ಎಸಿಬಿ ರಚನೆ ಹೊಸ ಸರ್ಕಾರದ ನಿಲುವೇನು? ಹೈಕೋರ್ಟ್ ಪ್ರಶ್ನೆ
Team Udayavani, May 29, 2018, 6:15 AM IST
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಎಸಿಬಿ ರಚನೆ ರದ್ದು ಕೋರಿ ಸಮಾಜ ಪರಿವರ್ತನಾ ಸಮುದಾಯ ಸೇರಿ ಇನ್ನಿತರರು ಸಲ್ಲಿಸಿರುವ ಪಿಐಎಲ್
ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣದೀಕ್ಷಿತ್
ಅವರಿದ್ದ ವಿಭಾಗೀಯ ಪೀಠ, ಎಸಿಬಿಯನ್ನು ರಚನೆ ಮಾಡಿರುವುದು ಹಿಂದಿನ ಸರ್ಕಾರ.
ಇದೀಗ ನೂತನ ಸರ್ಕಾರ ರಚನೆಯಾಗಿದ್ದು, ಈ ವಿಚಾರದಲ್ಲಿ ನಿಲುವು ಏನೆಂಬುದು ಗೊತ್ತಾಗಬೇಕಿದೆ. ಹೀಗಾಗಿ, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರಿಗೆ ಸೂಚಿಸಿ ವಿಚಾರಣೆಯನ್ನು ಜೂ.1ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.