೆ ಇಡೀ ಯೋಜನೆಯತ್ತ ಒಬ್ಬ ಗ್ರಾಹಕನೂ ತಲೆಹಾಕಲಾರ. ದುರಂತವೆಂದರೆ, ಜನರನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುವ ಇಂತಹ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳಲು ಮೊನ್ನೆ ಆಯ್ಕೆಯಾದ ಶಾಸಕ ವೃಂದಕ್ಕೆ ಅವಕಾಶವಿಲ್ಲ! ಹೀಗೂ ತರ್ಕಿಸಬಹುದು, ಪಾವಗಡದ ಸೋಲಾರ್‌ ವಿದ್ಯುತ್‌ ಪಾರ್ಕ್‌ನಲ್ಲಿ ರೈತರ ಹೆಸರಿನಲ್ಲಿ ಬಹುಪಾಲು ಗುತ್ತಿಗೆಗಳನ್ನು ಗಿಟ್ಟಿಸಿಕೊಂಡಿದ್ದು ವಿಧಾನಸೌಧದಲ್ಲಿ ಠಳಾಯಿಸುವ ರಾಜಕಾರಣಿಗಳು.

9 ರೂ. ಯೂನಿಟ್‌ ದರ! ಇತ್ತ ಪ್ರತಿಷ್ಟಿತರ ಶಾಲೆಗಳು, ಸಂಕೀರ್ಣಗಳ ಮೇಲಿನ ರೂಫ್ಟಾಪ್‌ಗ್ಳ ಸಂಬಂಧವೂ 8-9 ರೂ. ಯೂನಿಟ್‌ ಮಾರಾಟದ ಒಪ್ಪಂದ 25 ವರ್ಷಕ್ಕಾಗಿದೆ. ಇಲ್ಲೂ ಹಿನ್ನೆಲೆಯಲ್ಲಿರುವವರು ನಮ್ಮನ್ನಾಳುವವರೇ. ಅವರು ಸುರಕ್ಷಿತವಾದ ಮೇಲೆ ಈ ತರಹದ ಯೋಜನೆಗಳಿಂದ ಎಸ್ಕಾಂಗಳಿಗೆ ಮಾರಕವಾಗುತ್ತದೆ ಎಂಬ ಅಭಿಪ್ರಾಯ ಬಂದಿದೆ! 

ಮತ್ತೆ ಮೂರ್ಖರಾದುದು ಜನಸಾಮಾನ್ಯರೇ. ಎಸ್ಕಾಂಗಳ ಬೀಳಬಹುದಾದ ಆದೇಶದ ಅರಿವಿಲ್ಲದೆ ತಮ್ಮ ಸ್ಯಾಂಕ್ಷನ್‌ ಲೋಡ್‌ನ್ನು ಹೆಚ್ಚು ಮಾಡಿಸಿಕೊಂಡವರು, ಸೋಲಾರ್‌ ಹಾಕಲು ಅಡ್ವಾನ್ಸ್‌ ಕೊಟ್ಟು ಪಿಪಿಎಗೆ ಎಸ್ಕಾಂಗೆ ಅರ್ಜಿ ಸಲ್ಲಿಸಿದವರು, ಅಗತ್ಯ ಪರಿಕರಗಳನ್ನು ಖರೀದಿಸಿದವರು….

ಬೇಸ್ತು ಬಿದ್ದಿದ್ದಾರೆ. ವಿಧಾನಸೌಧದಲ್ಲಿ, ಸುದ್ದಿಗೋಷ್ಠಿಗಳಲ್ಲಿ ಕೇಳುತ್ತಲೇ ಇದ್ದೇವೆ. ಜನ ಸ್ವಾವಲಂಬಿಗಳಾಗಬೇಕು. ಜನರ ಉತ್ಪಾದಕ ಶಕ್ತಿ ಹೆಚ್ಚಬೇಕು. ಮುಂದಿನ ಐದು ವರ್ಷಗಳಲ್ಲಿ ಊಹಿಸದ ಮಾದರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತೇವೆ ಎಂದು ಹೇಳಿದ್ದಕ್ಕೆ ನಾವು ತಲೆದೂಗುತ್ತಲೇ ಇದ್ದೇವೆ. ಛೇ!

* ಗುರು ಸಾಗರ

ಟಾಪ್ ನ್ಯೂಸ್

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12

Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

11-uv-fusion

Simple Life: ಬದುಕು ನಿರಾಡಂಬರವಾಗಿರಲಿ

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.