ಚೇತ್ರಿಗೆ 100ನೇ ಪಂದ್ಯದ ಸಂಭ್ರಮ
Team Udayavani, May 30, 2018, 6:00 AM IST
ಮುಂಬಯಿ: ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಕೂಟ ಜೂನ್ ಒಂದರಿಂದ ಇಲ್ಲಿನ ಮುಂಬಯಿ ಫುಟ್ಬಾಲ್ ಅರೆನಾದಲ್ಲಿ ಆರಂಭವಾಗಲಿದೆ. ಆದರೆ ಈ ಕೂಟ ಜಯಪ್ರಿಯತೆ ಪಡೆಯಲು ವಿಫಲವಾಗಿದೆ. ಫುಟ್ಬಾಲ್ ಅಭಿಮಾನಿಗಳ ಮನಸ್ಸು ಜೂನ್ 14ರಿಂದ ಆರಂಭವಾಗುವ ಫಿಫಾ ವಿಶ್ವಕಪ್ ಕಪ್ ಮೇಲೆ ಕೇಂದ್ರಿಕೃತವಾಗಿದೆ.
100 ಪಂದ್ಯ: ಭಾರತದ 2ನೇ ಆಟಗಾರ
ಇಂಟರ್ ಕಾಂಟಿನೆಂಟಲ್ ಕೂಟದಲ್ಲಿ ಜೂನ್ 4ರಂದು ಭಾರತವು ಕೀನ್ಯ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಸಾಧ್ಯವಾದಷ್ಟು ಪ್ರೇಕ್ಷಕರನ್ನು ಸೆಳೆಯಲು ಸಂಘಟಕರು ಯೋಜನೆ ಹಾಕಿಕೊಂಡಿದ್ದಾರೆ. ಯಾಕೆಂದರೆ ಈ ಪಂದ್ಯ ನಾಯಕ ಸುನೀಲ್ ಚೇತ್ರಿ ಪಾಲಿಗೆ 100ನೇ ಪಂದ್ಯವಾಗಿದೆ. ರಾಷ್ಟ್ರೀಯ ತಂಡದ ಪರ 100 ಪಂದ್ಯಗಳಲ್ಲಿ ಆಡಿದ ಭಾರತದ ಎರಡನೇ ಆಟಗಾರ ಇವರಾಗಿದ್ದಾರೆ. ಈ ಮೊದಲು ಭಾçಚುಂಗ್ ಭೂತಿಯ ಈ ಸಾಧನೆ ಮಾಡಿದ್ದರು. ಅವರು ದೇಶದ ಪರ 104 ಪಂದ್ಯಗಳನ್ನಾಡಿದ್ದರು.
2005ರ ಜೂನ್ 12ರಂದು ಪಾಕಿಸ್ಥಾನ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಆಡುವ ಮೂಲಕ ಫುಟ್ಬಾಲ್‌ಗೆ ಪಾದಾರ್ಪಣೆಗೈದಿದ್ದ 33ರ ಹರೆಯದ ಚೇತ್ರಿ ಇಷ್ಟರವರೆಗೆ 98 ಪಂದ್ಯಗಳನ್ನಾಡಿದ್ದಾರೆ. ಇಂಟರ್‌ಕಾಂಟಿನೆಂಟಲ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಚೈನೀಸ್ ತೈಪೆ ತಂಡವನ್ನು ಎದುರಿಸಲಿದ್ದು ಇದು ಚೇತ್ರಿಗೆ 99ನೇ ಪಂದ್ಯವಾಗಲಿದೆ.
ದಾಖಲೆಯ 56 ಗೋಲು
ಬೆಂಗಳೂರು ಎಫ್ಸಿ ಯ ನಾಯಕರೂ ಆಗಿರುವ ಚೇತ್ರಿ ಇಷ್ಟರವರೆಗೆ ದಾಖಲೆಯ 56 ಗೋಲು ಹೊಡೆದಿದ್ದಾರೆ. 2008ರ ಆಗಸ್ಟ್ 13ರಂದು ಎಎಫ್ಸಿ ಚಾಲೆಂಜ್ ಕಪ್‌ನ ಫೈನಲ್‌ನಲ್ಲಿ ತಜಿಕಿಸ್ಥಾನ ವಿರುದ್ಧ 4-1 ಗೋಲುಗಳಿಂದ ಗೆಲುವು ಸಾಧಿಸುವ ವೇಳೆ ಚೇತ್ರಿ ಹ್ಯಾಟ್ರಿಕ್ ಗೋಲು ಹೊಡೆದಿದ್ದರು.
ಸ್ಮರಣಿಕೆ ಸಾಧ್ಯತೆ
ಪಂದ್ಯ ಆರಂಭಕ್ಕೆ ಮೊದಲು ಚೇತ್ರಿ ಅವರಿಗೆ ಸ್ಮರಣಿಕೆಯೊಂದನ್ನು ನೀಡಲು ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಯೋಜನೆ ಮಾಡುತ್ತಿದೆ. ಭಾರತೀಯ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದ ಚೇತ್ರಿ ಜತೆ ಅಭಿಮಾನಿಗಳು ಸಂವಾದ ನಡೆಸಲು ಮುಂಬಯಿ ಫುಟ್ಬಾಲ್ ಅರೆನಾ ಆಲೋಚಿ ಸುತ್ತಿದೆ. ಎಐಎಫ್ಎಫ್ ಚೇತ್ರಿ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.