ಇಬ್ಬರನ್ನು ರಕ್ಷಿಸಿದ ವಿದ್ಯಾರ್ಥಿ ಪ್ರಮಿತ್
Team Udayavani, May 31, 2018, 11:37 AM IST
ಸುರತ್ಕಲ್: ಕ್ಷಣಕ್ಷಣಕ್ಕೂ ಏರುತ್ತಿರುವ ನೀರಿನ ಮಟ್ಟ, ನೀರಿನ ಸೆಳೆತಕ್ಕೆ ಕೊಚ್ಚಿಹೋಗುತ್ತಿರುವ ಸಾಮಗ್ರಿಗಳು. ಇಂಥ ಪರಿಸ್ಥಿತಿಯಲ್ಲಿ ಮನೆಯೊಳಗೆ ತಲೆಮಟ್ಟಕ್ಕೆ ಮಳೆನೀರು ನುಗ್ಗಿ ಅಪಾಯದಲ್ಲಿದ್ದ ಇಬ್ಬರು ಹಿರಿಯರನ್ನು ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಜೀವದ ಹಂಗು ತೊರೆದು ಹಗ್ಗದ ಸಹಾಯದಿಂದ ರಕ್ಷಿಸಿದ್ದಾನೆ.
ಚೊಕ್ಕಬೆಟ್ಟುವಿನ ಅಗರಮೇಲು ಎಂಬಲ್ಲಿ ನಡೆದ ಘಟನೆ ಇದು, ವಿದ್ಯಾರ್ಥಿ ಪ್ರಮಿತ್. ಈತ ತಾನಿರುವ ವಸತಿ ಸಮುಚ್ಚಯದ ಎದುರು ತಗ್ಗಿನಲ್ಲಿರುವ ಮನೆಯ ಒಳಗೆ ನೀರು ನುಗ್ಗಿ ಪೂರ್ತಿ ಮುಳುಗಿರುವುದನ್ನು, ಹಿರಿಯ ದಂಪತಿಯಾದ ಸಿರಿಲ್ ಮತ್ತು ಕ್ರಿಸ್ಸಿ ಮುಳುಗುತ್ತಿರುವುದನ್ನು ಕಂಡು ಅವರನ್ನು ಹಗ್ಗದ ಸಹಾಯದೊಂದಿಗೆ ರಕ್ಷಿಸಿ ಶ್ಲಾಘನೆಗೆ ಪಾತ್ರನಾಗಿದ್ದಾನೆ. ತಾನು ನೀರಿನ ಸೆಳೆತಕ್ಕೆ ಒಳಗಾದರೂ ಧೃತಿಗೆಡದೆ ಪಾರಾಗಿದ್ದಾನೆ.
ಸೊತ್ತು ನೀರುಪಾಲು
ಈಗ ಎಲ್ಲವೂ ಇದ್ದು ಈಗ ಏನೂ ಇಲ್ಲದಂತಹ ಸ್ಥಿತಿ ಇಲ್ಲಿನ ನಾಗರಿಕರದು. ಮಂಗಳವಾರ ಮಳೆನೀರು ಏಕಾಏಕಿ ಪ್ರವಾಹವಾಗಿ ಹರಿದು ಬಂದಾಗ ಹಲವು ಮನೆಗಳ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳೆಲ್ಲವೂ ನೀರುಪಾಲಾದವು. ಸೊತ್ತುಗಳನ್ನು ರಕ್ಷಿಸುವ ಪ್ರಯತ್ನ ವ್ಯರ್ಥವಾಗಿ ಕೊನೆಗೆ ಜೀವರಕ್ಷಣೆಗಾಗಿ ಕಟ್ಟಡದ ಮೊದಲ ಮಹಡಿ, ಅಟ್ಟಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಎಲ್ಲೆಲ್ಲೂ ಕತ್ತಲೆ ಆವರಿಸಿತು. .
ಇವರ ಮನೆಯ ಎಲ್ಲವೂ ನೀರು ಪಾಲಾಗಿವೆ. ಸಮೀಪದ ಪ್ರವೀಣ್ ಪದಕಣ್ಣಾಯ ಅವರ ಮನೆಯ ಕಥೆಯೂ ಇದೇ. ಕೆಸರುಮಯವಾದ ಮನೆ ಸ್ವತ್ಛಗೊಳಿಸಲು ಹರಸಾಹಸ ಪಡುತ್ತಿರುವ ದೃಶ್ಯ ಈ ಬಡಾವಣೆಯ ಎಲ್ಲ ಮನೆಗಳಲ್ಲೂ ಕಂಡುಬಂತು.
ನೀರಿನ ಮಟ್ಟ ಏರಿಕೆ ರಕ್ಷಣೆಗೆ ತೊಡಕು
ನಮಗೆ ನೆರೆಯ ಸುದ್ದಿ ತಿಳಿದ ತತ್‌ಕ್ಷಣ ಸ್ಥಳೀಯರು ಹಾಗೂ ಪೊಲೀಸರ ಜತೆ ಸೇರಿ ಜನರನ್ನು ಸ್ಥಳಾಂತರಿಸಲು ಕಾರ್ಯಪ್ರವೃತ್ತರಾದೆವು. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರುತ್ತಿದ್ದುದರಿಂದ ತುರ್ತಾಗಿ ಬೇಕಾದ ದೋಣಿ, ಟ್ಯೂಬ್‌ಗಳು ಇಲ್ಲದಿದ್ದರೂ ಕಾರ್ಯಾಚರಣೆಗೆ ಇಳಿದೆವು. ನೆರೆಯ ಸೆಳೆತ ಇದ್ದುದರಿಂದ ಸಮಸ್ಯೆ ಎದುರಾಯಿತು.
- ಗುಣಶೇಖರ ಶೆಟ್ಟಿ, ಕಾರ್ಪೊರೇಟರ್
ಯಾರೂ ಬರಲಿಲ್ಲ: ಜೀವ ಉಳಿದದ್ದೇ ಹೆಚ್ಚು!
“ಉದಯವಾಣಿ’ಯೊಂದಿಗೆ ಮಾತನಾಡಿದ ಹಿರಿಯರಾದ ಸಿರಿಲ್, ರಕ್ಷಣೆಗಾಗಿ ಸತತ ವಾಗಿ ಕರೆ ಮಾಡಿ ದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕದಲ್ಲಿ ವಾಹನವಿಲ್ಲ ಎಂಬ ಸಬೂಬು ಸಿಕ್ಕಿತು, ತುರ್ತು ಕರೆ ಕೇಂದ್ರಗಳು ಸ್ಪಂದಿಸಲೇ ಇಲ್ಲ. ಸ್ಥಳೀಯ ಅಧಿಕಾರಿಗಳೂ ಕಂಡು ಬರಲಿಲ್ಲ. ನಮ್ಮನ್ನು ಒಬ್ಬ ವಿದ್ಯಾರ್ಥಿ ರಕ್ಷಿಸಬೇಕಾಯಿತು ಎಂದು ಕಣ್ಣೀರಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.