ಶಾಲೆ ಪ್ರಾರಂಭೋತ್ಸವ ಸಂಭ್ರಮಕ್ಕೆ ಭರದ ಸಿದ್ಧತೆ


Team Udayavani, May 28, 2018, 6:00 AM IST

school-children-27-5.jpg

ಸುಳ್ಯ: ನಲವತ್ತೆಂಟು ದಿನಗಳ ಬೇಸಗೆಯ ರಜೆ ಮುಗಿದಿದೆ. ಇಷ್ಟು ದಿನ ಆಟ-ತುಂಟಾಟಗಳಿಂದ ಹೆತ್ತವರನ್ನು ಸುಸ್ತಾಗಿಸಿದ್ದ ಚಿಣ್ಣರು ಸೋಮವಾರದಿಂದ ಹೆಗಲಿಗೆ ಪಾಟಿ ಚೀಲ ಜೋತು ಹಾಕಿಕೊಂಡು, ಭಾರವಾದ ಹೆಜ್ಜೆಗಳೊಂದಿಗೆ ಶಾಲೆಗಳತ್ತ ತೆರಳಬೇಕಿದೆ. ಇದಕ್ಕೆಂದೇ ಮಕ್ಕಳು, ಹೆತ್ತವರು ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲಾ ಆರಂಭದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಹಾಗೂ ಆಯಾ ಶಾಲೆಗಳ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ. ಅದರಂತೆ ಶಾಲಾ ಪ್ರಾರಂಭದ ದಿನವಾದ ಸೋಮವಾರ ಶಾಲಾ ಪರಿಸರ ಸ್ವಚ್ಛಗೊಳಿಸಿ, ಬಳಿಕ ಮುಂದಿನ ಮೂರ್‍ನಾಲ್ಕು ದಿನಗಳ ಒಳಗೆ ಒಂದು ದಿನವನ್ನು ಶಾಲಾ ಆರಂಭೋತ್ಸವ ದಿನವನ್ನಾಗಿ ಗುರುತಿಸಿ ಆಚರಿಸಲಾಗುತ್ತಿದೆ. ಇದು ಮಕ್ಕಳ ಪಾಲಿಗೆ ಸಂಭ್ರಮ ಸಡಗರದ ದಿನವಾಗಲಿದೆ.

ತಳಿರು – ತೋರಣ
ಈ ವೇಳೆ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಮಕ್ಕಳನ್ನು ಬ್ಯಾಂಡ್‌ ವಾದ್ಯಗಳ ನಿನಾದದ ಮೂಲಕ ಶಾಲೆ ತನಕ ಮೆರವಣಿಗೆಯಲ್ಲಿ ಕರೆ ತಂದು ಸ್ವಾಗತಿಸಿ ಸಂಭ್ರಮಿಸಲಾಗುತ್ತದೆ. ಅಲ್ಲಿ ಮಕ್ಕಳಿಗೆ ಸಿಹಿತಿಂಡಿ ಹಂಚಿ ಖುಷಿ ಪಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ಸಿಹಿಯೊಂದಿಗೆ ಬಿಸಿಯೂಟ ಮತ್ತಷ್ಟು ಖುಷಿ ನೀಡಲಿದೆ. ಪ್ರಾರಂಭೊತ್ಸವದ ಈ ಸಂಭ್ರಮದಲ್ಲಿ ಮಕ್ಕಳ ಹೆತ್ತವರು, ಶಾಲಾ ಶಿಕ್ಷಕರು ಪಾಲುದಾರರಾಗಿ, ಮಕ್ಕಳ ಈ ಹಬ್ಬದ ರಂಗು ಹೆಚ್ಚಿಸಲಿದ್ದಾರೆ.

ಶಾಲೆ ಪ್ರಾರಂಭದ ದಿನ ಮಕ್ಕಳೆಲ್ಲರೂ ಹೊಸ ಉಡುಗೆಯುಟ್ಟು ಶಾಲೆಗೆ ಬರುತ್ತಾರೆ. ಹೀಗೆ ಬರುವ ಮಕ್ಕಳು ಸಹಪಾಠಿಗಳ ಜತೆ ತಾವುಟ್ಟ ಬಟ್ಟೆಯ, ರಜೆಯಲ್ಲಿ ಕಳೆದ ದಿನಗಳ ರಸಾನುಭವಗಳ ಕುರಿತು ಪರಸ್ಪರ ಹರಟೆ ಹೊಡೆಯುವರು. ಹೊಸ ತರಗತಿಯಲ್ಲಿ ಹಳೆ- ಹೊಸ ಗೆಳೆಯರ ಸಾಂಗತ್ಯ ಬೆಳೆಸಿ ಅವರ ಜತೆ ಸೇರಿ ಸಂಭ್ರಮಿಸುವುದೇ ಮಕ್ಕಳ ಪಾಲಿಗೆ ಹಬದ ವಾತಾವರಣ.

ಕಲಿಕೆಗೆ ಸಿದ್ಧತೆ
ವರ್ಷವಿಡಿ ಇನ್ನು ಪಾಟಿ ಚೀಲ ಹೊತ್ತು ಶಾಲೆಗೆ ತೆರಳಬೇಕು. ತರಗತಿ ಕೊಠಡಿ ಒಳಗೆ ಕುಳಿತು ಓದು- ಪಾಠ- ಅಭ್ಯಾಸದಲ್ಲಿ ತೊಡಗಬೇಕು. ಅದಕ್ಕೆಂದೆ ಮುಂದಿನ ಶ್ಯಕ್ಷಣಿಕ ವರ್ಷಕ್ಕೆ ಬೇಕಿರುವ ಸಾಮಾಗ್ರಿಗಳ ಕುರಿತು ಹೆತ್ತವರು ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿನ ಚಟುವಟಿಕೆಗಳ ಕುರಿತು ಮಕ್ಕಳಿಗೆ ತಿಳಿಹೇಳಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ವಿತರಣೆಗೆ ಇರುವ ಶೇ. 90ರಷ್ಟು ಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಪ್ರಾರಂಭೋತ್ಸವದ ದಿನ ಮಕ್ಕಳಿಗೆ ಅವುಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಶೂ ಹಾಗೂ ಸಮವಸ್ತ್ರಗಳು ಇನ್ನು ಬರಬೇಕಾಷ್ಟೆ.

ತಮ್ಮ ಮಕ್ಕಳಿಗೆ ಪುಸ್ತಕ, ಕೊಡೆ, ಇತ್ಯಾದಿ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿ ಸಿದ್ಧತೆ ನಡೆಸಿದ್ದಾರೆ. ಮಕ್ಕಳನ್ನು ಶಾಲೆ ಹಾಗೂ ಹಾಸ್ಟೇಲ್‌ ಗ‌ಳಲ್ಲಿ ದಾಖಲಾತಿಗಾಗಿ ಹೆತ್ತವರು ಮಕ್ಕಳ ಜತೆ ಓಡಾಡುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ. ಶಾಲಾ ಪರಿಸರ ಸ್ವಚ್ಛತೆಗೊಳಿಸಿ ಶಾಲೆ ಕಟ್ಟಡ ಮಕ್ಕಳ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದೇವೆ. ಪ್ರಾರಂಭೋತ್ಸವ ದಿನವನ್ನು ಶಿಕ್ಷಕರ ಸಹಕಾರದಿಂದ ಹಬ್ಬದ ರೀತಿಯಲ್ಲಿ ನಡೆಸಲು ಶಾಲಾಭಿವೃದ್ಧಿ ಸಮಿತಿಗಳೂ ನಿರ್ಧರಿಸಿವೆ.

ಜನಪ್ರತಿನಿಧಿಗಳಿಲ್ಲ
ರಾಜ್ಯದಲ್ಲಿ ನೀತಿ ಸಂಹಿತೆ ಇರುವುದರಿಂದ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸದಂತೆ ಶಿಕ್ಷಣ ಇಲಾಖೆ ಎಲ್ಲ ಸರಕಾರಿ ಶಾಲೆಗಳಿಗೆ ಸೂಚನೆ ನೀಡಿದೆ. ಹೀಗಾಗಿ ಜನಪ್ರತಿನಿಧಿಗಳು ಶಾಲಾ ಪ್ರಾರಂಬೋತ್ಸವದಲ್ಲಿ ಪಾಲ್ಗೊಳ್ಳುವಂತಿಲ್ಲ.

ಖುಷಿ ಮತ್ತು ಬೇಸರ
ಇಷ್ಟು ದಿನ ರಜೆಯನ್ನು ಮನೆಯಲ್ಲಿ, ಅಜ್ಜಿಮನೆಯಲ್ಲಿ ಆಟವಾಡುತ್ತ ಕಳೆದೆ. ಇವತ್ತಿಂದ ಶಾಲೆಗೆ ತೆರಳಬೇಕು. ಶಾಲೆಗೆ ಹೋಗಲು ಖುಷಿ ಆಗುತ್ತದೆ. ಇಷ್ಟು ದಿನ ಖುಷಿಯಾಗಿ ಇದ್ದು ಹೋಗಬೇಕಲ್ಲ ಅಂತ ಬೇಸರ ಆಗುತ್ತದೆ.
– ಪೂಜಾ ಬಿ., 2ನೇ ತರಗತಿ. ಸ.ಕಿ.ಪ್ರಾ. ಶಾಲೆ, ಮರ್ಕಂಜ

ಪ್ರಾರಂಭದ ದಿನ ಭಾಗವಹಿಸುತ್ತೇವೆ
ಶೈಕ್ಷಣಿಕ ವರ್ಷಾರಂಭದ ಹೊತ್ತಿಗೆ ಶಾಲೆಗಳಿಂದ ಪುಸ್ತಕ ಇತ್ಯಾದಿ ಸಾಮಗ್ರಿಗಳು ದೊರೆತರೂ ಕೆಲವನ್ನು ಹೆತ್ತವರಾದ ನಾವೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿ ಕೆಲವನ್ನು ಖರೀದಿಸಿ ಸಂಗ್ರಹಿಸಿದ್ದೇವೆ. ಶಾಲಾ ಪ್ರಾರಂಭದ ದಿನ ಮಕ್ಕಳ ಜತೆ ಶಾಲೆಗೆ ತೆರಳಿ ಭಾಗವಹಿಸುತ್ತೇನೆ.
– ಚಿತ್ರಾವತಿ ಶಿವಕುಮಾರ, ಹರಿಹರ ಪಳ್ಳತ್ತಡ್ಕ- ಹೆತ್ತವರು

— ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.