ಮೇಕಪ್ ಮಿಸ್ಟೇಕ್ಸ್
Team Udayavani, Jun 1, 2018, 6:00 AM IST
ವಿಶೇಷ ಸಂದರ್ಭಗಳಲ್ಲಿ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಮಹಿಳೆಯರು ಹೆಚ್ಚಿನ ಕಾಳಜಿ ಯಿಂದ ಮೇಕಪ್ ಧರಿಸಿಕೊಂಡು ಹೋಗುತ್ತಾರೆ. ಮಹಿಳೆಯರಿಗೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಬೆಟ್ಟದಷ್ಟಿರುತ್ತದೆ.ಅದಕ್ಕಾಗಿಅವರು ಎಲ್ಲಾ ಪ್ರಯತ್ನ ಮಾಡಿ ಇತರರಗಿಂತ ಸುಂದರವಾಗಿ ಕಾಣಲು ಕಸರತ್ತು ಮಾಡುತ್ತಾರೆ. ಕೆಲವರು ಮೇಕಪ್ ಮಾಡದೆಯೇ ಅಂದವಾಗಿ ಕಾಣುತ್ತಾರೆ. ಇನ್ನು ಕೆಲವರನ್ನು ಮೇಕಪ್ ಅಂದಗೊಳಿಸುತ್ತದೆ.
ಪ್ರಕೃತಿದತ್ತವಾದ ಅಂದವು ಒಬ್ಬರ ವ್ಯಕಿತ್ವವನ್ನು ಪ್ರತಿಬಿಂಬಿಸುತ್ತದೆ. ಆದರೂ ಬಹಳ ಜನರಿಗೆ ಮೇಕಪ್ ಮಾಡುವುದರಿಂದ ತಮ್ಮ ಅಂದವು ಹೆಚ್ಚುತ್ತದೆ ಎನ್ನುವ ಭಾವನೆ. ಹಾಗಾಗಿ ಸಣ್ಣ ಸಣ್ಣ ಸಮಾರಂಭಗಳಿಗೂ ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಹೋಗುವುದು ಸರ್ವೇಸಾಮಾನ್ಯ.
ಮೊದಲ ಸಲ ಮೇಕಪ್ ಮಾಡುವಾಗ ಅದು ಕುತೂಹಲವೆಂದೆನಿಸುತ್ತದೆ. ನಂತರ ಅದು ಅನಗತ್ಯ ಎಂದು ಕಾಣುವ ಸಾಧ್ಯತೆಯಿದೆ. ಮತ್ತೆ ಕೆಲವು ಸಲ ಮೇಕಪ್ ಹಾಸ್ಯಾಸ್ಪದವೂ ಆಗಬಹುದು. ತಮ್ಮ ಸೌಂದರ್ಯದ ಬಗ್ಗೆ ಅತ್ಯಂತ ಜಾಗೃತವಿರುವ ಮಹಿಳೆಯರು ಸರಿಯಾದ ರೀತಿಯಲ್ಲಿ ಮೇಕಪ್ ಬಳಸಿದರೆ ಸುಂದರವಾಗಿ ಕಾಣಿಸುತ್ತಾರೆ.
ಗಾಢವಾದ ಫೌಂಡೇಶನ್ ಬಳಸುವುದು
ಗಾಢವಾದ ಫೌಂಡೇಶನ್ ಬಳಸುವುದರಿಂದ ಮುಖದಲ್ಲಿನ ನೋಟ ಸರಿಯಾಗಿ ಕಾಣದೇ ಇರಬಹುದು. ಹೀಗಾಗಿ ಸ್ವಲ್ಪ$ ಪ್ರಮಾಣದಲ್ಲಿ ತೆಗೆದುಕೊಂಡು ನಯವಾಗಿ ಮುಖದ ಮೇಲೆ ಹಚ್ಚುವುದರಿಂದ ಸುಂದರವಾಗಿ ಮತ್ತು ಪರಿಪೂರ್ಣವಾಗಿ ಕಾಣಬಹುದು. ಸ್ಪಂಜನ್ನು ತೆಗೆದುಕೊಂಡು ಕೆಳಮುಖವಾಗಿ ನಿಧಾನವಾಗಿ ಒರೆಸಿಕೊಳ್ಳುವ ಮೂಲಕ ಜಾಸ್ತಿಯಾದ ಫೌಂಡೇಶನ್ ಪ್ರಮಾಣವನ್ನು ಕಡಿಮೆಗೊಳಿಸಬಹುದು.
ಜಾಸ್ತಿ ಐಶಾಡೋಗಳನ್ನು ಹಚ್ಚುವುದು
ಜಾಸ್ತಿ ಬಣ್ಣ ಹಚ್ಚುವುದರಿಂದ ನಗೆಪಾಟಲಿಗೆ ಗುರಿಯಾಗಬೇಕಾದಿತು. ಐ ಶಾಡೋಗಳನ್ನು ಹರಡಲು ಕೈ ಬೆರಳುಗಳನ್ನು ಬಳಸಬಾರದು ಬದಲಾಗಿ ಬ್ರಷ್ ಬಳಸಬೇಕು. ಬ್ರಷ್ ಬಳಸುವುದರಿಂದ ಮುಖಕ್ಕೆ ಪರಿಪೂರ್ಣವಾದ ನೋಟ ಬರುತ್ತದೆ. ಬಣ್ಣವನ್ನು ಹರಡುವಾಗ ಒಂದೇ ಜಾಗದಲ್ಲಿ ನಿಲ್ಲದಂತೆ ಎಲ್ಲಾಕಡೆ ಸರಿ ಸಮಾನವಾಗಿ ಹರಡುವಂತೆ ಮತ್ತು ಮುಖದ ಮೇಲೆ ಪಸರಿಸದಂತೆ ನೋಡಿಕೊಳ್ಳಿ.
ಅಪೂರ್ಣ ಲಿಪ್‌ಸ್ಟಿಕ್ ಬಳಕೆ
ತುಟಿಗೆ ಬಳಸುವ ಲಿಪ್‌ಸ್ಟಿಕ್ ಬಣ್ಣದ ಆಯ್ಕೆ ಮತ್ತು ಇದರ ತಪ್ಪಾದ ಬಳಕೆಯಿಂದ ಮೇಕಪ್ ಗಬ್ಬೆದ್ದು ಹೋಗುತ್ತದೆ. ನಿಮ್ಮ ಮುಖಕ್ಕೆ ಒಪ್ಪುವ ಲಿಪ್‌ಸ್ಟಿrಕ್ ಬಣ್ಣವನ್ನು ಅರಿತು ಬಳಸಿದರೆ ಒಳಿತು.ಅತಿಯಾದ ಗಾಢ ಬಣ್ಣಗಳನ್ನು ಬಳಸದೆ ಇರುವುದು ಉತ್ತಮ.
ಐ-ಲೈನರ್ ಬಳಕೆ
ಕಣ್ಣರೆಪ್ಪೆಗಳನ್ನು ಹೇಗಿದೆಯೋ ಹಾಗೆ ಬಿಟ್ಟು ಅವುಗಳಿಗೆ ಮೇಕಪ್ ಬಳಸದೆ ಇರುವುದು ಒಳ್ಳೆಯದು. ಆದರೂ ಮಹಿಳೆಯರು ಕಣ್ಣ ರೆಪ್ಪೆಗಳಿಗೆ ತೆಳುವಾದ ಐಶಾಡೊ ಹಚ್ಚಿ ಅದು ಗಾಢವಾಗಿ ತೋರುವಲ್ಲಿ ಹೆಚ್ಚಿನ ಒಲವು ತೋರಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಬಳಸಬೇಡಿ. ಸರಿಯಾದ ರೀತಿಯಲ್ಲಿ ಮಸ್ಕಾರವನ್ನು ಬಳಸಿ. ಜಾಸ್ತಿ ಪ್ರಮಾಣದಲ್ಲಿ ಕಣ್ಣಿಗೆ ಅಲಂಕಾರ ಮಾಡಿದಲ್ಲಿ ಮುಖದ ಸ್ವರೂಪವೇ ವಿಕಾರವಾಗಿ ಕಾಣಬಹುದು.ಆದುದರಿಂದ ಮೇಕಪ್ ಮಾಡುವಾಗ ಅದರಲ್ಲಾಗುವ ತಪ್ಪುಗಳನ್ನು ಪರಿಗಣಿಸಿ ಅತೀ ಜಾಗರೂಕತೆಯಿಂದ ಮೇಕಪ್ ಮಾಡಿ ಸುಂದರವಾಗಿ ಕಾಣಿಸಬಹುದು.
ಸುಲಭಾ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.