ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನದ 33ನೇ ಶ್ರಮದಾನ 


Team Udayavani, May 28, 2018, 10:38 AM IST

28-may-3.jpg

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 33ನೇ ಶ್ರಮದಾನ ಕದ್ರಿ ಪಾರ್ಕ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರವಿವಾರ ಜರಗಿತು. ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾ ಮಾನಂದಜಿ ಸಮಕ್ಷಮದಲ್ಲಿ ಯೆನಪೋಯ ವಿವಿಯ ರಿಜಿಸ್ಟ್ರಾರ್‌ ಡಾ| ಶ್ರೀಕುಮಾರ್‌ ಮೆನನ್‌ ಹಾಗೂ ಡಾ| ಸುಬ್ರಹ್ಮಣ್ಯ ಶೆಟ್ಟಿ ಚಾಲನೆ ನೀಡಿದರು. 

ಡಾ| ಶ್ರೀಕುಮಾರ್‌ ಮೆನನ್‌ ಮಾತನಾಡಿ, ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‌ನ ಕಾರ್ಯ ಶ್ಲಾಘನೀಯ. ಈಗ ಯುಜಿಸಿ ಕೂಡ ಸ್ವಚ್ಛತಾ ಅಭಿಯಾನವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಈ ದಿಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿರುವುದು ಸ್ವತ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ ದೊರಕಿದೆ ಎಂದರು.

ಶಿಸ್ತು, ನಿಯಮ ಪಾಲನೆ ಮುಖ್ಯ
ಡಾ| ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ವಿನೂತನ ಭಾರತವನ್ನು ಕಾಣಬೇಕಾದರೆ ವಿದೇಶಗಳಲ್ಲಿರುವ ಸ್ವಚ್ಛತೆ, ಶಿಸ್ತು, ನಿಯಮ ಪಾಲನೆಗಳು ಪ್ರತಿ ಭಾರತೀಯರಲ್ಲಿ ಮೂಡಬೇಕು. ಹೊರದೇಶಕ್ಕೆ ಹೋದಾಗ ನಿಯಮಗಳನ್ನು ಪಾಲಿಸುವ ನಾವು ಭಾರತಕ್ಕೆ ಬಂದಾಗಲೂ ಅದನ್ನು ಅನುಸರಿಸುವಂತಾದಾಗ ಮಾತ್ರ ಸ್ವತ್ಛ ಭಾರತ ಸಾಕಾರಗೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ರಮೇಶ್‌ ರಾವ್‌, ಮಸಾ ಹಿರೊ, ನಾಗೇಶ್‌ ಕೆ., ಪುರುಷೋತ್ತಮ ಪೂಜಾರಿ, ವಿಭಾ ಪ್ರಭು, ಅನಿರುದ್ಧ ನಾಯಕ್‌ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಆರಂಭದಲ್ಲಿ ಕಾರ್ಯಕರ್ತರನ್ನು ಐದು ತಂಡಗಳಾಗಿ ವಿಂಗಡಿಸಿ ಜವಾಬ್ದಾರಿ ಹಂಚಲಾಯಿತು.

ಬಳಿಕ ಕದ್ರಿಪಾರ್ಕ್‌ ಮುಂಭಾಗ, ಕದ್ರಿ ಪಾರ್ಕ್‌ ಒಳಭಾಗ, ಪುಟಾಣಿ ರೈಲು ಟ್ರ್ಯಾಕ್ , ವಾಕಿಂಗ್‌ ಟ್ರ್ಯಾಕ್ ಹಾಗೂ ರೇಡಿಯೋ ಪೆವಿಲಿಯನ್‌ಗಳನ್ನು ಶುಚಿಗೊಳಿಸಲಾಯಿತು. ಮೆಹಬೂಬ್‌ ಖಾನ್‌ ಹಾಗೂ ಸ್ವಯಂಸೇವಕರ ಮತ್ತೂಂದು ತಂಡ ಕದ್ರಿ ಪಾರ್ಕ್‌ನಿಂದ ಪಾದುವಾ ರಸ್ತೆಯಲ್ಲಿ ಸ್ವತ್ಛತಾ ಕಾರ್ಯ ಕೈಗೊಂಡಿತು. 

ಡಾ| ಧನೇಶ ಕುಮಾರ್‌ ಹಾಗೂ ಕಾರ್ಯಕರ್ತರು ಉದ್ಯಾನವನದ ಮುಂಭಾಗದ ಕಾಲುದಾರಿಗಳನ್ನು ಶುಚಿಗೊಳಿಸಿದರು. ಜೆಸಿಬಿ ಯಂತ್ರ ಬಳಸಿಕೊಂಡು ಕಾಲುದಾರಿಯಲ್ಲಿ ಬಿದ್ದುಕೊಂಡಿದ್ದ ದೊಡ್ಡಕಲ್ಲು ಚಪ್ಪಡಿಗಳನ್ನು ತೆಗೆದು, ಬದಿಗೆ ಹಾಕಿ ಮಣ್ಣು ಸಮತಟ್ಟು ಮಾಡಲಾಯಿತು. ಶುಭೋದಯ ಆಳ್ವ ಮಾರ್ಗದರ್ಶನ ನೀಡಿದರು.

ಬ್ಯಾನರ್‌ ತೆರವು
ನಗರದಲ್ಲಿರುವ ಬ್ಯಾನರ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದು ಹಾಗೂ ವಾಹನ ಸವಾರರಿಗೆ ತೊಂದರೆ ನೀಡುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಎರಡು ತಂಡಗಳನ್ನು ರಚಿಸಿಕೊಂಡು ಬ್ಯಾನರ್‌ ತೆರವು ಕಾರ್ಯಾಚರಣೆ ನಡೆಸಿದರು. ಮುಖ್ಯವಾಗಿ ಕಂಕನಾಡಿ, ಜ್ಯೋತಿ, ಬಿಜೈ, ಆ್ಯಗ್ನೇಸ್‌, ಬೆಂದೂರವೆಲ್‌, ಪಂಪ್‌ ವೆಲ್‌, ನಂತೂರು, ಬಲ್ಮಠ ಮೊದಲಾದ ಪ್ರದೇಶಗಳಲ್ಲಿ ಬ್ಯಾನರ್‌ ತೆರವು ಕಾರ್ಯ ನಡೆಯಿತು.

ಬಸ್‌ ತಂಗುದಾಣದ ಸ್ವಚ್ಛತೆ
ಪ್ರಯಾಣಿಕರು ಪ್ರತಿನಿತ್ಯ ಉಪಯೋಗಿಸುವ ಕದ್ರಿ ಪೊಲೀಸ್‌ ಠಾಣಾ ಮುಂಭಾಗದ ಬಸ್‌ ತಂಗುದಾಣವನ್ನು ಈ ಹಿಂದೆ ಸ್ವಚ್ಛ ಮಂಗಳೂರಿನ ಕಾರ್ಯಕರ್ತರು ನವೀಕರಣ ಗೊಳಿಸಿ ದ್ದರು. ಅದೇ ತಂಗುದಾಣವನ್ನು ತೊಳೆದು ಸ್ವಚ್ಛಗೊಳಿಸಲಾಯಿತು. ಜತೆಗೆ ಅದರ ಸುತ್ತಮುತ್ತಲ ಪ್ರದೇಶ ವನ್ನೂ ಸ್ವತ್ಛಗೊಳಿಸಲಾಯಿತು. ಕಾರ್ಯ ಕರ್ತರಾದ ಗಣೇಶ್‌ ಪ್ರಸಾದ್‌ ಶೆಟ್ಟಿ, ಕೃಷ್ಣಪ್ರಸಾದ್‌ ಶೆಟ್ಟಿ, ಚೇತನಾ ಗಡಿಯಾರ್‌ ಪಾಲ್ಗೊಂಡಿದ್ದರು.

ಶ್ರೀಲತಾ ಉಳ್ಳಾಲ, ಉದಯ ಕೆ.ಪಿ., ಪಿ.ಎನ್‌.ಭಟ್‌, ಸಂದೀಪ ಕೋಡಿಕಲ್‌, ಸೌರಜ್‌ ಮಂಗಳೂರು, ಪ್ರೀತಮ್‌ ಮುಗಿಲ್‌, ಜಗನ್‌ ಕೋಡಿಕಲ್‌, ವಿಖ್ಯಾತ್‌ ಸವಿತಾ ಮರ್ನಾಡ, ಕೌಶಿಕ್‌ ಬೇಕಲ್‌, ಮಹಮದ್‌ ಆರೀಫ್‌ ಮತ್ತಿತರರು ಭಾಗವಹಿಸಿದ್ದರು. ಅಭಿಯಾನಕ್ಕೆ ಎಂಆರ್‌ ಪಿಎಲ್‌ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿದ್ದರು.

ಸ್ವಚ್ಛತಾ ಜಾಗೃತಿ
ಮ್ಯಾಪ್ಸ್‌ ಕಾಲೇಜಿನ ವಿದ್ಯಾರ್ಥಿಗಳು ಮಾಜಿ ಕಾರ್ಪೊರೇಟರ್‌ ಸುರೇಶ್‌ ಶೆಟ್ಟಿ ಅವರ ಜತೆಯಾಗಿ ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕದ್ರಿ ಉದ್ಯಾನವನದಲ್ಲಿದ್ದ ಸಾರ್ವಜನಿಕರನ್ನು ಭೇಟಿಯಾಗಿ ಕರಪತ್ರ ಹಂಚಿ, ಶುಚಿತ್ವದ ಮಹತ್ವ ತಿಳಿಸಿದರು. ಸ್ಥಳೀಯ ವರ್ತಕರನ್ನು ಸಂಪರ್ಕಿಸಿ ಕಸವನ್ನು ಬಿಸಾಡದಂತೆ ವಿನಂತಿಸಿದರು.

ಟಾಪ್ ನ್ಯೂಸ್

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

Jagan Mohan Reddy

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.