ಯಕ್ಷದೇಗುಲದಲ್ಲಿ ಉಚಿತ ಯಕ್ಷ ಶಿಕ್ಷಣ ಶಿಬಿರ 


Team Udayavani, Jun 1, 2018, 6:00 AM IST

z-1.jpg

ಪ್ರಸಂಗ,ಅರ್ಥಗಾರಿಕೆ,ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ ನೀಡಲಾಯಿತು 

 ಯಕ್ಷಗುರು ಮಹಾವೀರ ಪಾಂಡಿ ಅವರ ಯಕ್ಷದೇಗುಲ (ರಿ.) ಈ ಬಾರಿ ಹದಿನೈದು ದಿನಗಳ ಪರ್ಯಂತ ಉಚಿತ ಯಕ್ಷ ಶಿಕ್ಷಣದ ಶಿಬಿರ ನಡೆಸಿ ಯಶಸ್ಸು ಕಂಡಿದ್ದಾರೆ.  ಶಿಬಿರಕ್ಕೆ 87 ಮಕ್ಕಳು ನೋಂದಣಿ ಮಾಡಿಕೊಂಡಿದ್ದರು.ನಿರೀಕ್ಷೆಗಿಂತ ದುಪ್ಪಟ್ಟು ಮಂದಿ ಇರುವುದನ್ನು ಗಮನಿಸಿ ಕಿರಿಯ, ಹಿರಿಯ ಹಾಗೂ ಪ್ರೌಢ ವಿಭಾಗ ಎಂಬ ತಂಡಗಳನ್ನಾಗಿ ರೂಪಿಸುವುದು ಅನಿವಾರ್ಯವಾಯಿತು. 

ಶಿಬಿರದಲ್ಲಿ ಬರೀ ನಾಟ್ಯ ಹೇಳಿಕೊಟ್ಟಿಲ್ಲ. ಬದಲಾಗಿ, ಪ್ರಸಂಗ ಮಾಹಿತಿ, ಅರ್ಥಗಾರಿಕೆ, ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾಭಿರುಚಿ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ, ಪರಿಜ್ಞಾನವೊದಗಿಸಲಾಯಿತು.ಮಹೇಶ್‌ ಕನ್ಯಾಡಿ, ರವಿರಾಜ್‌ ಜೈನ್‌, ಚಿದಾ ನಂದ ಕುತ್ಲೂರು ಇವರ ಹಿಮ್ಮೇಳ ದೊಂದಿಗೆ ದಿವಾಣ ಶಿವಶಂಕರ ಭಟ್‌ ಪರಂಪರೆಯ ಪೂರ್ವರಂಗ , ಹರಿರಾಜ್‌ ಶೆಟ್ಟಿಗಾರ್‌ ಯೋಗದೊಂದಿಗೆ ಸಭಾ ಕ್ಲಾಸು, ತೆರೆಕ್ಲಾಸು, ದೀವಿತ್‌ ಎಸ್‌.ಕೆ. ಪೆರಾಡಿ, ಗಣೇಶ್‌ ಶೆಟ್ಟಿ ಸಾಣೂರು ಇವರು ಪರಂಪರೆಯ ಒಡ್ಡೋಲಗ, ನಾಟ್ಯ ಹೇಳಿಕೊಟ್ಟರು. 

 ಕಿನ್ನಿಗೋಳಿಯ ಶ್ರೀಧರ ಡಿ.ಎಸ್‌. , ಉಜಿರೆ ಅಶೋಕ ಭಟ್‌, ಕೆರೆಗದ್ದೆ ವೆಂಕಟರಮಣ ಭಟ್‌, ಗಾಳಿಮನೆ ವಿನಾಯಕ ಭಟ್‌ ಪ್ರಸಂಗ ಮಾಹಿತಿ, ಅರ್ಥಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಹೀಗೆಯೇ ಭಾಗವತ ರಾಮಕೃಷ್ಣ ಮಯ್ಯ (ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ), ಚಂದ್ರನಾಥ ಬಜಗೋಳಿ (ಅಭಿನಯ ಸಿದ್ದಾಂತ), ಎಂ. ನಾ. ಚಂಬಲ್ತಿಮಾರ್‌ (ಯಕ್ಷಗಾನ ಮತ್ತು ಮಾಧ್ಯಮ), ದೇವಾನಂದ ಭಟ್‌ (ಪಾತ್ರಗಳ ಮೌಲ್ಯ ವಿವೇಚನೆ), ಕಾರ್ಕಳದ ವಕೀಲ ಸುಗಂಧ ಕುಮಾರ್‌ (ಯಕ್ಷಗಾನ ಮತ್ತು ಕಾನೂನು), ಶಶಿಕಲಾ ಹೆಗ್ಡೆ ಕಾರ್ಕಳ, ಪೂರ್ಣಿಮಾ (ಯಕ್ಷಗಾನ ಮತ್ತು ಮಹಿಳೆಯರು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದದ ಮನೋಜ್‌ ಶೆಟ್ಟಿಗಾರ್‌ ಮೂರು ದಿನ ಇದ್ದು ಬಣ್ಣಗಾರಿಕೆ, ವೇಷಗಾರಿಕೆಯ ಬಗ್ಗೆ ಕಲಿಸಿಕೊಟ್ಟರು. ಹಿಮ್ಮೇಳದವರು (ದಿವಾಕರ ಆಚಾರ್ಯ, ಆನಂದ ಗುಡಿಗಾರ ಮತ್ತು ರವಿರಾಜ್‌ ಜೈನ್‌) ಇದ್ದು, ಯಾವುದೇ ಹೆಚ್ಚಿನ ತಯಾರಿ ಇಲ್ಲದೆ, ವೇಷ ಕಟ್ಟದೆ “ಸುದರ್ಶನ ವಿಜಯ’ ಯಕ್ಷಗಾನವನ್ನು (ಈ ಹಿಂದೆ ವೇಷ ಹಾಕಿ ಅನುಭವ ಇದ್ದ) ಶಿಬಿರಾರ್ಥಿಗಳು ಕೊನೆಯ ದಿನ ಪ್ರಸ್ತುತಪಡಿಸಿದರು. ಸ್ವಪರಿಚಯದಿಂದ ತೊಡಗಿ ತರಗತಿಯ ಪಾಠಗಳ ಕುರಿತಾಗಿ , ಯಾವುದೇ ಜಿಜ್ಞಾಸೆಯನ್ನು ಸ್ಪಷ್ಟ , ಸುಲಲಿತ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಿಸುವ ಧೈರ್ಯ, ಸಾಮರ್ಥ್ಯವನ್ನು ಉದ್ದೀಪಿಸುವಲ್ಲೂ ಮಹಾವೀರ ಪಾಂಡಿ ಬಹಳಷ್ಟು ಪರಿಶ್ರಮವಹಿಸಿದರು. ಪಾಂಡಿಯವರೊಂದಿಗೆ ಅಧ್ಯಕ್ಷ ಶ್ರೀಪತಿ ರಾವ್‌, ಕೋಶಾಧಿಕಾರಿ ಧರ್ಮರಾಜ ಕಂಬಳಿ ಇವರೇ ಮೊದಲಾದವರು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದ್ದರು.

ಧನಂಜಯ ಮೂಡಬಿದಿರೆ

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.