ಶಾಲೆ ಮಕ್ಕಳ ವಾಹನ ಸುರಕ್ಷತೆಗೂ ಇರಲಿ ಆದ್ಯತೆ


Team Udayavani, May 28, 2018, 5:25 AM IST

school-auto-27-5.jpg

ಪುತ್ತೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಮತ್ತು ಅವುಗಳಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹೆತ್ತವರು ಶಾಲಾ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ. ಎರಡು ವರ್ಷಗಳ ಹಿಂದೆ, 2016ರ ಜೂನ್‌ ನಲ್ಲಿ ಕುಂದಾಪುರದ ತ್ರಾಸಿಯಲ್ಲಿ ಶಾಲಾ ಮಕ್ಕಳ ವಾಹನ ಅಪಘಾತಗೊಂಡ ಬಳಿಕ ಎಚ್ಚೆತ್ತುಕೊಂಡ ಇಲಾಖೆಗಳು ಕಠಿನ ನಿಯಮಗಳನ್ನು ಜಾರಿಗೊಳಿಸಿದ್ದವು. ಆದರೆ ಹಲವು ದಿನಗಳು ಕಳೆದ ಬಳಿಕ ಈ ಕ್ರಮಗಳಿಗೆ ಸಾರ್ವಜನಿಕರು, ಶಾಲಾ ವಾಹನಗಳಿಗೆ ಸಂಬಂಧಪಟ್ಟವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ 2017ನೇ ಸಾಲಿನಲ್ಲಿ ಆರಂಭದಲ್ಲೇ ನಿಯಮಗಳ ಕುರಿತು ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿಯೂ ಇಲಾಖೆಗಳ ಕಡೆಯಿಂದ ಇಂತಹ ಕ್ರಮಗಳ ಆವಶ್ಯಕತೆ ಇದೆ.

ಖಾಸಗಿ ವಾಹನ ಕುರಿತ ಗೊಂದಲ
ಹಲವು ವಿದ್ಯಾಸಂಸ್ಥೆಗಳು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಮರಳಿ ಬಿಡಲು ಶಾಲಾ ವಾಹನ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಆದರೆ ಶಾಲಾ ವಾಹನಗಳಲ್ಲಿ ಬರುವ ಮಕ್ಕಳ ಪ್ರಮಾಣ ಶೇ.30ರಷ್ಟು ಮಾತ್ರ ಇದೆ. ಉಳಿದಂತೆ ಶೇ. 70ರಷ್ಟು ಮಕ್ಕಳು ಸರಕಾರಿ ಬಸ್ಸುಗಳು, ಖಾಸಗಿ ಬಾಡಿಗೆ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಗ್ರಾಮಾಂತರ ಮಕ್ಕಳು ಈ ವ್ಯವಸ್ಥೆಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಖಾಸಗಿ ಬಾಡಿಗೆ ವಾಹನಗಳಲ್ಲಿ ಎಷ್ಟು ಶಾಲಾ ಮಕ್ಕಳನ್ನು ಕರೆದೊಯ್ಯಬಹುದು ಎಂಬ ಕುರಿತು ಗೊಂದಲಗಳಿವೆ. ಮಕ್ಕಳನ್ನು ಕಿಕ್ಕಿರಿದು ಕರೆದೊಯ್ಯುವುದು ಹಾಗೂ ಆ ವಾಹನಗಳಲ್ಲಿ ಸುರಕ್ಷತೆ ಇಲ್ಲದಿರುವುದು ಚರ್ಚೆಯ ವಿಚಾರ. ಆದರೆ ಹಲವು ವಾಹನ ಚಾಲಕರು -ಮಾಲಕರಿಗೆ ಇದೇ ಹೊಟ್ಟೆ ಹೊರೆಯುವ ಹಾದಿ. ಪ್ರಸ್ತುತ ವಾಹನಗಳ ಟ್ಯಾಕ್ಸ್‌, ಇನ್ಶೂರೆನ್ಸ್‌ ಹೆಚ್ಚಳವಾಗಿದ್ದು, ಮಕ್ಕಳನ್ನು ಸಾಗಿಸುವ ನಿಯಮದಲ್ಲಿ ಸಡಿಲಿಕೆ ಮಾಡಿಕೊಳ್ಳಬೇಕೆಂಬ ಒತ್ತಾಯವೂ ವಾಹನಗಳ ಮಾಲಕರ ಕಡೆಯಿಂದ ಇದೆ.

ಹೀಗಿದೆ RTO ನಿಯಮ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಕರೆದೊಯ್ಯುವಾಗ ಶಾಲಾ ಬಸ್ಸುಗಳು ಅನುಸರಿಸಬೇಕಾದ ಕ್ರಮಗಳ ಕುರಿತು RTO ಮೂಲಕ ನಿರ್ದೇಶನ ನೀಡಲಾಗಿದೆ.
– ಶಾಲಾ ಬಸ್ಸಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ಕಡ್ಡಾಯವಾಗಿ ಶಾಲಾ ಬಸ್ಸು ಎಂದು ಬರೆದಿರಬೇಕು.
– ವಿದ್ಯಾಸಂಸ್ಥೆಗಳು ಶಾಲಾ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರೆ ಬಸ್ಸು ಶಾಲಾ ಕರ್ತವ್ಯದಲ್ಲಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಬೇಕು.
– ನಿಗದಿಪಡಿಸಿದ ಆಸಗಳಿಗಿಂತ ಹೆಚ್ಚು ಆಸನಗಳನ್ನು ಅಳವಡಿಸಬಾರದು
–  ಪ್ರಥಮ ಚಿಕಿತ್ಸಾ ಬಾಕ್ಸ್‌ನ್ನು ಹೊಂದಿರಬೇಕು
– ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿರಬೇಕು
– ಅಗ್ನಿಶಮನ ಉಪಕರಣ ಹೊಂದಿರಬೇಕು
- ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು
- ಬಾಗಿಲುಗಳು ಸಮರ್ಪಕ ಲಾಕ್‌ ಹೊಂದಿರಬೇಕು
- ಚಾಲಕರು 5 ವರ್ಷಗಳ ಘನ ವಾಹನ ಚಾಲನಾನುಭವ ಹೊಂದಿರಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು.
- ಸೀಟುಗಳ ಕೆಲಭಾಗದಲ್ಲಿ ಶಾಲಾ ಬ್ಯಾಗ್‌ ಗಳನ್ನು ಇರಿಸಲು ವ್ಯವಸ್ಥೆ ಇರಬೇಕು.
- ಬಸ್ಸುಗಳಲ್ಲಿ ಶಾಲಾ ಬೆಂಗಾವಲು ಇರಬೇಕು ಹಾಗೂ ಶಿಕ್ಷಕರೋರ್ವರು ಸುರಕ್ಷತಾ ಕ್ರಮವನ್ನು ಪರಿಶೀಲನೆ ನಡೆಸಬೇಕು.
- ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕು.

ಖಾಸಗಿ ವಾಹನಗಳು ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸಬೇಕಾದರೆ…
- ಮೋಟಾರು ವಾಹನ ಕಾಯಿದೆ 1988 ಕಲಂ 74ರ ಪ್ರಕಾರ ವಾಹನ ರಹದಾರಿ ಹೊಂದಿರಬೇಕು
- ವಾಹನದ ಆಸನ ಸಾಮರ್ಥ್ಯ 12+1 ಮೀರಬಾರದು. ನಿಗದಿತ ಆಸನ ಸಾಮರ್ಥ್ಯ ಬದಲಾವಣೆ ಮಾಡಿರಬಾರದು
- ಅನುಮೋದಿತ ಸ್ಪೀಡ್‌ ಗವರ್ನರ್‌ ಅಳವಡಿಸಿದ್ದು, ವೇಗಮಿತಿ ಕಿ.ಮೀ.40ಕ್ಕೆ ನಿಯಂತ್ರಿತವಾಗುವಂತೆ ಇರಬೇಕು.
- ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು
- ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿಯಬೇಕು ಹಾಗೂ ಇತರ.

ಜಿಲ್ಲಾ ಸಭೆ ಕರೆದಿದ್ದೇವೆ
ಮಕ್ಕಳ ಸುರಕ್ಷತೆಯ ಶಾಲಾ ಪ್ರಯಾಣದ ದೃಷ್ಟಿಯಿಂದ ಶಾಲೆಗಳು, ಪೋಷಕರು, ಪೊಲೀಸ್‌ ಇಲಾಖೆ, RTO ಸಮನ್ವಯತೆಯ ಜವಾಬ್ದಾರಿ ತೋರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಇತರ ಇಲಾಖೆಗಳ ಜಿಲ್ಲಾ ಸಭೆ ಕರೆದಿದ್ದೇವೆ. ತಾಲೂಕು ವ್ಯಾಪ್ತಿಗಳಲ್ಲೂ ಸೂಕ್ತ ನಿರ್ದೇಶನ ನೀಡಲಿದ್ದೇವೆ.
– ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ಶಾಲೆಗಳಿಗೆ ನಿರ್ದೇಶನ
ಶಾಲೆಗಳಲ್ಲಿರುವ ಮಕ್ಕಳ ಸುರಕ್ಷಾ ಸಮಿತಿಯ ಸಭೆ ಕರೆಯಬೇಕು. ಈ ಸಮಿತಿಯಲ್ಲಿ ವಾಹನಗಳಲ್ಲಿ ಬರುವ ಮಕ್ಕಳ ಮಾಹಿತಿ, ಕೈಗೊಂಡಿರುವ ಸುರಕ್ಷತೆ ಕ್ರಮಗಳ ಕುರಿತು ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು.
– ಸುಕನ್ಯಾ ಡಿ.ಎನ್‌., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ನಿಯಮ ಪಾಲನೆ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶಾಲಾ ವಾಹನಗಳಲ್ಲಿ ಸುರಕ್ಷತೆ ಕ್ರಮಗಳನ್ನು ಅನುಷ್ಠಾನಿಸುವ ಕುರಿತ RTO ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ನಿಯಮ ಮೀರಿದವರಿಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯದಂತೆ ನಿಯಮವಿದ್ದರೂ ಸಣ್ಣ ನಗರಗಳಲ್ಲಿ ಸಿಟಿ ಬಸ್ಸು ವ್ಯವಸ್ಥೆ ಇಲ್ಲದಿರುವುದರಿಂದ ವಿನಾಯಿತಿ ನೀಡಲಾಗುತ್ತಿದೆ. ಆದರೆ ಮಕ್ಕಳನ್ನು ಮಿತಿಯಲ್ಲಷ್ಟೇ ಕೊಂಡೊಯ್ಯಬೇಕು.
– ಫೆಲಿಕ್ಸ್‌ ಡಿ’ಸೋಜಾ, RTO, ಪುತ್ತೂರು

— ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

4

Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು

3

Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್‌!

2

Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ

1(1

Sullia: ಪ್ಲಾಟ್‌ಫಾರ್ಮ್ ಎತ್ತರಿಸುವ ಕಾರ್ಯ ಪೂರ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.