ಅಂಕ ಗಳಿಕೆಗೆ ಆರ್ಥಿಕತೆ ಅಡ್ಡಿಯಲ್ಲ
Team Udayavani, May 28, 2018, 11:19 AM IST
ಮಂಗಳೂರು: ತಂದೆ ಆಟೋ ಚಾಲಕ. ತಾಯಿ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಷ್ಟದ ನಡುವೆ ಬದುಕು. ಆದರೆ ಆಕೆಯ ವಿದ್ಯಾ ಸಾಧನೆಗೆ ಈ ಕಷ್ಟ ಯಾವ ಅಡ್ಡಿಯನ್ನೂ ಒಡ್ಡಿಲ್ಲ. ಎಸೆಸೆಲ್ಸಿಯಲ್ಲಿ 587 ಅಂಕ ಗಳಿಸುವ ಮೂಲಕ ಸಾಧಕಿಯಾಗಿದ್ದಾಳೆ ಶ್ವೇತಾ.
ಮೂಲ್ಕಿ ವೆಂಕಟರಮಣ ದೇವಸ್ಥಾನ ಬಳಿಯ ನಿವಾಸಿ ಶ್ವೇತಾ ಕೋಟ್ಯಾನ್ ಗೆ ಮುಂದೆ ವಾಣಿಜ್ಯ ವಿಭಾಗದಲ್ಲಿ ಓದುವ ಹಂಬಲ. ತಂದೆ ಸತೀಶ್ ಕೋಟ್ಯಾನ್ (ದೂರವಾಣಿ 9611355142) ಆಟೋ ಚಾಲಕರು, ತಾಯಿ ಪ್ರಮೀಳಾ ಬೀಡಿ ಕಟ್ಟುತ್ತಾರೆ. ಅಕ್ಕ ಸ್ವಾತಿ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸದೃಢವಾಗಿರದ ಈ ಕುಟುಂಬಕ್ಕೆ ತಂದೆ-ತಾಯಿಯ ದಿನದ ದುಡಿಮೆಯಲ್ಲಿ ಬದುಕು ಹಾಗೂ ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಸಾಗಬೇಕು. ಆದರೆ ಕಲಿಕೆಯ ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನು ಶ್ವೇತಾ ತೋರಿಸಿಕೊಟ್ಟಿದ್ದಾರೆ.
ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಶ್ರಾವ್ಯಾ ಗಣಿತ ಹೊರತುಪಡಿಸಿ ಉಳಿದ ಯಾವುದೇ ವಿಷಯಗಳಿಗೂ ಕೋಚಿಂಗ್ ಪಡೆದುಕೊಂಡಿಲ್ಲ.
ಹೆತ್ತವರ ಪ್ರೇರಣೆ
ತಂದೆ ತಾಯಿ ಕಷ್ಟ ಪಟ್ಟು ಕಲಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಹಾಗೆ ನಾನು ಕಲಿಯುತ್ತಿದ್ದೇನೆ. ಮುಂದೆ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡು ಆ ಕ್ಷೇತ್ರದಲ್ಲಿಯೇ ಮುಂದುವರಿಯಬೇಕೆಂದಿದ್ದೇನೆ.
– ಶ್ವೇತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.