ಸಾಮಾಜಿಕ ಸ್ಪಂದನಕ್ಕೆ ಕರ್ಣಾಟಕ ಬ್ಯಾಂಕ್ ಸದಾ ಬದ್ಧ
Team Udayavani, May 29, 2018, 10:42 AM IST
ಸುರತ್ಕಲ್: ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ನೇತೃತ್ವದಲ್ಲಿ, ಶಾಲಾ ಆಡಳಿತ ಸಮಿತಿ, ದಾನಿಗಳ ಸಹಕಾರದೊಂದಿಗೆ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 15 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕವನ್ನು ಕರ್ಣಾಟಕ ಬ್ಯಾಂಕ್ ಸಿಇಒ ಎಂ.ರಾಘವೇಂದ್ರ ಭಟ್ ಸೋಮವಾರ ಉದ್ಘಾಟಿಸಿದರು.
ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ ಬ್ಯಾಂಕ್ ವತಿಯಿಂದ ಇಲ್ಲಿ ಸೋಲಾರ್ ಘಟಕ ನಿರ್ಮಾಣಕ್ಕೆ 7 ಲಕ್ಷ ರೂ. ಒದಗಿಸಲಾಗಿದೆ. ಚಿಕ್ಕಮಗಳೂರು ಸಹಿತ ವಿವಿಧೆಡೆ ವಿದ್ಯುತ್ ಸಂಪರ್ಕವಿಲ್ಲದ ಕಡೆ ಸೋಲಾರ್ ದೀಪದ ಸೌಲಭ್ಯ ನೀಡಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವು ನೀಡಿದ್ದೇವೆ ಎಂದರು. ಮಹಾಲಿಂಗೇಶ್ವರ ಶಾಲೆ ಕಳೆದ 13 ವರ್ಷಗಳಿಂದ ಸತತ ಶೇ. 100 ಸಾಧನೆಗೈಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಮಾತನಾಡಿ, ಈ ಸೋಲಾರ್ ಘಟಕ ಯೋಜನೆಯಿಂದ ಶಾಲೆಗೆ ವಾರ್ಷಿಕ 1.5 ಲ.ರೂ. ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ. ಯೋಜನೆಗೆ ಒಟ್ಟು 18 ಲಕ್ಷ ರೂ. ವ್ಯಯಿಸಲಾಗಿದೆ. ಕರ್ಣಾಟಕ ಬ್ಯಾಂಕ್ 7 ಲಕ್ಷ ರೂ ನೀಡಿದ್ದು, ಸರ್ವದಾನಿಗಳ ನೆರವಿನಿಂದ ಇದು ಸಾಧ್ಯವಾಗಿದೆ ಎಂದರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಡಾ| ಟಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್, ಸಂಚಾಲಕ ಸತೀಶ್ ರಾವ್ ಇಡ್ಯಾ, ಆರ್ಬಿ ಸೋಲಾರ್ ಸಂಸ್ಥೆಯ ಎಜಿಎಂ ಮಾಧವ ಭಂಡಾರಿ, ಶಾಲಾ ಉಪಾಧ್ಯಕ್ಷ ವಿಜಯ್ ಕುಮಾರ್ ಬಂಗೇರ, ಲಕ್ಷ್ಮಣ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ವಿಶ್ವನಾಥ ಶೆಟ್ಟಿ, ಬಿ.ಕೆ. ತಾರಾನಾಥ್, ಯಶವಂತ್ ಕರ್ಕೇರ, ಗುಣಶೇಖರ ಶೆಟ್ಟಿ, ಗಂಗಾಧರ್ ಕೆ., ಮೋಹಿನಿ ಪಿ. ಸಾಲ್ಯಾನ್, ಜ್ಯೋತಿ ರವಿಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ಸಂದ್ಯಾಯಶವಂತ್ ಶೆಟ್ಟಿ, ಮುಖ್ಯಶಿಕ್ಷಕಿಯರಾದ ತುಳಸಿ ಅರಿಗಾ, ನಾಗವೇಣಿ ಬಿ. ಉಪಸ್ಥಿತರಿದ್ದರು.
ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿದರು. ಪಿಟಿಎ ಕಾರ್ಯದರ್ಶಿ ಗಂಗಾಧರ ಕೆ. ವರದಿ ವಾಚಿಸಿದರು. ಜ್ಯೋತಿ ರವಿಕುಮಾರ್ ನಿರೂಪಿಸಿದರು. ನಾಗವೇಣಿ ಬಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.