ಪತ್ನಿಯ ಶುಶ್ರೂಷೆಗೆ ಚಿತ್ರದುರ್ಗದಿಂದ ಬಂದಿದ್ದ ಪತಿ ನಾಪತ್ತೆ
Team Udayavani, May 31, 2018, 10:16 AM IST
ಮಂಗಳೂರು : ವೆನ್ಲಾಕ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಪತ್ನಿಯ ಯೋಗಕ್ಷೇಮ ನೋಡಿಕೊಳ್ಳಲು ಬಂದಿದ್ದ ಚಿತ್ರದುರ್ಗದ ನಿವಾಸಿ ಮೈಲಾರಪ್ಪ (45) ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈತನ ಪತ್ನಿ ಮೇ 15ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. 3 ದಿನಗಳ ಕಾಲ ಪತ್ನಿಯ ಯೋಗಕ್ಷೇಮ ನೋಡಿಕೊಂಡಿದ್ದ ಆತ ನಾಲ್ಕನೇ ದಿನ ತಾನು ಮಂಗಳೂರಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೋದವರು ಹಿಂದಿರುಗಿ ಬಂದಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಣ್ಣೆಕಪ್ಪು ಮೈಬಣ್ಣ ,ಸಾಧಾರಣ ಶರೀರ, ಕೋಲುಮುಖ ಹೊಂದಿದ್ದು 5 ಅಡಿ ಎತ್ತರವಿದ್ದಾರೆ. ಕಪ್ಪು ಪ್ಯಾಂಟ್, ಬಿಳಿ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.