ಬಜಪೆ ಪರಿಸರದ ಮೂರು ರಸ್ತೆಗಳಲ್ಲಿ ವಾಹನ ಸಂಚಾರ ಅಪಾಯಕಾರಿ
Team Udayavani, May 31, 2018, 12:23 PM IST
ಬಜಪೆ : ಬಜಪೆ ಪರಿಸರದ ಮೂರು ರಸ್ತೆಗಳು ಮಂಗಳವಾರ ಬಿದ್ದ ಮಳೆಯಿಂದಾಗಿ ಮಣ್ಣು ಕೊರೆದು ಹೋಗಿ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿವೆ. ಮಳೆಯಿಂದಾಗಿ ಬಜಪೆ -ಎಂಆರ್ ಪಿಎಲ್-ಸುರತ್ಕಲ್ ರಸ್ತೆಯ ಧೂಮಾವತಿ ಧಾಮಬಳಿಯ ಕಿರು ಸೇತುವೆಯ ಮಣ್ಣು ಕೊರೆದು ಸೇತುವೆ ಬಿರುಕುಬಿಟ್ಟಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.
ಬಜಪೆ ತಾರಿ ಕಂಬ್ಳದಲ್ಲಿ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದಾಗಿ ಎಂಆರ್‌ಪಿಎಲ್ ಹಾಗೂ
ಸುರತ್ಕಲ್‌ಗೆ ಹೋಗುವ ಬಸ್‌ಗಳು ಪೆರ್ಮುದೆಯಾಗಿ ಚಲಿಸಿವೆ. ಇತರ ವಾಹನಗಳು ಪೊರ್ಕೋಡಿಯಾಗಿ ಸುರತ್ಕಲ್‌ಗೆ ಸಂಚಾರ ಮಾಡಿವೆ.ಬಜಪೆ -ಮರವೂರು-ಮಂಗಳೂರು ರಾಜ್ಯ ಹೆದ್ದಾರಿ 67ರ ಕರಂಬಾರಿನ ಕಾಮಜಲು ಪ್ರದೇಶದಲ್ಲಿ ಚರಂಡಿ ಸಮಸ್ಯೆಯಿಂದಾಗಿ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಂಡು ಇಕ್ಕೆಲದಲ್ಲಿ ಹರಿದು ಮಣ್ಣು ಕೊರೆದ ಕಾರಣ ಹೆದ್ದಾರಿ ಬದಿಯಲ್ಲಿ ಕಂದಕ ಸೃಷ್ಟಿಯಾಗಿದೆ.
ಇದರಿಂದಾಗಿ ಒಂದೇ ವಾಹನ ಚಲಿಸುವಂತಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬುಧವಾರ ಶಾಸಕ ಉಮಾನಾಥ ಕೋಟ್ಯಾನ್ ಅವರು ಭೇಟಿ ನೀಡಿ ಚರಂಡಿ ನಿರ್ಮಾಣಕ್ಕೆ ಸೂಚನೆ ನೀಡಿದ ಮೇಲೆ ಜೆಸಿಬಿ ಮೂಲಕ ಚರಂಡಿ ನಿರ್ಮಾಣದ ಜತೆಗೆ ಹೆದ್ದಾರಿ ಬದಿಯಲ್ಲಿ ಬಿದ್ದ ಕಂದಕವನ್ನು ಮಣ್ಣು ಹಾಕಿ ತುಂಬಿಸಲಾಯಿತು.
ಬಜಪೆ -ಹಳೆವಿಮಾನ ನಿಲ್ದಾಣ-ಉಣಿಲೆ-ಅದ್ಯಪಾಡಿ ರಸ್ತೆ
ಮಳೆಯಿಂದಾಗಿ ಕೊಳಂಬೆಯ ವಿಟ್ಲಬೆಟ್ಟು ದೇವಸ್ಥಾನದ ಬಳಿಯ ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿತ್ತು.
ಇದರಿಂದ ಬಸ್ ಸಂಚಾರ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮಂಗಳೂರು ವಿಮಾನ ನಿಲ್ದಾಣದ
ರನ್ ವೇ ನೀರು ಈ ಪ್ರದೇಶ ರಸ್ತೆಯಲ್ಲಿ ಸುರಿದ ಕಾರಣ ದೊಡ್ಡ ಕಂದಕ ಬೀಳಲು ಕಾರಣವಾಗಿದೆ. ಕಳೆದ ಸಾಲಿನಲ್ಲಿಯೂ ಇಲ್ಲಿ ಡಾಮಾರು ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿತ್ತು.
ತಗ್ಗು ಪ್ರದೇಶದ ಮನೆಗಳಿಗೆ ಹಾನಿ
ವಿಮಾನ ನಿಲ್ದಾಣದ ರನ್‌ವೇ ನೀರಿನ ರಭಸಕ್ಕೆ ಚರಂಡಿಗಳು ಕಂದಕವಾಗಿ ಪರಿವರ್ತನೆಗೊಂಡವು. ಮನೆಗಳಿಗೆ ಹೋಗುವ ರಸ್ತೆಯಲ್ಲಿ ಈ ನೀರು ಹರಿದು ತೋಡುಗಳಾದವು. ವಿದ್ಯುತ್ ಕಂಬಗಳು ಧರಶಾಯಿಯಾದವು. ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಹಾನಿಯುಂಟಾಯಿತು. ಮನೆ ಅಡಿಪಾಯ, ಗೋಡೆಗಳಲ್ಲಿ ಬಿರುಕು ಕಂಡುಬಂತು.
ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ| ಭರತ್ ಶೆಟ್ಟಿ ಭೇಟಿ ನೀಡಿದರು. ಕಂದಾವರ ಗಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಪಿಡಿಒ ರೋಹಿಣಿ, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಅಡಿಪಾಯದಲ್ಲಿ ಬಿರುಕು
ನೀರಿನ ರಭಸದಿಂದ ಮರವೊಂದು ವಿಟ್ಲಬೆಟ್ಟು ನಿವಾಸಿ ಶಿವರಾಮ್ ಕುಲಾಲ್ ಎಂಬವರ ಮನೆಗೆ ಬಿದ್ದು ಹಾನಿ ಉಂಟಾಯಿತು. ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ ಎಂಬವರ ಮನೆಯ ಅಡಿಪಾಯದಲ್ಲಿ ಬಿರುಕು ಬಿಟ್ಟಿದೆ. ತಾರಾನಾಥ ಪೂಜಾರಿ, ದೇವಪ್ಪ ಪೂಜಾರಿ, ಲೀಲಾ ಪೂಜಾರಿ ಎಂಬವರ ಕುಡಿಯುವ ನೀರಿನ ಬಾವಿಗೆ ಮಣ್ಣು ಬಿದ್ದು ತುಂಬಿ ಹೋಗಿದೆ.ಬಾಲಕೃಷ್ಣ ಭಂಡಾರಿಯವರ ಕೆರೆ ಹಾಗೂ ಗದ್ದೆಗಳು ಮಣ್ಣಿನಿಂದ ತುಂಬಿ ಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.