ಬೆರಳು ತುದಿಗೆ ಬಂತು ಡೇ ಪಾಸ್‌


Team Udayavani, May 29, 2018, 2:32 PM IST

beralu-tudi.jpg

ಬೆಂಗಳೂರು: ತಂತ್ರಜ್ಞಾನ ಅಳವಡಿಕೆ ಸೇರಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಗ ಮತ್ತೂಂದು ವಿನೂತನ ಪ್ರಯತ್ನದಿಂದ ಗಮನಸೆಳೆದಿದೆ. ಮಹತ್ವಾಕಾಂಕ್ಷಿ “ಡಿಜಿಟಲ್‌ ಟಿಕೆಟ್‌’ ವ್ಯವಸ್ಥೆಗೆ ಸೋಮವಾರ ನಾಂದಿಹಾಡುವ ಮೂಲಕ ಬಿಎಂಟಿಸಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. 

ಪ್ರಯಾಣಿಕರ ದಿನದ ಪಾಸು ಅನ್ನು ಮೊಬೈಲ್‌ ಮೂಲಕವೇ ಖರೀದಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದರೊಂದಿಗೆ ಈ ವಿನೂತನ ವ್ಯವಸ್ಥೆ  ಪರಿಚಯಿಸಿದ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಿದೆ.  

ಕಂಡಕ್ಟರ್‌ ದೃಢೀಕರಣ: ಕಾಡುಗೋಡಿ ಮಾರ್ಗದ (ಮಾರ್ಗ ಸಂಖ್ಯೆ 335) ವಜ್ರ ವೋಲ್ವೊ ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ದಿನದ ಪಾಸುಗಳನ್ನು ಡಿಜಿಟಲ್‌ ರೂಪದಲ್ಲಿ ನೀಡಲಾಗುತ್ತಿದೆ. ಅದರಂತೆ ಈ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು ದಿನದ ಪಾಸನ್ನು ಮೊಬೈಲ್‌ನಲ್ಲೇ ಖರೀದಿಸಿ, ಬಸ್‌ ನಿರ್ವಾಹಕರಿಂದ ದೃಢೀಕರಿಸಬಹುದು. ಇದಕ್ಕೆ “ನಮ್ಮ ಪಾಸು’ ಎಂದು ನಾಮಕರಣ ಮಾಡಲಾಗಿದೆ ಎಂದು ಬಿಎಂಟಿಸಿ ತಂತ್ರಜ್ಞಾನ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

ಪ್ರಯಾಣಿಕರು ಬಸ್‌ನಲ್ಲಿ ಕುಳಿತು ಗುರುತಿನಚೀಟಿ ತೋರಿಸಿ, ದಿನದ ಪಾಸು ತೆಗೆದುಕೊಳ್ಳುವ ಅಗತ್ಯ ಈಗಿಲ್ಲ. ಮನೆಯಲ್ಲೇ ಕುಳಿತು ಕೆಲವೇ ಕ್ಷಣಗಳಲ್ಲಿ ಪಾಸು ಖರೀದಿಸಬಹುದು. ಇದಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ- “ನಮ್ಮ ಆ್ಯಪ್‌’ ಲಿಂಕ್‌ ಕ್ಲಿಕ್‌ ಮಾಡಿ, ಅಲ್ಲಿ ತಮ್ಮ ಗುರುತಿನಚೀಟಿ ಒಂದರ ಸಂಖ್ಯೆ ನಮೂದಿಸಿ, ಮೊಬೈಲ್‌ ಸಂಖ್ಯೆ ಮತ್ತು ಪ್ರಯಾಣಿಕರ ಹೆಸರು ಟೈಪ್‌ ಮಾಡಿ ಹಣ ಪಾವತಿಸಿದರೆ ಸಾಕು. ತಕ್ಷಣ ಡಿಜಿಟಲ್‌ ಟಿಕೆಟ್‌ ಸೃಷ್ಟಿಯಾಗುತ್ತದೆ.

ಅದನ್ನು ಬಸ್‌ನ ನಿರ್ವಾಹಕನಿಗೆ ತೋರಿಸಿದರೆ, ಅವರು ಸಂಸ್ಥೆ ನೀಡಿದ ಗುರುತಿನ ಸಂಖ್ಯೆ ಹಾಕಿ, ದೃಢೀಕರಿಸುತ್ತಾರೆ. ಕ್ಷಣಾರ್ಧದಲ್ಲಿ ನಿರ್ವಾಹಕನಿಗೆ ಎಸ್‌ಎಂಎಸ್‌ ಬರುತ್ತದೆ. ತಪಾಸಣಾಧಿಕಾರಿಗಳಿಗೆ ಈ ಎಸ್‌ಎಂಎಸ್‌ ತೋರಿಸಿದರೆ ಸಾಕು ಎಂದು ಅವರು ವಿವರಿಸಿದರು. 

ಆಧಾರ್‌ಗೆ ಜೋಡಣೆ?: ಮೂರು ತಿಂಗಳು ಪ್ರಯೋಗದ ನಂತರ ಎಲ್ಲ ಕಡೆ ಸೇವೆ ವಿಸ್ತರಿಸಲಾಗುವುದು. ಅಷ್ಟೇ ಅಲ್ಲ ಡಿಜಿಟಲ್‌ ಪಾಸು ಪಡೆಯುವ ಹಂತಗಳನ್ನೂ ತಗ್ಗಿಸಲಿದ್ದು, ಕೇವಲ ಮೊಬೈಲ್‌ ನಂಬರ್‌ ನಮೂದಿಸಿ ಪಾಸು ಸೃಷ್ಟಿಸುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೊಬೈಲ್‌ ಸಂಖ್ಯೆಯೊಂದಿಗೆ ಆಧಾರ್‌ ಜೋಡಣೆ ಮಾಡಿದ ಮಾಹಿತಿ ನೀಡುವಂತೆ “ಭಾರತೀಯ ವಿಶೇಷ ಗುರುತಿನ ಸಂಖ್ಯೆ ಪ್ರಾಧಿಕಾರ’ಕ್ಕೆ ಮನವಿ ಮಾಡಲು ಚಿಂತನೆ ನಡೆದಿದೆ. ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು ತಂತ್ರಜ್ಞಾನಕ್ಕೆ ತೆರೆದುಕೊಂಡಂತಾಗುತ್ತದೆ. ಚಿಲ್ಲರೆ ಸಮಸ್ಯೆ ಮತ್ತು ಹಣದ ನಿರ್ವಹಣೆ ಸಮಸ್ಯೆ ಇರುವುದಿಲ್ಲ. ಪಾರದರ್ಶಕತೆ ಜತೆಗೆ ಇದೊಂದು ಪರಿಸರ ಸ್ನೇಹಿ ವ್ಯವಸ್ಥೆಯೂ ಹೌದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಮ್ಮ ಪಾಸಿಗೆ 10 ರೂ. ಕ್ಯಾಶ್‌ಬ್ಯಾಕ್‌!: ಪ್ರಾಯೋಗಿಕವಾಗಿ ಪರಿಚಯಿಸಲಾಗಿರುವ ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ “ನಮ್ಮ ಪಾಸು’ ಪಡೆದ ಪ್ರಯಾಣಿಕರ ಖಾತೆಗೆ 10 ರೂ. ಜಮೆ ಆಗಲಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರು ಐಐಎಂಬಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ Series-5 Labs ಸ್ಟಾರ್ಟ್‌ಅಪ್‌ ಕಂಪೆನಿ. ಇವರೊಂದಿಗೆ “ಫೋನ್‌ ಪೇ’ ಕಂಪೆನಿಯು ಒಡಂಬಡಿಕೆ ಮಾಡಿಕೊಂಡಿದ್ದು, ಪರೀಕ್ಷಾರ್ಥ ಅವಧಿ ಮುಗಿಯುವವರೆಗೂ ಪ್ರತಿ ಡಿಜಿಟಲ್‌ ಪಾಸಿಗೆ 10 ರೂ. ಕ್ಯಾಶ್‌ಬ್ಯಾಕ್‌ ನೀಡಲು ಮುಂದೆಬಂದಿದೆ. 

ಪಾಸ್‌ ಪಡೆಯಲು ಹೀಗೆ ಮಾಡಿ: ಪ್ರಯಾಣಿಕರು https://nammapass.series-5.com ಮೇಲೆ ಕ್ಲಿಕ್‌ ಮಾಡಬೇಕು. ತಕ್ಷಣ “ನಮ್ಮ ಪಾಸ್‌’ ಪುಟ ತೆರೆಯುತ್ತದೆ. ಅಲ್ಲಿ ಹೆಸರು ಮತ್ತು ಮೊಬೈಲ್‌ ಸಂಖ್ಯೆ ಟೈಪ್‌ ಮಾಡಬೇಕು. ನಂತರ ಮತದಾರರ ಗುರುತಿನಚೀಟಿ ಸಂಖ್ಯೆ, ಪಾನ್‌ ಸಂಖ್ಯೆ, ಆಧಾರ್‌ ಸಂಖ್ಯೆ ಅಥವಾ ಚಾಲನಾ ಪರವಾನಗಿ ಸಂಖ್ಯೆ ಇವುಗಳಲ್ಲಿ ಯಾವುದಾದರೂ ಒಂದನ್ನು ಕ್ಲಿಕ್‌ ಮಾಡಿ, ಆ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು. ಆಮೇಲೆ ಕೆಳಗಿರುವ “ಪೇ ನೌ’ ಮೇಲೆ ಕ್ಲಿಕ್‌ ಮಾಡಿ, ಹಣ ಪಾವತಿಸಿದರೆ ಪಾಸು ಲಭ್ಯ.

ನಿತ್ಯ 25 ಮರಗಳ ರಕ್ಷಣೆ!: ಬಿಎಂಟಿಸಿ ಸಂಪೂರ್ಣ ಕಾಗದರಹಿತ ಟಿಕೆಟ್‌ ವ್ಯವಸ್ಥೆಗೆ ತೆರೆದುಕೊಂಡರೆ, ನಿತ್ಯ 25 ಮರಗಳನ್ನು ರಕ್ಷಿಸಬಹುದು! ಹೌದು, ಪ್ರತಿ ದಿನ ಬಿಎಂಟಿಸಿಯಲ್ಲಿ 4.50 ದಶಲಕ್ಷ ಟಿಕೆಟ್‌ಗಳು ಮತ್ತು ಪಾಸುಗಳು ಮಾರಾಟ ಆಗುತ್ತವೆ. ಇದರಿಂದ “ಎ4′ ಗಾತ್ರದ 2,59,740 ಪೇಪರ್‌ಗಳು ಬೇಕಾಗುತ್ತದೆ. 10 ಸಾವಿರ ಎ4 ಗಾತ್ರದ ಪೇಪರ್‌ಗಳು ಒಂದು ಮರಕ್ಕೆ ಸಮ. ಅಂದರೆ, ನಿತ್ಯ 25 ಮರಗಳನ್ನು ಕಾಗದದ ಟಿಕೆಟ್‌ಗಳಿಗಾಗಿ ಕಡಿಯುವುದನ್ನು ತಪ್ಪಿಸಬಹುದು ಎಂದು ಅಂದಾಜಿಸಲಾಗಿದೆ. 

ಕಾಡುಗೋಡಿ ಮಾರ್ಗದಲ್ಲೇ ಯಾಕೆ?: ಮಾರ್ಗ ಸಂಖ್ಯೆ 335ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಸಂಚರಿಸುತ್ತಾರೆ. ಹಾಗಾಗಿ, ಆ ಮಾರ್ಗದಲ್ಲಿ ಡಿಜಿಟಲ್‌ ಮಾದರಿಯ ದಿನದ ಪಾಸು ಪರಿಚಯಿಸಲಾಗಿದೆ. ಇದರ ಜತೆ ಕಾಗದದ ಪಾಸುಗಳೂ ಪರ್ಯಾಯವಾಗಿ ಲಭ್ಯ ಇರುತ್ತವೆ. ಅಂದಹಾಗೆ, ನಿತ್ಯ ಬಿಎಂಟಿಸಿ ವ್ಯಾಪ್ತಿಯಲ್ಲಿ ದಿನದ ಪಾಸುಗಳಿಂದ ಅಂದಾಜು 90 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.