ರಾಷ್ಟ್ರಕೂಟರ ಕಾಲದ ಸರಸ್ವತಿ ಕಲ್ಯಾಣಿಗೆ ಮರುಜೀವ
Team Udayavani, May 29, 2018, 1:15 PM IST
ಕಾಳಗಿ: ದೇಗುಲಗಳ ತವರೂರು ಎಂದೇ ಪ್ರಸಿದ್ಧಿಯಾದ ದಕ್ಷಿಣ ಕಾಶಿ ಪಟ್ಟಣದ ಸರಸ್ವತಿ ಕಲ್ಯಾಣಿಯಲ್ಲಿ ನೀರು ಜೀನುಗುತ್ತಿವೆ. ಕಲ್ಯಾಣಿ ಮರುಜೀವ ಪಡೆದಿರುವುದು ಪಟ್ಟಣದ ಜನರಲ್ಲಿ ಸಂತೋಷ ಮೂಡಿದೆ.
ರಾಜ್ಯದಲ್ಲಿಯೇ ಶೃಂಗೇರಿಯಲ್ಲಿ ಬಿಟ್ಟರೆ ಕಲ್ಯಾಣ ಕರ್ನಾಟಕ ಭಾಗದ ನೂತನ ತಾಲೂಕೂ ಕೇಂದ್ರ ಕಾಳಗಿ ಪಟ್ಟಣದಲ್ಲಿ ಸರಸ್ವತಿ ದೇವಸ್ಥಾನ ಇದೆ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಸರಸ್ವತಿ ದೇವಸ್ಥಾನ ವಿಶಾಲವಾದ ಮಂಟಪ, ಸುಂದರ ಮೂರ್ತಿ ಹಾಗೂ ಮುಂಭಾಗದಲ್ಲಿ ಚರ್ತುಮುಖ ಆಕಾರದಲ್ಲಿ ಕಲ್ಯಾಣಿ ಹೊಂದಿತ್ತು. ಪ್ರತಿದಿನ ಪೂಜೆಗೆ ಕಲ್ಯಾಣಿ ನೀರನ್ನೆ ಉಪಯೋಗಿಸಲಾಗುತ್ತಿತ್ತು. ಜನರು, ಜಾನುವಾರು, ಪ್ರಾಣಿಗಳು ಕೂಡ ಇದೇ ನೀರೇ ಕುಡಿಯಲು ಬಳಕೆಯಾಗುತ್ತಿತ್ತು. ಮಕ್ಕಳ ಪ್ರಥಮ ಅಕ್ಷರ ಅಭ್ಯಾಸವನ್ನು ಈ ದೇವಸ್ಥಾನದಲ್ಲಿಯೇ ಮಾಡಿಸುತ್ತಿದ್ದರು.
ಹರಿತವಾದ ಆಯುಧವನ್ನು ಈ ನೀರಿನಿಂದ ಒಮ್ಮೆ ತೊಳೆದರೆ ಬಹುದಿನಗಳ ವರೆಗೆ ಬಾಳಿಕೆ ಬರುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ.
ದೇಶ ಸ್ವತಂತ್ರ್ಯವಾದ ನಂತರ ರಜಾಕರು ಸರಸ್ವತಿ ದೇವಸ್ಥಾನ, ಮೂರ್ತಿ ಮುಖ ಹಾಗೂ ಕೈಯಲ್ಲಿ ಹಿಡಿದ ವೀಣೆ ಭಾಗ, ದೇವಸ್ಥಾನ ಮುಂದಿರುವ ಕಲ್ಯಾಣಿಯನ್ನೂ ನಾಶ ಮಾಡಿದರು. ಬರುಬರುತ್ತ ಸುತ್ತಮುತ್ತಲಿನ ಮನೆ ಜನರು ಕಚ್ಚಾವಸ್ತುಗಳನ್ನು ಇದರಲ್ಲಿಯೇ ಬಿಸಾಡಿದ್ದರಿಂದ ಕಲ್ಯಾಣಿ ಸಂಪೂರ್ಣವಾಗಿ ಅವನತಿಗೆ ತಲುಪಿತ್ತು. ನಂತರದ ದಿನಗಳಲ್ಲಿ ಪಟ್ಟಣ ಯುವಕರು ದೇವಸ್ಥಾನ ನಿರ್ಮಿಸಿ ಛಾವಣಿ ಹಾಕಿಸಿದ್ದಾರೆ.
ಕಲ್ಯಾಣಿಗೆ ಪುರ್ನಜೀವನ ಭಾಗ್ಯ: ಕಲಬುರಗಿ ಜಿಲ್ಲೆಯ ವಿವಿಧ ಪಟ್ಟಣಗಳ ಸಮಾನ ಮನಸ್ಕ ಯುವಕರ ತಂಡ ಒಮ್ಮೆ ಕಾಳಗಿ ಪಟ್ಟಣಕ್ಕೆ ದೇಗುಲಗಳ ವೀಕ್ಷಣೆಗೆ ಬಂದಾಗ ಇಲ್ಲಿನ ನೀರಿನ ಹರಿವು, ಪ್ರಾಚಿನ ದೇವಸ್ಥಾನ ನೋಡಿ ತುಂಬಾ ಖುಷಿ ಪಟ್ಟಿದ್ದರು. ಪಟ್ಟಣ ಹೃದಯ ಭಾಗದಲ್ಲಿರುವ ಸರಸ್ವತಿ ದೇವಸ್ಥಾನ ವೀಕ್ಷಿಸಿ ಹಾಳು ಬಿದ್ದ ಕಲ್ಯಾಣಿ ಸ್ವತ್ಛತೆ ಮಾಡಿ ಮೊದಲಿನ ರೂಪ ಕೊಡಲು ಡಾ| ನಾಗನಾಥ ಯಾದಗೀರಕರ್ ನೇತೃತ್ವದಲ್ಲಿ ತಂಡ ಸಿದ್ಧವಾಯಿತು. ಕಳೆದ ಮೂರು ತಿಂಗಳಿದ ಪ್ರತಿ ರವಿವಾರಕ್ಕೊಮ್ಮೆ ಪಟ್ಟಣಕ್ಕೆ ಆಗಮಿಸಿ ಕಲ್ಯಾಣಿ ಸ್ವತ್ಛತೆ ಮಾಡುತ್ತಿದ್ದರು. ಇದಕ್ಕೆ ಸ್ಥಳೀಯ ಯುವಕರೂ ಸಹಕಾರ ನೀಡಿದರು. ಬಿಸಿಲಿನ ಪ್ರಖರತೆ ಹೆಚ್ಚಾದಾಗ ರಾತ್ರಿ ಸಮಯದಲ್ಲಿಯೂ ಕೆಲಸ ಮಾಡುತ್ತಿದ್ದರು.
ಇದನ್ನು ನೋಡಿದ ಸ್ಥಳೀಯ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆ ಅಡಿ ಸುಮಾರು 80ರಿಂದ 100 ಜನರಿಗೆ ಕಳೆದ
ಹತ್ತು ದಿನಗಳಿಂದ ಕೆಲಸ ನೀಡಿದ್ದು, ನಿರಂತರವಾಗಿದೆ ನಡೆದಿದೆ. ಕಲ್ಯಾಣಿ ಒಂದು ಭಾಗದಲ್ಲಿ ನೀರು ಜೀನುಗುತ್ತಿದ್ದು, ಪಟ್ಟಣದ ಜನರಲ್ಲಿ ಖುಷಿ ತಂದಿದೆ. ಇನ್ನು ಕೆಳ ಭಾಗದಲ್ಲಿ ಹೂಳು ತುಂಬಿದ್ದು, ಸಂಪೂರ್ಣವಾಗಿ ತೆಗೆದರೆ ಕಲ್ಯಾಣಿ ನೀರಿನಿಂದ ತುಂಬುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಕಾಂತಿ ಹೇಳುತ್ತಾರೆ.
ಸರಸ್ವತಿ ದೇವಸ್ಥಾನ ರಾಜ್ಯದಲ್ಲಿ ಶೃಂಗೇರಿ ಬಿಟ್ಟರೆ ಕಾಳಗಿಯಲ್ಲಿದೆ. ಮಕ್ಕಳ ಅಕ್ಷರಾಭ್ಯಾಸಕ್ಕೆ ಸೂಕ್ತವಾಗಿದೆ.
ಪಟ್ಟಣದ ಯುವಕರೆಲ್ಲರು ಸೇರಿ ಸರಸ್ವತಿ ಮೂರ್ತಿ ಮರುಸ್ಥಾಪಿಸಿ ಕಾಪಾಡಿದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರೆಲ್ಲರು ಸರಸ್ವತಿ ದೇವಸ್ಥಾನಕ್ಕೆ ತಮ್ಮ ಮಕ್ಕಳ ಮೊಲದ ಅಕ್ಷರ ಅಭ್ಯಾಸಕ್ಕೆ ಬರುತ್ತಾರೆ. ಹನುಮಂತಪ್ಪ ಕಾಂತಿ,
ಸಾಮಾಜಿಕ ಕಾರ್ಯಕರ್ತ
ಕಳೆದ ಹತ್ತು ದಿನಗಳಿಂದ ಸರಸ್ವತಿ ಕಲ್ಯಾಣಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲಾಗುತ್ತಿದೆ. ಕಲ್ಯಾಣಿಯಲ್ಲಿನ ಹೂಳು ಎತ್ತಿ ನೀರು ಬರುವರೆಗೂ ಕಾರ್ಯ ನಡೆಯುತ್ತದೆ.
ಸಿದ್ದಣ್ಣ ಬರಗಾಲಿ,
ಕಾಳಗಿ: ಕಲ್ಯಾಣಿಯಲ್ಲಿ ಜೀನುಗಿದ ನೀರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾಳಗಿ
ಭೀಮರಾಯ ಕುಡ್ಡಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.