ಸಾಲಿಗ್ರಾಮ ಡಂಪಿಂಗ್‌ ಯಾರ್ಡ್‌: ಇನ್ನೂ ಬಗೆಹರಿಯದ ಸಮಸ್ಯೆ


Team Udayavani, May 29, 2018, 6:10 AM IST

2405kota2e.jpg

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸರಿಯಾದ ಡಂಪಿಂಗ್‌ಯಾರ್ಡ್‌ ಇಲ್ಲದಿರುವುದರಿಂದ ಇಲ್ಲಿನ ಹಳೆಕೋಟೆ ಮೈದಾನದಲ್ಲಿ ತಾತ್ಕಾಲಿಕ ಡಂಪಿಂಗ್‌ಯಾರ್ಡ್‌ ನಿರ್ಮಿಸಲಾಗಿತ್ತು. ಆದರೆ ಆರೇಳು ತಿಂಗಳ ಹಿಂದೆ ಇದರ ಪಕ್ಕದಲ್ಲೇ ಕುಡಿಯುವ ನೀರಿನ ಬಾವಿ ನಿರ್ಮಿಸಿದ್ದು, ಮಳೆಗಾಲದಲ್ಲಿ ಕೊಳಚೆ ನೀರು ಬಾವಿ ಸೇರುವ ಆತಂಕ ಎದುರಾಗಿದೆ. 

ಸ್ಥಳೀಯರಿಗೆ ಸಮಸ್ಯೆ
ಹಳೆಕೋಟೆ ಮೈದಾನವು ಜನ ನಿಬಿಡ ಪ್ರದೇಶ ಹಾಗೂ ಕ್ರೀಡಾಂಗಣವಾಗಿದ್ದು ಸುತ್ತ 100ಕ್ಕೂ ಹೆಚ್ಚು ಮನೆಗಳಿದೆ ಹಾಗೂ ಎರಡು ಕಲ್ಯಾಣ ಮಂಟಪ, ಯಕ್ಷಗಾನ ಕಲಾಕೇಂದ್ರ ಕೂಡ ಇದೆ. ಇಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್‌ ಪಂದ್ಯಾಟಗಳು ಸಂಘಟಿತಗೊಳ್ಳುತ್ತದೆ ಹಾಗೂ ಪ್ರತಿ ನಿತ್ಯ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಾರೆ.  ಹೀಗಾಗಿ ಇಲ್ಲಿ ಕಸ ವಿಲೇವಾರಿ ಮಾಡಲು ಸ್ಥಳೀಯರು ಮೊದಲೇ ವಿರೋಧ ವ್ಯಕ್ತಪಡಿಸಿದ್ದರು. ಆಗ ತಾತ್ಕಾಲಿಕ ಡಂಪಿಂಗ್‌ಯಾರ್ಡ್‌ ಎಂದು ಮನವೊಲಿಸಲಾಗಿತ್ತು. ಆದರೆ ಒಂದೆರಡು ವರ್ಷವಾದರೂ ಬೇರೆ ವ್ಯವಸ್ಥೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.  

ಬಾವಿಗೆ ಕೊಳಚೆ ನೀರು! 
ಡಂಪಿಂಗ್‌ಯಾರ್ಡ್‌ನ ಐದಾರು ಅಡಿ ದೂರದಲ್ಲೇ  ಕುಡಿಯುವ ನೀರು ಸರಬರಾಜು ಮಾಡುವ ಸರಕಾರಿ ಬಾವಿ ಇದ್ದು ಸ್ಥಳೀಯ ಪಾರಂಪಳ್ಳಿ ವಾರ್ಡ್‌ನ 650 ಮನೆಗಳಿಗೆ ಇಲ್ಲಿನ ನೀರು ಸರಬರಾಜು ಆಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಡಂಪಿಂಗ್‌ಯಾರ್ಡ್‌ನಲ್ಲಿ ನಿಂತ ಕೊಳಚೆ ನೀರು  ಈ ಬಾವಿ ಸೇರುವ ಎಲ್ಲಾ ಸಾಧ್ಯತೆ ಇದೆ.

ಶಾಶ್ವತ ಪರಿಹಾರಕ್ಕೆ ಹಿನ್ನಡೆ
ಪ.ಪಂ. ವತಿಯಿಂದ ಈ ಹಿಂದೆ ಉಳೂ¤ರಿನಲ್ಲಿ ಜಾಗವೊಂದನ್ನು ಖರೀದಿಸಿ ಡಂಪಿಂಗ್‌ಯಾರ್ಡ್‌ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅನಂತರ  ಹಳೆಕೋಟೆ ಮೈದಾನದಲ್ಲಿ  ಕಸವನ್ನು ರಾಶಿ ಹಾಕಿ ಅಲ್ಲಿಂದ ಉಡುಪಿಯ ಡಂಪಿಂಗ್‌ಯಾರ್ಡ್‌ಗೆ ಸಾಗಿಸಲಾಗುತಿತ್ತು. ಇದೀಗ  ಆದಷ್ಟು ಶೀಘ್ರ ಈ ತಾತ್ಕಾಲಿಕ ಡಂಪಿಂಗ್‌ಯಾರ್ಡ್‌ ಸ್ಥಳಾಂತರಿಸಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಸ್ಥಳಾಂತರಿಸಿ
ಹಳೆಕೋಟೆಯ ಜನಬಿಡಿದ ಹಾಗೂ ಕ್ರೀಡಾಚಟುವಟಿಕೆಗಳು ನಡೆಯುವ ಸ್ಥಳವನ್ನು ಡಂಪಿಂಗ್‌ಯಾರ್ಡ್‌ಗೆ ಆಯ್ಕೆ ಮಾಡಿಕೊಂಡಿದ್ದು  ತೀರಾ ಅವೈಜ್ಞಾನಿಕ. ಇದೀಗ ಕುಡಿಯುವ ನೀರಿನ ಬಾವಿಯೊಂದನ್ನು ಇದರ ಪಕ್ಕದಲ್ಲೇ ನಿರ್ಮಿಸಿದ್ದು  ಈ ಬಾರಿ ಡಂಪಿಂಗ್‌ಯಾರ್ಡ್‌ನ ಕಲುಷಿತ ನೀರು ಬಾವಿ ಸೇರುವುದು ಖಂಡಿತ ಹಾಗೂ ಸ್ಥಳೀಯ ಪ್ರದೇಶದಲ್ಲೂ  ದುರ್ವಾಸನೆ ಹರಡುತ್ತಿದೆ.
– ರಾಮಚಂದ್ರ ಐತಾಳ ಗುಂಡ್ಮಿ, ಸ್ಥಳೀಯ ನಿವಾಸಿ

ಸೂಕ್ತ ಸ್ಥಳವಿಲ್ಲ   ಸ್ಥಳಾವಕಾಶವಿಲ್ಲದ  ಕಾರಣ ಈ ಹಿಂದೆ ಉಳೂ¤ರಿನಲ್ಲಿ ಜಾಗ ಖರೀದಿಸಿ ಡಂಪಿಂಗ್‌ಯಾರ್ಡ್‌ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ್ದರಿಂದ ತಾತ್ಕಾಲಿಕವಾಗಿ ಕಸ ರಾಶಿ ಹಾಕಲು ಹಳೇಕೋಟೆ ಮೈದಾನ ಬಳಸಿಕೊಂಡು ಅಲ್ಲಿಂದ ಉಡುಪಿ ಡಂಪಿಂಗ್‌ಯಾರ್ಡ್‌ ಗೆ ರವಾನಿಸಲಾಗುತ್ತಿದೆ.  ಈಗ ಇದದರಿಂದ ಕೂಡ ಸಮಸ್ಯೆ ಯಾಗುತ್ತಿದ್ದು ಕಸವನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ.
– ಶ್ರೀಪಾದ್‌ ಪುರೋಹಿತ್‌, 
ಮುಖ್ಯಾಧಿಕಾರಿಗಳು,ಸಾಲಿಗ್ರಾಮ ಪ.ಪಂ.

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.