ದೇವರು ಬಂದ ಹಾಗೆ…
Team Udayavani, May 29, 2018, 12:56 PM IST
ಬಾದಾಮಿಯಿಂದ ಬನಶಂಕರಿ ಮಾರ್ಗವಾಗಿ 13 ಕಿ.ಮೀ ಕ್ರಮಿಸಿದರೆ ಶಿವಯೋಗಿ ಮಂದಿರ ಸಿಗುತ್ತದೆ. ನಾನು ಒಮ್ಮೆ ಬಾದಾಮಿಯ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು, ನಂತರ ಶಿವಯೋಗಿ ಮಂದಿರದತ್ತ ಹೋಗಿದ್ದೆ. ಅಲ್ಲಿರುವ ಹಾನಗಲ್ ಶಿವಕುಮಾರ ಶಿವಯೋಗಿಗಳ ಗದ್ದುಗೆಗೆ ನಮಸ್ಕರಿಸಿ, ಅವರ ಜೀವನ ಚರಿತ್ರೆಯ ಕುರಿತು ಅಪರೂಪದ ಚಿತ್ರಗಳನ್ನು ನೋಡುತ್ತ, ಓದುತ್ತ ಸಮಯದ ಅರಿವಿಲ್ಲದೆ ಮೈಮರೆತಿದ್ದೆ.
ಎಷ್ಟೋ ಹೊತ್ತಿನ ನಂತರ, ಊರಿಗೆ ಮರಳಿ ಹೋಗಲು ತಡವಾಗುತ್ತದೆ ಎಂಬುದು ನೆನಪಾಯ್ತು.
ಗಡಿಬಿಡಿಯಿಂದಲೇ ಹೊರಡಲು ಸಿದ್ಧನಾದೆ. ಆದರೆ, ಅದಾಗಲೇ ಊಟದ ಸಮಯವಾಗಿದ್ದರಿಂದ ಅಲ್ಲಿದ್ದ ವ್ಯವಸ್ಥಾಪಕರು, ಒಳಗಡೆ ಯಾರೂ ಇಲ್ಲವೆಂದು ಭಾವಿಸಿ ಗಡಿಬಿಡಿಯಲ್ಲಿ ಸ್ಮಾರಕ ಭವನದ ಬಾಗಿಲಿಗೆ ಬೀಗ ಹಾಕಿ ಊಟಕ್ಕೆ ಹೊರಟುಹೋಗಿದ್ದರು. ನಾನು ಒಳಗಿಂದ ಬಾಗಿಲನ್ನು ಬಡಿದೆ, ಕೂಗಿದೆ, ಅರಚಿದೆ. ಯಾರೊಬ್ಬರ ಸುಳಿವೂ ಇಲ್ಲ. ಅÇÉೇ ಇದ್ದ ವ್ಯವಸ್ಥಾಪಕರ ಫೋನ್ ನಂಬರ್‌ಗೆ ಕರೆ ಮಾಡೋಣವೆಂದರೆ, ನೆಟ್‌ವರ್ಕ್ ಕೂಡ ಇಲ್ಲ. ಮೊದಲೇ ಬೇಸಿಗೆ. ಬಾಯಾರಿಕೆಯ ಜೊತೆಗೆ ಸ್ವಲ್ಪ ಭಯವೂ ಆಯ್ತು. ಕುಡಿಯೋಣವೆಂದರೆ ಹನಿ ನೀರೂ ಇಲ್ಲ. ಹೊಟ್ಟೆ ಬೇರೆ ಚುರುಗುಟ್ಟಲು ಶುರುವಾಯಿತು. ಕಾದು ಕಾದು ಸುಸ್ತಾಗಿ ಅಲ್ಲಿಯೇ ಕುಸಿದು ಕುಳಿತು ಬಿಟ್ಟೆ.
ಸಂಜೆಯ ಹೊತ್ತಾದರೂ ಯಾರೂ ಅತ್ತ ಸುಳಿಯದಿ¨ªಾಗ, ಪ್ರಯಾಸ ಪಟ್ಟು ಕೊನೆಗೆ ಕಿಟಕಿಯನ್ನೇರಿ ಇಣುಕಿದೆ.
ಅÇÉೊಬ್ಬ ಬಿಳಿ ಪಂಚೆಯನ್ನುಟ್ಟ, ಹಣೆಗೆ ವಿಭೂತಿ ಬಳಿದ, ಕೆಂಪು ವಸ್ತ್ರ ಹೊದ್ದಿದ್ದ ಬಾಲಕ ಕಂಡ. ಕೂಡಲೇ ಅವನನ್ನು ಕೂಗಿ, ಬಾಗಿಲು ತೆರೆಯುವುದಕ್ಕೆ ಸಹಾಯ ಮಾಡುವಂತೆ ಕೋರಿದೆ. ಕೂಡಲೇ ಓಡಿ ಹೋದ ಬಾಲಕ ಕೀ ತಂದು ಬೀಗ ತೆರೆದು, ಸಂಸ್ಕೃತ ಪಾಠಕ್ಕೆ ತಡವಾಗುತ್ತದೆ ಎಂದು ಓಡಿಹೋಗಿಬಿಟ್ಟ. ಅವನ ಹೆಸರನ್ನೂ ನಾನು ಕೇಳಲಾಗಲಿಲ್ಲ. ಊರಿಗೆ ತೆರಳಲು ತಡವಾಗುತ್ತದೆ ಎಂದು ಹೆಚ್ಚು ತಡ ಮಾಡದೆ ಅಲ್ಲಿಂದ ನಿರ್ಗಮಿಸಿದೆ.
ಪ್ರತಿ ಬಾರಿ ಶಿವಯೋಗ ಮಂದಿರಕ್ಕೆ ಹೋದಾಗಲೆಲ್ಲ ಆ ಘಟನೆ ಮತ್ತು ಆ ಹುಡುಗ ನೆನಪಾಗುತ್ತಾನೆ. ಆ ಬಾಲಕ ಮುಂದೆಂದೂ ನನಗೆ ಅಲ್ಲಿ ಕಾಣಿಸಲಿಲ್ಲ. ನಡೆದಿದ್ದನ್ನೆಲ್ಲ ನೆನಪು ಮಾಡಿಕೊಂಡಾಗ ಬಾಲಕನ ವೇಷದಲ್ಲಿ ಶಿವಕುಮಾರ ಶಿವಯೋಗಿಗಳೇ ಬಂದು ಬಾಗಿಲನ್ನು ತೆರೆದರೇನೋ ಎಂಬ ಭಾವನೆ ಮೂಡುತ್ತದೆ!
-ಪ್ರಶಾಂತ್ ಶಂಕ್ರಪ್ಪ ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.