ಏರ್‌ಸೆಲ್: ಜೂ.5ರ ವರೆಗೆ ಚಿದಂಬರಂ ವಿರುದ್ದ ಬಲವಂತದ ಕ್ರಮ ಇಲ್ಲ
Team Udayavani, May 30, 2018, 11:24 AM IST
ಹೊಸದಿಲ್ಲಿ : ಏರ್‌ಸೆಲ್ ಮ್ಯಾಕ್ಸಿಸ್ ಹಣ ದುರುಪಯೋಗ ಕೇಸಿಗೆ ಸಂಬಂಧಿಸಿ ಸಂಭವನೀಯ ಬಂಧನದಿಂದ ತನಗೆ ರಕ್ಷಣೆ ನೀಡಬೇಕು ಎಂದು ಕೋರಿ ದಿಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರಿಗೆ ನ್ಯಾಯಾಲಯ ಜೂನ್ 5ರ ವರೆಗೆ ರಕ್ಷಣೆ ನೀಡಿದೆ.
ಚಿದಂಬರಂ ಅವರ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ನೊಟೀಸ್ ಜಾರಿ ಮಾಡಿದ್ದು ಜೂನ್ 5ರ ಒಳಗೆ ಉತ್ತರಿಸುವಂತೆ ಮತ್ತು ಅಲ್ಲಿಯ ವರೆಗೆ ಚಿದಂಬರಂ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದೆ.
2 ಜಿ ತರಂಗಾಂತರ ಕೇಸುಗಳಿಗೆ ಸಂಬಂಧಿಸಿದಂತೆ ಏರ್‌ಸೆಲ್ ಮ್ಯಾಕ್ಸಿಸ್ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಎರಡು ಕೇಸುಗಳಲ್ಲಿ ದಿಲ್ಲಿ ನ್ಯಾಯಾಲಯ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜುಲೈ 10ರ ವರೆಗಿನ ಅವಧಿಗೆ ಮಧ್ಯಾವಧಿ ರಕ್ಷಣೆಯನ್ನು ನೀಡಿತ್ತು.
ಏರ್‌ಸೆಲ್ ಕಂಪೆನಿಯಲ್ಲಿ ಹೂಡಿಕೆಗಾಗಿ ಗ್ಲೋಬಲ್ ಕಮ್ಯುನಿಕೇಶನ್ ಹೋಲ್ಡಿಂಗ್ ಸರ್ವಿಸಸ್ ಲಿಮಿಟೆಡ್‌ಗೆ ವಿದೇಶಿ ಹೂಡಿಕೆ ಪ್ರೋತ್ಸಾಹನ ಮಂಡಳಿಯ ಅನುಮತಿ ಮಂಜೂರಾತಿಗೆ ಸಂಬಂಧಪಟ್ಟಿರುವ ವಿಷಯ ಇದಾಗಿದೆ. 2015ರ ಸೆಪ್ಟಂಬರ್‌ನಲ್ಲಿ ಸಿಬಿಐ ಈ ವಿಷಯಕ್ಕೆ ಸಂಬಂಧಿಸಿ ತಾಜಾ ಸ್ಥಿತಿಗತಿ ವರದಿಯನ್ನು ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.