ಕೃಷಿ ಭೂಮಿಗೆ ಹರಿಯುತ್ತಿಲ್ಲ ಹರಿಯಪ್ಪ ಕೆರೆಯ ನೀರು
Team Udayavani, May 29, 2018, 6:15 AM IST
ಅಜೆಕಾರು: ಹಿರ್ಗಾನ ಪಂಚಾಯತು ವ್ಯಾಪ್ತಿಯ ಪ್ರಾಚೀನ ಹರಿಯಪ್ಪ ಕೆರೆಯು ಸೂಕ್ತ ನಿರ್ವಹಣೆಯಿಲ್ಲದೆ ಹೂಳು ತುಂಬಿ ಮೈದಾನದಂತಾಗಿದೆ. ಹಿರ್ಗಾನ ಮೂರೂರಿನ ದುಗ್ಗಣ್ಣರಾಯ ವಠಾರದಲ್ಲಿ ಸುಮಾರು 1 ಎಕ್ರೆ ಜಾಗದಲ್ಲಿರುವ ಈ ಕೆರೆಯು ಶತಶತಮಾನಗಳಿಂದ ಸುತ್ತಲಿನ ಕೃಷಿ ಭೂಮಿಗೆ ನೀರು ಒದಗಿಸುತ್ತಿತ್ತು.
20 ಅಡಿ ಹೂಳು
ಕೆರೆಯು 25ರಿಂದ 30 ಅಡಿಗಳಷ್ಟು ಆಳ ಹೊಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದು ಇದೀಗ ಕೇವಲ 5 ಅಡಿಗಳಷ್ಟು ಮಾತ್ರ ಆಳ ಕಾಣುತ್ತಿದ್ದು ಉಳಿದ 20 ಅಡಿಗಳಷ್ಟು ಹೂಳಿನಿಂದ ತುಂಬಿ ಹೋಗಿದೆ. ಇದರಿಂದ ಕೆರೆಯಲ್ಲಿ ನೀರು ಹಿಡಿಯದಂತಾಗಿದ್ದು, ಕೃಷಿ, ನೀರಾವರಿ ಕೆಲಸಕ್ಕೆ ಬಾರದಂತಾಗಿದೆ.
1975ರ ವರೆಗೆ ಈ ಕೆರೆಯ ನೀರನ್ನೇ ಬಳಸಿ ನೆಲ್ಲಿಕಟ್ಟೆ, ಕಂಬÛಪಲ್ಕೆ, ರಾಜೀವನಗರ, ಬೆದ್ರ್ಮಾರ್ ಮುಂತಾದ ಪರಿಸರದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಕೆರೆಯಲ್ಲಿ ಹೂಳು ತುಂಬಿ ನೀರು ನಿಲ್ಲಲು ಅವಕಾಶವಿಲ್ಲದೆ ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿದು ಈಗ ಬೇಸಿಗೆಯಲ್ಲಿ ನೀರೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯಲ್ಲಿ ನೀರಿನಾಶ್ರಯ ಇಲ್ಲದೆ ಇರುವುದರಿಂದ ಕೃಷಿಗೆ ಬೇಕಾದ ನೀರಿನ ವ್ಯವಸ್ಥೆ ಇಲ್ಲದೆ ವರ್ಷಕ್ಕೆ 2 ಬೆಳೆ ಬೆಳೆಯುತ್ತಿದ್ದ ಭತ್ತದ ಗದ್ದೆಗಳು ಈಗ ಪಾಳುಬಿದ್ದಿವೆ.
ಕುಡಿಯುವ ನೀರಿಗೆ ಶಾಶ್ವತ ಪರಿಹಾರ
ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದಲ್ಲಿ ಹಿರ್ಗಾನ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಪಂಚಾಯತು ವ್ಯಾಪ್ತಿಯಲ್ಲಿ ಹೊಸದಾಗಿ ತೆರೆದ ಬಾವಿ, ಕೊಳವೆ ಬಾವಿ ನಿರ್ಮಾಣ ಮಾಡುವ ಬದಲಿಗೆ ಜಲಮೂಲವಿರುವ ಪ್ರಾಚೀನ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪಂಚಾಯತು ವ್ಯಾಪ್ತಿಗೆ ಬೇಕಾದಷ್ಟು ನೀರು ದೊರೆತು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ವಿಶೇಷ ಅನುದಾನ ಅಗತ್ಯ
ಹೂಳೆತ್ತಿ ಕೆರೆ ಅಭಿವೃದ್ಧಿಪಡಿಸಲು ಬಹಳಷ್ಟು ಅನುದಾನ ಬೇಕಾಗಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರ ವಿಶೇಷ ಅನುದಾನ ನೀಡಿದಲ್ಲಿ ಕೆರೆ ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರ ಹಾಗೂ ಸಂಸದರ ಗಮನಸೆಳೆಯಲಾಗುವುದು.
– ಸಂತೋಷ್ ಕುಮಾರ್ ಶೆಟ್ಟಿ, ಹಿರ್ಗಾನ ಗ್ರಾ.ಪಂ. ಅಧ್ಯಕ್ಷರು
ಪಾಳುಬಿದ್ದ ಕೃಷಿಭೂಮಿ
ಹರಿಯಪ್ಪ ಕೆರೆಯ ನೀರು ಕಾಲುವೆ ಮೂಲಕ ಕೃಷಿ ಭೂಮಿಗೆ ಹರಿದು ಸ್ಥಳೀಯರು ಭತ್ತದ ಬೆಳೆ ಬೆಳೆಯುತ್ತಿದ್ದರು. ಆದರೆ ಕೆರೆಯ ನಿರ್ವಹಣೆಯಿಲ್ಲದೆ ನೀರಿನಮಟ್ಟ ಕುಸಿದು ಕೃಷಿಭೂಮಿ ಪಾಳುಬಿದ್ದಿದೆ. ಕೆರೆ ಅಭಿವೃದ್ಧಿಗೊಂಡಲ್ಲಿ ಬೇಸಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗವಹುದು.
– ತಾರಾನಾಥ ಶೆಟ್ಟಿ, ಕೃಷಿಕರು
– ಜಗದೀಶ್ ರಾವ್ ಅಜೆಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.