ಪವಿತ್ರ ಸ್ನಾನಕ್ಕೆ ಚೀನ ಅಡ್ಡಿ : ಮಾನಸ ಸರೋವರ ಯಾತ್ರಿಕರ ಅಳಲು
Team Udayavani, May 28, 2018, 4:14 PM IST
ಹೊಸದಿಲ್ಲಿ : ”ಕೈಲಾಸ ಮಾನಸ ಸರೋವರದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ತಮಗೆ ಚೀನೀ ಅಧಿಕಾರಿಗಳು ಬಿಡಲಿಲ್ಲ” ಎಂದು ಹಿಂದೂ ಯಾತ್ರಿಕರು ದೂರಿದ್ದಾರೆ.
ಚೀನದ ನಾಥೂ ಲಾ ಪಾಸ್ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವುದಕ್ಕೆ ಈ ಬಾರಿ ಚೀನ ಸರಕಾರ ಸಮ್ಮತಿಸಿತ್ತು. ಇದಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟಿದ್ದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಕಳೆದ ಮೇ 8ರಂದು “ನಾಥೂ ಲಾ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಕ್ಕೆ ಚೀನ ಸರಕಾರ ಸಮ್ಮತಿಸಿದೆ’ ಎಂದು ಪ್ರಕಟಿಸಿದೆ.
ನಾಥೂ ಲಾ ಪಾಸ್ ಮೂಲಕ ಕೈಲಾಸ್ ಮಾನಸ ಸರೋವರ ಯಾತ್ರೆಯನ್ನು ಮೋಟಾರು ವಾಹನದಲ್ಲೇ ಕೈಗೊಳ್ಳಲು ಸಾಧ್ಯವಿರುವುದರಿಂದ ಈ ಮಾರ್ಗವು ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ.
ಆದರೆ ಈ ಮಾರ್ಗವಾಗಿ ಈ ಬಾರಿ ಕೈಲಾಸ ಮಾನಸ ಸರೋವರ ಪುಣ್ಯ ಕ್ಷೇತ್ರ ತಲುಪಿರುವ ಯಾತ್ರಿಕರಿಗೆ ಪವಿತ್ರ ಸ್ನಾನ ಕೈಗೊಳ್ಳಲು ಚೀನೀ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂಬ ದೂರು ಕಳವಳಕಾರಿಯಾಗಿದೆ.
ವರ್ಷಂಪ್ರತಿ ಮಾನಸ ಸರೋವರ ಯಾತ್ರೆಯನ್ನು ವಿದೇಶ ವ್ಯವಹಾರಗಳ ಸಚಿವಾಲಯ ಜೂನ್‌ನಿಂದ ಸೆಪ್ಟಂಬರ್ ವರೆಗಿನ ಅವಧಿಯಲ್ಲಿ ಚೀನ ಸರಕಾರದ ಸಹಯೋಗದಲ್ಲಿ ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂ ನ ನಾಥು ಲಾ ಪಾಸ್ ಮೂಲಕ ಕೈಗೊಳ್ಳುವುದಕ್ಕೆ ವ್ಯವಸ್ಥೆ ಮಾಡುತ್ತದೆ.
2015ರಲ್ಲಿ ಚೀನ ನಾಥು ಲಾ ಪಾಸ್ ಮಾರ್ಗವನ್ನು ತೆರೆದಿತ್ತು. ನಾಥು ಲಾ ಪಾಸ್ ಮೂಲಕವಾಗಿ ಬರುವ ಯಾತ್ರಿಕರನ್ನು ಚೀನದ ಸಾರಿಗೆ ವ್ಯವಸ್ಥೆ ಕೈಲಾಸ್ ಮಾನಸ ಸರೋವರಕ್ಕೆ ಒಯ್ಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.