ಎಚ್‌ಡಿಕೆ ಬಳಸ್ತಿರೋದು ಜನರ ಹಣ: ಸಿಟಿ.ರವಿ
Team Udayavani, May 29, 2018, 6:05 AM IST
ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಾವು ಖರ್ಚು ಮಾಡುತ್ತಿರುವುದು ಜನರ ತೆರಿಗೆ ಹಣ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ರಾಜ್ಯದ ಜನರ ಮುಲಾಜಿನಲ್ಲಿಲ್ಲ ಎನ್ನುವ ಇವರು ನಿತ್ಯದ ಸರಕಾರಿ ಖರ್ಚಿಗೆ ಖಜಾನೆಯಲ್ಲಿನ ಹಣ ಬಳಸುತ್ತಿರುವುದನ್ನು ಅರಿತು ಮಾತನಾಡಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಮಾತನಾಡಿ, ಜನ ನನಗೆ ಅಧಿಕಾರ ನೀಡಿಲ್ಲ, ಕಾಂಗ್ರೆಸ್ ಪಕ್ಷದವರಿಂದ ಅಧಿಕಾರ ಹಿಡಿದಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನರ ಋಣ ತಮ್ಮ ಮೇಲಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
ಆದರೆ, ಇವರ ನಿತ್ಯದ ಸರ್ಕಾರಿ ಖರ್ಚು ಜನರ ತೆರಿಗೆ ಹಣದ್ದು ಎಂಬುದನ್ನು ಮರೆಯಬಾರದು ಎಂದರು. ನೀವು
ಖರ್ಚು ಮಾಡುತ್ತಿರೋದು ಜನರ ತೆರಿಗೆ ಹಣವೇ ಹೊರತು, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ದೊಡ್ಡಗೌಡರ ಮನೆಯ ಹಣವಲ್ಲ ಎಂಬುದನ್ನು ಅರಿಯಬೇಕು. ನೀವು ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುತ್ತಿಲ್ಲ ಎಂಬುದಾದರೆ ನಿಮಗೆ ಜನರ ತೆರಿಗೆ ಹಣವನ್ನು ಬಳಸುವ ಹಕ್ಕೂ ಇಲ್ಲ ಎಂಬುದನ್ನು ಅರಿಯಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.