ಐಪಿಎಲ್ ವಿಜೇತರಿಗೆ 20 ಕೋಟಿ ರೂ. ಬಂಪರ್!
Team Udayavani, May 28, 2018, 6:20 AM IST
ಮುಂಬಯಿ: 2018ರ ಐಪಿಎಲ್ ಪಂದ್ಯಾವಳಿಗೆ ರವಿವಾರ ರಾತ್ರಿ ತೆರೆ ಬಿದ್ದಿದೆ. ಯಾರು ಗೆಲ್ಲಬಹುದೆಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರವೂ ಲಭಿಸಿದೆ. ಆದರೆ ವಿಜೇತ ತಂಡಕ್ಕೆ ಲಭಿಸುವ ಹಾಗೂ ಇತರ ವಿವಿಧ ಸಾಧಕರಿಗೆ ಸಿಗುವ ಬಹುಮಾನದ ಮೊತ್ತದ ಬಗ್ಗೆ ಕುತೂಹಲವಿದೆ. ಬನ್ನಿ, ಇದನ್ನು ತಣಿಸಿಕೊಳ್ಳಿ.
ಈ ಬಾರಿಯ ಐಪಿಎಲ್ ವಿಜೇತ ತಂಡ 20 ಕೋ. ರೂ. ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ. ಈ ಮೊತ್ತ ಕಳೆದ ವರ್ಷಕ್ಕಿಂತ 5 ಕೋ.ರೂ. ಹೆಚ್ಚು. ಫೈನಲ್‌ನಲ್ಲಿ ಪರಾಭವಗೊಂಡ ತಂಡಕ್ಕೂ ಭಾರೀ ನಿರಾಸೆಯೇನೂ ಆಗಿಲ್ಲ. ಅದಕ್ಕೆ 12.5 ಕೋ.ರೂ. ಮೊತ್ತ ಲಭಿಸಿದೆ. ಕಳೆದ ವರ್ಷ ಸಿಕ್ಕಿದ್ದು 10 ಕೋ.ರೂ.
ವೈಯಕ್ತಿಕ ಬಹುಮಾನ
ವೈಯಕ್ತಿಕ ಬಹುಮಾನದ ಮೊತ್ತದಲ್ಲೂ ಈ ಸಲ ಸಾಕಷ್ಟು ಹೆಚ್ಚಳವಾಗಿದೆ. ಅದರಂತೆ ಕೂಟದ “ಬಹುಮೂಲ್ಯ ಆಟಗಾರ’ನಿಗೆ 10 ಲಕ್ಷ ರೂ. ಲಭಿಸಿದೆ. ಅತ್ಯಧಿಕ ರನ್ ಬಾರಿಸಿ “ಆರೆಂಜ್ ಕ್ಯಾಪ್’ ತನ್ನದಾಗಿಸಿಕೊಂಡ ಬ್ಯಾಟ್ಸ್
ಮನ್ ಹಾಗೂ ಅತೀ ಹೆಚ್ಚು ವಿಕೆಟ್ ಉರುಳಿಸಿ “ಪರ್ಪಲ್ ಕ್ಯಾಪ್’ ಧರಿಸಿದ ಬೌಲರ್‌ಗೂ ತಲಾ 10 ಲಕ್ಷ ರೂ. ಬಹುಮಾನ ಲಭಿಸಿದೆ. ಕೂಟದ ಉದಯೋನ್ಮುಖ ಆಟಗಾರ ಕೂಡ 10 ಲಕ್ಷ ರೂ. ಪಡೆದಿದ್ದಾನೆ.
7 ಹಾಗೂ ಇದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಯೋಜಿ ಸಿದ ತಾಣಕ್ಕೆ ಟ್ರೋಫಿ ಹಾಗೂ 50 ಲಕ್ಷ ರೂ. ಬಹುಮಾನ, 7ಕ್ಕಿಂತ ಕಡಿಮೆ ಪಂದ್ಯಗಳನ್ನು ಆಯೋಜಿಸಿದ ಮೈದಾನ ಗಳಿಗೆ ಟ್ರೋಫಿ ಹಾಗೂ 25 ಲಕ್ಷ ರೂ. ಚೆಕ್ ಲಭಿಸಿದೆ.
ಈ ಬಾರಿ ನೂತನ ಪ್ರಶಸ್ತಿ
ಅಂಗಳದಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಆಟಗಾರನಿಗೂ 10 ಲಕ್ಷ ರೂ. ಸಿಕ್ಕಿದ್ದು, ಇದು ಅತ್ಯುತ್ತಮ ಕ್ಯಾಚ್ ಪಡೆದ ಕ್ಷೇತ್ರರಕ್ಷಕನ ಪಾಲಾಗಿದೆ. ಕೆಲವು ನೂತನ ಪ್ರಶಸ್ತಿಗಳೂ ಈ ಬಾರಿ ಆಟಗಾರರನ್ನು ಅರಸಿಕೊಂಡು ಬಂದಿವೆ. ಇವುಗಳಲ್ಲಿ ಮುಖ್ಯವಾದುದು “ಸ್ಟೈಲಿಶ್ ಪ್ಲೇಯರ್’ ಮತ್ತು “ನಯೀ ಸೋಚ್’. ಇದಕ್ಕೂ 10 ಲಕ್ಷ ರೂ. ಬಹುಮಾನ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.