ಕಾಂಞಂಗಾಡಿನಲ್ಲಿ ಕೈಗಾರಿಕಾ ಪ್ರಾಂಗಣ ಹಸ್ತಾಂತರ ಶೀಘ್ರ

Team Udayavani, May 28, 2018, 6:15 AM IST

27ksde3.jpg

ಕಾಸರಗೋಡು: ಕಾಂಞಂಗಾಡಿನಲ್ಲಿ ಕಂದಾಯ ಇಲಾಖೆಯು ಒದಗಿಸಿದ 130 ಎಕರೆ ಪ್ರದೇಶದಲ್ಲಿ  ಕೈಗಾರಿಕಾ ಪ್ರಾಂಗಣವನ್ನು ನಿರ್ಮಿಸಿ ಉದ್ಯಮಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈ ಮೂಲಕ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರಕುವಂತೆ ಮಾಡಲಾಗುವುದು ಎಂದು ಕೇರಳ ಕೈಗಾರಿಕಾ ಖಾತೆ ಸಚಿವ ಎ.ಸಿ.ಮೊದೀನ್‌ ಹೇಳಿದ್ದಾರೆ.

ರಾಜ್ಯ ಸರಕಾರದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡು 34ನೇ ವರ್ಷದ ಸಂದರ್ಭದಲ್ಲಿ ಕಾಸರಗೋಡು ಕಲೆಕ್ಟರೇಟ್‌ನಲ್ಲಿ  ಏರ್ಪಡಿಸಲಾಗಿದ್ದ  ಜಿಲ್ಲಾ ಮಟ್ಟದ ಅಭಿವೃದ್ಧಿ  ಕಾರ್ಯಾ
ಗಾರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಕಾಸರಗೋಡು ಜಿಲ್ಲೆಯು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಮೂರು ದಶಕಗಳ ಬಳಿಕವೂ ಅಗತ್ಯದ ಭೂ ಪ್ರದೇಶ ಸಹಿತ ಎಲ್ಲ  ಸೌಕರ್ಯಗಳಿದ್ದರೂ ಜಿಲ್ಲೆಗೆ ಇನ್ನೂ  ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈ ಕಾರ್ಯಾಗಾರದ ಮೂಲಕ ಅದಕ್ಕೊಂದು ಪರಿಹಾರ ಕಾಣಿಸಲು ಸಾಧ್ಯವಾಗಬಹುದು ಎಂದು ಅವರು ನುಡಿದರು.ವಿವಿಧ ಪ್ರದೇಶಗಳನ್ನು  ಸಂಪರ್ಕಿಸಲು ಹೆಚ್ಚಿನ ರಸ್ತೆಗಳು, ಸೇತುವೆಗಳನ್ನು  ನಿರ್ಮಿಸಿ ಕೈಗಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು  ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮಲೆನಾಡು ಹೆದ್ದಾರಿ, ಕರಾವಳಿ ಹೆದ್ದಾರಿಗಳಲ್ಲದೇ ಜಲಸಾರಿಗೆಯನ್ನು  ಸಹ ಅಭಿವೃದ್ಧಿಪಡಿಸಬೇಕು. ಕೇರಳದಲ್ಲಿ  ಇದಕ್ಕಾಗಿ ಕಿಫ್‌ಬಿ ಮೂಲಕ 50,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದರು.

ಕೈಗಾರಿಕೆ ಪ್ರಗತಿಗೆ ಕಾನೂನು ತಿದ್ದುಪಡಿ ಗಲಭೆ, ಮುಷ್ಕರ ರಹಿತವಾದ ಕೈಗಾರಿಕಾ ವಾತಾವರಣವನ್ನು  ಸೃಷ್ಟಿಸಲು ಈಗಾಗಲೇ ಏಳರಷ್ಟು  ಕಾನೂನು ತಿದ್ದುಪಡಿಗಳನ್ನು  ತರಲಾಗಿದೆ. 30 ದಿನಗಳೊಳಗೆ ಕೈಗಾರಿಕೆಯನ್ನು  ಆರಂಭಿಸಲು ಸಾಧ್ಯವಾಗುವ ರೀತಿಯಲ್ಲಿ  ನೂತನ ಕಾನೂನು ಜಾರಿಗೆ ಬಂದಿದ್ದು, ಇದು ಉದ್ಯಮವನ್ನು  ಪ್ರೋತ್ಸಾಹಿಸಲು ಸಹಕಾರಿಯಾಗಿದೆ. 

ಮುಂದಿನ ಮೂರು ವರ್ಷಗಳಲ್ಲಿ  ಜಿಲ್ಲೆಯಲ್ಲಿ  ಈಗಾಗಲೇ ಘೋಷಿಸಿದ ಯೋಜನೆಗಳನ್ನು ಪೂರ್ತಿಗೊಳಿಸಲಾಗುವುದಲ್ಲದೇ ಹೊಸ ಯೋಜನೆಗಳ ಘೋಷಣೆಯನ್ನು  ಮಾಡಲಾಗುವುದು ಎಂದು ಕಾರ್ಯಾಗಾರದಲ್ಲಿ  ಅಧ್ಯಕ್ಷತೆ ವಹಿಸಿದ್ದ  ರಾಜ್ಯ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್‌ ತಿಳಿಸಿದರು.

ಈಗಾಗಲೇ ಕೋಟಿಗಟ್ಟಲೆ ರೂಪಾಯಿ ಅನುದಾನವನ್ನು  ಜಿಲ್ಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಅಭಿವೃದ್ಧಿ
ಯಾಗದ ವಲಯಗಳಿಗೆ ಪ್ರತ್ಯೇಕ ವಿಶೇಷ ಆದ್ಯತೆ ನೀಡಲಾಗುವುದು. ಕೈಗಾರಿಕೆಯನ್ನು  ಆರಂಭಿಸಲು ಅಡ್ಡಿಯಾ
ಗುವ ಧೋರಣೆಗಳನ್ನು  ನೀಗಿಸಿ ಸಕಲ ವ್ಯವಸ್ಥೆಯನ್ನು  ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. 

ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರಲ್ಲಿ  ಚರ್ಚಿಸಿ ಮತ್ತಷ್ಟು  ಯೋಜನೆಗಳು ಲಭಿಸುವಂತೆ ಮಾಡಲಾಗು ವುದು ಎಂದರು.

ಕಾಸರಗೋಡು ಸಂಸದ ಪಿ. ಕರುಣಾಕರನ್‌, ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್‌, ಜಿಲ್ಲಾ  ಪಂಚಾಯತ್‌ ಅಧ್ಯಕ್ಷ  ಎ.ಜಿ.ಸಿ.ಬಶೀರ್‌ ಮುಂತಾದವರು ಶುಭಹಾರೈಸಿದರು. ಕಾಸರಗೋಡಿನ ಅನಿವಾಸಿ ಸಮೂಹ ಅಭಿವೃದ್ಧಿ ಸಾಧ್ಯತೆ ಎಂಬ ವಿಷಯದಲ್ಲಿ  ನೋರ್ಕಾ ಮಾಜಿ ಸಿಇಒ ಕೆ.ಟಿ.ಬಾಲಕೃಷ್ಣನ್‌, ಆಹಾರ ಸಂಸ್ಕರಣಾ ವಲಯದಲ್ಲಿ ಕೈಗಾರಿಕೆಗಳ ಸಾಧ್ಯತೆ ಎಂಬ ವಿಚಾರದಲ್ಲಿ  ಕೇರಳ ದಿನೇಶ್‌ ಬೀಡಿ ಸಂಸ್ಥೆಯ ಅಧ್ಯಕ್ಷ  ಸಿ.ರಾಜನ್‌, ಪ್ರವಾಸೋದ್ಯಮಗಳ ಸಾಧ್ಯತೆಗಳ ಕುರಿತು ಬಿಆರ್‌ಡಿಸಿ ಎಂಡಿ ಟಿ.ಕೆ.ಮನ್ಸೂರ್‌, ಉನ್ನತ ಶಿಕ್ಷಣ ವಲಯ ಎಂಬ ವಿಷಯದಲ್ಲಿ  ಕೇರಳ ಕೇಂದ್ರ ವಿಶ್ವವಿದ್ಯಾಲಯ ಉಪಕುಲಪತಿ ಡಾ| ಪ್ರೊ| ಜಿ.ಗೋಪಕುಮಾರ್‌ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಸ್ವಾಗತಿಸಿ, ಜಿಲ್ಲಾ  ವಾರ್ತಾಧಿಕಾರಿ ಇ.ವಿ.ಸುಗತನ್‌ ವಂದಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಸೂತ್ರ 
ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಪ್ಯಾಕೇಜ್‌ಗಳ ಅನುಷ್ಠಾನ ಅಗತ್ಯ. ಅಲ್ಲದೆ ಹಲವು ಸೂತ್ರಗಳನ್ನು  ರೂಪಿಸಿ ಅದರಂತೆ ಮುಂದುವರಿಯಬೇಕು. ಜಿಲ್ಲೆಯಲ್ಲಿ  ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ ಅಲ್ಲದೆ ಉದ್ಯೋಗ ಸಂಬಂಧಿತ ಎಲ್ಲಾ  ವಲಯಗಳನ್ನು  ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಬೇಕು. ಜಿಲ್ಲಾ  ಪ್ರಗತಿಗೆ ಜನರ ಸಹಭಾಗಿತ್ವವೂ ಅಷ್ಟೇ ಆವಶ್ಯಕವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚೆಚ್ಚು  ಮೂಲ ಸೌಕರ್ಯಗಳನ್ನು  ಒದಗಿಸಬೇಕು. ಮಲೆನಾಡು ಹೆದ್ದಾರಿಯನ್ನು  ಅತಿ ಶೀಘ್ರದಲ್ಲಿ  ಪೂರ್ತಿಗೊಳಿಸಬೇಕು. ಜಿಲ್ಲೆಯಲ್ಲಿ ಗಲಭೆ, ಹಿಂಸಾಚಾರ ಇತ್ಯಾದಿ ನಡೆಯದಂತೆ ಗಮನಿಸಬೇಕು. ಎಲ್ಲರಿಗೂ ಭೂಮಿ ಮತ್ತು  ಮನೆ ಎಂಬ ಯೋಜನೆಯನ್ನು  ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು.

ಟಾಪ್ ನ್ಯೂಸ್

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

court

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.