ನಿಡ್ಪಳ್ಳಿ ಶಾಲೆ: ರಂಗ ಮಂದಿರ, ಆಟದ ಮೈದಾನ ನಿರ್ಮಿಸಿ
Team Udayavani, May 28, 2018, 12:50 PM IST
ನಿಡ್ಪಳ್ಳಿ : ಇಲ್ಲಿಯ ದ.ಕ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ ಶತಮಾನದ ಅಂಚಿನಲ್ಲಿದೆ. ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದಲ್ಲಿ ಹೆಚ್ಚು ಮಕ್ಕಳಿರುವ ಎರಡನೆ ಶಾಲೆ ಇದು. ಇಲ್ಲಿ ಶಾಲಾ ಕಟ್ಟಡದ ಅಥವಾ ಕೊಠಡಿಯ ಕೊರತೆಯೇನೂ ಇಲ್ಲ. ಕುಡಿಯುವ ನೀರು, ಅಕ್ಷರ ದಾಸೋಹ ಕಟ್ಟಡ, ಶೌಚಾಲಯ ಮೊದಲಾದ ಸೌಕರ್ಯಗಳೂ ಪರ್ಯಾಪ್ತವಾಗಿವೆ.
ಕೊಠಡಿ ದುರಸ್ತಿ
ಶಾಲೆಯ ಹಳೆಯ ಕಟ್ಟಡದ ಎರಡು ತರಗತಿ ಕೊಠಡಿಗಳ ಛಾವಣಿ ಶಿಥಿಲಗೊಂಡ ಕಾರಣ, ದುರಸ್ತಿಗಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ತಾ.ಪಂ. ಹಾಗೂ ಜಿ.ಪಂ.ಗೆ ಮನವರಿಕೆ ಮಾಡಲಾಗಿತ್ತು. ತಾ.ಪಂ. ಸದಸ್ಯ ಹರೀಶ್ ಬಿಜತ್ರೆ ಅವರು ಇದನ್ನು ಪರಿಶೀಲಿಸಿ, 2016-17ನೇ ಸಾಲಿನಲ್ಲಿ ಒಂದು ಕೊಠಡಿಯ ಮಾಡು ದುರಸ್ತಿಗೆ ಅನುದಾನ ಮಂಜೂರು ಮಾಡಿದರು. ಅದರಂತೆ, ದುರಸ್ತಿಯೂ ಆಗಿದೆ. ಇನ್ನೊಂದು ಕೊಠಡಿಯ ಛಾವಣಿ ಮಾಡು ಮತ್ತು ಎರಡು ಬಾಗಿಲುಗಳ ದುರಸ್ತಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು 2017-18ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಅನುದಾನ ಮಂಜೂರು ಮಾಡಿದರು. ಛಾವಣಿ ಹಾಗೂ ಬಾಗಿಲುಗಳ ದುರಸ್ತಿಗೆ ಸಹಕರಿಸಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷರು ತಿಳಿಸಿದ್ದಾರೆ.
ಸುಣ್ಣ-ಬಣ್ಣ ಆಗಲಿ
ಹಳೆಯ ಕಟ್ಟಡವನ್ನು ತೆಗೆದು 2006ರಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಉದ್ಘಾಟನೆಗೂ ಮೊದಲು ಸುಣ್ಣ-ಬಣ್ಣ
ಬಳಿಯಲಾಗಿತ್ತು. ಆಮೇಲೆ ಬಣ್ಣ ಮಾಸಿದ್ದು, ಹೊಸದಾಗಿ ಬಣ್ಣ ಬಳಿಯಲು ಇಲಾಖೆ ಅನುದಾನ ಮಂಜೂರು ಮಾಡಬೇಕಿದೆ. ವಾರ್ಷಿಕೋತ್ಸವ ಹಾಗೂ ಇತರ ಸಭಾ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆಯ ಅಗತ್ಯವಿದೆ. ಗ್ರಾಮದ ಕೇಂದ್ರ ಶಾಲೆಯಾದ ಕಾರಣ ಇಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ, ರಂಗ ಮಂದಿರ ನಿರ್ಮಾಣ ಮಾಡುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಹಳ್ಳಿ ಮಕ್ಕಳು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುವಂತಾಗಲು ಆಟದ ಮೈದಾನ, ಕ್ರೀಡೋಪಕರಣಗಳು, ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಈ ಬಗ್ಗೆ ಸರಕಾರ ಮುತುವರ್ಜಿ ವಹಿಸಿ, ಶಾಲೆಗೆ ಆಟದ ಮೈದಾನ ಒದಗಿಸಿಕೊಡಬೇಕು. ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಬೇಕು.
ಸಹಕಾರ ಅಗತ್ಯ
ಶಾಲೆ ಕಟ್ಟಡ ನಿರ್ಮಾಣ ಆದ ಮೇಲೆ ಸುಣ್ಣ – ಬಣ್ಣ ಬಳಿದಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಬೇಡಿಕೆ ಸಲ್ಲಿಸಲು ಎಸ್ಡಿಎಂಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದುದರಿಂದ ಇದಕ್ಕೆ ಜನಪ್ರತಿನಿಧಿಗಳ, ಇಲಾಖಾಧಿಕಾರಿಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
– ತೋಪಯ್ಯ ಕೆ., ಮುಖ್ಯ ಗುರುಗಳು
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.