ಕಷ್ಟಗಳಿದ್ದರೂ ಸಾಧನೆಗೆ ಅಡ್ಡಿಯಿಲ್ಲ!
Team Udayavani, May 28, 2018, 11:10 AM IST
ಮಂಗಳೂರು : ಬಾಡಿಗೆ ಮನೆಯಲ್ಲಿ ವಾಸ. ಬಡತನದ ಬದುಕು. ತಾಯಿಯ ದುಡಿಮೆಯಲ್ಲಿ ಮನೆ ಖರ್ಚು ಸಾಗಬೇಕು. ಆದರೆ ಶ್ರಾವ್ಯಾಳ ಸಾಧನೆಗೆ ಇದ್ಯಾವುದೂ ಅಡ್ಡಿಯಾಗಲಿಲ್ಲ. ಎಸೆಸೆಲ್ಸಿಯಲ್ಲಿ 598 ಅಂಕ ಪಡೆದು ಸಾಧನೆ ಮಾಡಿದ್ದಾಳೆ ಈಕೆ.
ಕಿನ್ನಿಕಂಬಳ ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯಾ, ವಾಮಂಜೂರು ಪರಾರಿಯಲ್ಲಿ ತಾಯಿ ರಶ್ಮಿ (ಲೋಕೇಶ್ವರಿ) ಹಾಗೂ ತಂಗಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇವರು ಮೂಲತಃ ಸುಳ್ಯ ಎಲಿಮಲೆಯವರು, ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ. ತಾಯಿ ರಶ್ಮಿ (ದೂರವಾಣಿ 9964062682) ಗಂಜಿಮಠದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಖರ್ಚಿಗೆಂದು ಟೈಲರಿಂಗ್ ಕೂಡ ಮಾಡುತ್ತಾರೆ. ಇಬ್ಬರು ಮಕ್ಕಳ ಓದು ಸಹಿತ ಎಲ್ಲ ಖರ್ಚು ಅವರ ದುಡಿಮೆಯಲ್ಲೇ ಸಾಗಬೇಕು. ಬಡತನವು ಮಕ್ಕಳ ಓದಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ. ಈಗ ಶ್ರಾವ್ಯಾ ಶಾಲೆಗೆ ಪ್ರಥಮ ಸ್ಥಾನಿ.
ಐಎಎಸ್ ಕನಸು
ಮಗಳನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬುದು ಅಮ್ಮನ ಕನಸು. ಅದಕ್ಕಾಗಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಿರುವ ಶ್ರಾವ್ಯಾ ಈಗ ಬಲ್ಮಠ ಸರ್ವಜ್ಞ ಅಕಾಡೆಮಿಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ. ಆಕೆಯ ಬುದ್ಧಿಮತ್ತೆಯನ್ನು ನೋಡಿ ಅಕಾಡೆಮಿಯವರೂ ಸಂಪೂರ್ಣ ಉಚಿತ ತರಬೇತಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಎಲಕ್ಕೂ ಸೈ
ಪಠ್ಯೇತರ ಚಟುವಟಿಕೆಗಳಲ್ಲಿಯೂ ಶ್ರಾವ್ಯಾ ಎತ್ತಿದ ಕೈ. ಪ್ರಬಂಧ, ಭಾಷಣ, ಡ್ಯಾನ್ಸ್, ಹಾಡುಗಾರಿಕೆಯಲ್ಲಿ ಓದಿನಷ್ಟೇ ಆಸಕ್ತಿ. ಕಾರ್ಯಕ್ರಮ ನಿರೂಪಣೆಯಲ್ಲಿಯೂ ತೊಡಗಿಸಿಕೊಂಡಿದ್ದಾಳೆ.
ಅಮ್ಮನ ಆಸೆ
600ಕ್ಕೂ ಹೆಚ್ಚು ಅಂಕ ಬರುವ ಬಗ್ಗೆ ನಿರೀಕ್ಷೆ ಇತ್ತು. ಎರಡು ಅಂಕ ಕಡಿಮೆಯಾಯಿತು. ಪರವಾಗಿಲ್ಲ, ಮುಂದೆ ಅವಕಾಶವಿದೆ. ಅಮ್ಮನ ಕನಸಿನಂತೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆಯಿದೆ. ಅದಕ್ಕಾಗಿ ಈಗಿಂದಲೇ ತರಬೇತಿ ಪಡೆಯುತ್ತಿದ್ದೇನೆ. ನನ್ನ ಆಸಕ್ತಿಗೆ ಪೂರಕವಾಗಿ ಅಕಾಡೆಮಿಯವರು ತುಂಬಾ ಸಹಾಯ ಮಾಡುತ್ತಿದ್ದಾರೆ.
-ಶ್ರಾವ್ಯಾ, ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.